ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

East Zone vs South Zone: ದುಲೀಪ್‌ ಟ್ರೋಫಿ ಇತಿಹಾಸದಲ್ಲಿ ದೊಡ್ಡ ದಾಖಲೆ ಬರೆದ ಇಶಾನ್‌ ಕಿಶನ್‌!

ದಕ್ಷಿಣ ವಲಯ ಎದುರು ದುಲೀಪ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪೂರ್ವ ವಲಯ ಎದರು ದ್ವಿಶತಕ ಹಾಗೂ ಅರ್ಧಶತಕವನ್ನು ಬಾರಿದ್ದಾರೆ. ಆ ಮೂಲಕ ಈ ಟೂರ್ನಿಯ ಏಕೈಕ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವಿಕೆಟ್‌ ಕೀಪರ್‌-ಬ್ಯಾಟರ್‌ ಹಾಗೂ ಏಕೈಕ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಇಶಾನ್‌ ಕಿಶನ್‌ ಪ್ರಥಮ ಇನಿಂಗ್ಸ್‌ನಲ್ಲಿ 270 ರನ್‌ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 80 ರನ್‌ಗಳನ್ನು ದಾಖಲಿಸಿದ್ದರು.

‌ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ದೊಡ್ಡ ದಾಖಲೆ ಬರೆದ ಇಶಾನ್ ಕಿಶನ್‌.

ಚೆನ್ನೈ: ದಕ್ಷಿಣ ವಲಯ ವಿರುದ್ಧ ದುಲೀಪ್‌ ಟ್ರೋಫಿ (Duleep Trophy 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪೂರ್ವ ವಲಯ ನಾಯಕ ಇಶಾನ್‌ ಕಿಶನ್‌ (Ishan Kishan) ಅವರು ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ 270 ರನ್‌ಗಳು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 98 ಎಸೆತಗಳಲ್ಲಿ 80 ರನ್‌ಗಳನ್ನು ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಒಟ್ಟು 350 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಅದ್ಭುತ ಪ್ರದರ್ಶನದ ಮೂಲಕ ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವಿಕೆಟ್‌ ಕೀಪರ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ ಟೂರ್ನಿಯ ಇತಿಹಾಸದಲ್ಲಿ ಏಕೈಕ ಪಂದ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನೂ ಇಶಾನ್‌ ಕಿಶನ್‌ ಬರೆದಿದ್ದಾರೆ.

2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಈಸ್ಟ್‌ ಝೋನ್ ತಂಡವನ್ನು ಮುನ್ನಡೆಸುತ್ತಿರುವ ಜಾರ್ಖಂಡ್‌ನ ಎಡಗೈ ಬ್ಯಾಟರ್ ಇಶಾನ್ ಕಿಶನ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಒಟ್ಟು 350 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಒಂದೇ ದುಲೀಪ್ ಟ್ರೋಫಿ ಪಂದ್ಯದಲ್ಲಿ ಬ್ಯಾಟರ್‌ವೊಬ್ಬರು ಗಳಿಸಿದ ಗರಿಷ್ಠ ರನ್‌ಗಳ ದಾಖಲೆಯನ್ನು ಇಶಾನ್ ಕಿಶನ್ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ರಮಣ್ ಲಾಂಬಾ ಅವರ ಹೆಸರಿನಲ್ಲಿತ್ತು. ಇಶಾನ್ ಕಿಶನ್ ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 270 ರನ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 80 ರನ್ ಗಳಿಸಿದ್ದು, ಒಟ್ಟು 350 ರನ್‌ಗಳೊಂದಿಗೆ ರಮಣ್ ಲಾಂಬಾ ಅವರ 320 ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ.

Duleep Trophy Final: ಸೋಲಿನ ಸುಳಿಯಲ್ಲಿ ದಕ್ಷಿಣ ವಲಯ, ಪೂರ್ವ ವಲಯಕ್ಕೆ 584 ರನ್‌ ಮುನ್ನಡೆ!

ದುಲೀಪ್ ಟ್ರೋಫಿಯ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್‌

ಇಶಾನ್ ಕಿಶನ್ – 350 ರನ್ (270, 80)

ರಮಣ್ ಲಾಂಬಾ – 320 ರನ್ (320, DNB)

ಗಗನ್ ಖೋಡಾ – 300 ರನ್ (300, DNB)

ಲಾಲಚಂದ್ ರಜಪೂತ್ – 298 ರನ್ (23, 275)

ವೀರೇಂದ್ರ ಸೆಹ್ವಾಗ್ – 296 ರನ್ (274, 22)

1987ರ ಭಿಲಾಯಿಯಲ್ಲಿ ನಡೆದಿದ್ದ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ನಾರ್ಥ್‌ ಝೋನ್ ಪರ ರಮಣ್ ಲಾಂಬಾ, ವೆಸ್ಟ್‌ ಝೋನ್ ವಿರುದ್ಧದ ಪಂದ್ಯದಲ್ಲಿ 320 ರನ್ ಗಳಿಸಿದ್ದರು. ಮೊದಲ ಇನಿಂಗ್ಸ್‌ನಲ್ಲೇ 320 ರನ್ ಸಿಡಿಸಿದ್ದ ಲಾಂಬಾಗೆ, ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡುವ ಅವಕಾಶ ಸಿಗಲಿಲ್ಲ.

SA vs NAM: ಚೊಚ್ಚಲ ಏಕದಿನ ಪಂದ್ಯದಲ್ಲಿಯೇ 150 ರನ್‌ ಚಚ್ಚಿದ ಜೋರ್ಡನ್‌ ಹರ್ಮನ್!

ಗುರುವಾರ ಎರಡನೇ ಇನಿಂಗ್ಸ್‌ನಲ್ಲಿ ಕ್ರೀಸ್‌ಗೆ ಇಳಿದ ಇಶಾನ್ ಕಿಶನ್ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ ಮಿಂಚಿದರು. 2023ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಇಶಾನ್, ಶಿಖರ್ ಮೋಹನ್ ಅವರೊಂದಿಗೆ ಮೂರನೇ ವಿಕೆಟ್‌ಗೆ 170 ಎಸೆತಗಳಲ್ಲಿ 126 ರನ್‌ಗಳ ಜೊತೆಯಾಟವನ್ನಾಡಿದರು. ಇದೇ ವೇಳೆ, ಭಾನುವಾರ ನಡೆದ ಮೊದಲ ಇನಿಂಗ್ಸ್‌ನಲ್ಲಿ 85 ರನ್ ಗಳಿಸಿದ್ದ ಶಿಖರ್ ಮೋಹನ್, ಇದೀಗ ತಮ್ಮ ವೃತ್ತಿಜೀವನದ ಮೊದಲ ದುಲೀಪ್ ಟ್ರೋಫಿ ಪಂದ್ಯದಲ್ಲೇ ಎರಡನೇ ಇನಿಂಗ್ಸ್‌ನಲ್ಲಿ 52 ರನ್ ಗಳಿಸಿದರು.

ಇಶಾನ್ ಕಿಶನ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಈಸ್ಟ್‌ ಝೋನ್ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಇನ್ನೂ ಐದು ವಿಕೆಟ್‌ಗಳು ಬಾಕಿ ಇರುವಂತೆ ಈಸ್ಟ್‌ ಝೋನ್‌ನ ಮುನ್ನಡೆ 584 ರನ್‌ಗಳಿಗೆ ಏರಿಕೆಯಾಗಿದೆ. ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯದಲ್ಲಿ ಇನ್ನೂ ಒಂದು ದಿನದ ಆಟ ಬಾಕಿ ಇರುವುದರಿಂದ ಈಸ್ಟ್‌ ಝೋನ್ ಇದೀಗ ಪ್ರಶಸ್ತಿ ಗೆಲ್ಲುವ ಬಹುತೇಕ ಖಚಿತ ಸ್ಥಿತಿಯಲ್ಲಿದೆ. ಇಶಾನ್ ಕಿಶನ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಈ ಗೆಲುವಿನ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದೆ.