ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ತಾವು ಖರೀದಿಸಿದ ಮೊಟ್ಟ ಮೊದಲ ಕಾರು ಯಾವುದೆಂದು ರಿವೀಲ್‌ ಮಾಡಿದ ಶುಭಮನ್‌ ಗಿಲ್‌!

ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪರ ಆಡುತ್ತಿರುವ ಶುಭಮನ್‌ ಗಿಲ್‌, ತಮ್ಮ ನೆಚ್ಚಿನ ಕಾರು ಹಾಗೂ ತಾವು ಖರೀದಿಸಿದ ಮೊದಲ ಕಾರು ಯಾವುದೆಂದು ಬಹಿರಂಗಪಡಿಸಿದ್ದಾರೆ. ಆಪಲ್‌ ಮ್ಯೂಸಿಕ್‌ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಗಿಲ್‌ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ತಮ್ಮ ನೆಚ್ಚಿನ ಕಾರನ್ನು ಬಹಿರಂಗಪಡಿಸಿದ ಶುಭಮನ್‌ ಗಿಲ್‌.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭಾರತ ತಂಡದ ಪರ ಶುಭಮನ ಗಿಲ್‌ (Shubman Gill) ಆಡುತ್ತಿದ್ದಾರೆ. ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರಿಗೆ ಉಪ ನಾಯಕನಾಗಿ ಗಿಲ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಟೂರ್ನಿಯಲ್ಲಿ ಭಾರತ ತಂಡಕ್ಕೆ ಗಿಲ್‌ ಪ್ರಮುಖ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅಂದ ಹಾಗೆ ಆಪಲ್‌ ಮ್ಯೂಸಿಕ್‌ ಇತ್ತೀಚೆಗೆ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಶುಭಮನ್‌ ಗಿಲ್‌ ಮಾತನಾಡಿದ್ದಾರೆ. ಈ ವಿಡಿಯೊದಲ್ಲಿ ಭಾರತದ ಉಪ ನಾಯಕ ಹಲವು ಆಸಕ್ತದಾಯಕ ಸಂಗತಿಗಳನ್ನು ರಿವೀಲ್‌ ಮಾಡಿದ್ದಾರೆ. ಈ ವೇಳೆ ಅವರು ತಾವು ಖರೀದಿಸಿದ ಮೊದಲ ಕಾರು ಯಾವುದೆಂದು ಬಹಿರಂಗಪಡಿಸಿದ್ದಾರೆ.

ಆಪಲ್‌ ಮ್ಯೂಸಿಕ್‌ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಶುಭಮನ್‌ ಗಿಲ್‌ ಅವರಿಗೆ ತನ್ನ ಬಾಲ್ಯದ ನೆಚ್ಚಿನ ಹಾಡು ಯಾವುದೆಂದು ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು 2014ರಲ್ಲಿ ತಮಗೆ ಇಷ್ಟವಾಗಿದ್ದ ಹಾಡನ್ನು ಗಿಲ್‌ ಆಯ್ಕೆ ಮಾಡಿದ್ದಾರೆ. ಪಂಜಾಬಿ ಗಾಯಕ ಜೆಸ್ಸಿ ಗಿಲ್‌ ಅವರ ʻರೇಂಜ್‌ʼ ಹಾಡನ್ನು ಗಿಲ್‌ ಹೆಸರಿಸಿದ್ದಾರೆ. ಈ ಹಾಡನ್ನು ಕೇಳಿದರೆ, ನನಗೆ ಬಾಲ್ಯದ ಕ್ಷಣಗಳು ನೆನಪಾಗುತ್ತವೆ ಎಂದಿದ್ದಾರೆ. ರೇಂಜ್‌ ಹಾಡಿನಿಂದ ನನಗೆ ರೇಂಜ್‌ ರೋವರ್‌ ಕಾರು ಇಷ್ಟವಾಯಿತು. ನಂತರ ಇದು ನನ್ನ ನೆಚ್ಚಿನ ಕಾರಾಗಿ ಪರಿವರ್ತನೆಯಾಗಿದೆ. ಅದರಂತೆ ನಾನು ಖರೀದಿಸಿದ ಮೊದಲ ಕಾರು ಕೂಡ ಇದಾಗಿದೆ ಎಂದಿದ್ದಾರೆ.

Asia Cup 2025: ಪಾಕ್‌ ಪಂದ್ಯಕ್ಕೂ ಮುನ್ನ ಮಗನ ಬ್ಯಾಟಿಂಗ್ ಬಗ್ಗೆ ಅಭಿಷೇಕ್ ಶರ್ಮಾ ತಂದೆ ಪ್ರತಿಕ್ರಿಯೆ

"ನಾನು 13, 14ನೇ ವಯಸ್ಸಿನಲ್ಲಿದ್ದಾಗ ನಾನು ಪಂಜಾಬಿ ಗಾಯಕ ಜೆಸಿ ಗಿಲ್‌ ಅವರ ರೇಂಜ್‌ ಹಾಡನ್ನು ಕೇಳಿದ್ದೆ. ನಾನು ಕೇಳಿದ ಮೊದಲ ಹಾಡು ಕೂಡ ಇದಾಗಿದೆ. ಈ ಕಾರಣದಿಂದಲೇ ನಾನು ಈ ಹಾಡಕ್ಕೆ ಆಯ್ಕೆ ಮಾಡಿದ್ದೇನೆ," ಎಂದು ಆರಂಭಿಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ತಿಳಿಸಿದ್ದಾರೆ.

"ಈ ಹಾಡು ಹೆಚ್ಚಿನದಾಗಿ ರೇಂಜ್‌ ರೋವರ್‌ ಕಾರಿನ ಬಗ್ಗೆ ಇತ್ತು ಹಾಗೂ ಈ ಹಾಡಿನ ಕಾರಣ ಈ ಕಾರು ನನ್ನ ನೆಚ್ಚಿನದಾಯಿತು. ನಾನು ಭವಿಷ್ಯದಲ್ಲಿ ಕಾರು ತೆಗೆದುಕೊಂಡರೆ, ಮೊದಲನೇ ಕಾರು ರೇಂಜ್‌ ರೋವರ್‌ ಎಂದು ಅಂದೇ ನಿರ್ಧಾರ ಮಾಡಿದ್ದೆ. ಈ ಹಾಡಿನ ಕಾರಣ ರೇಂಜ್‌ ರೋವರ್‌ ನನ್ನ ನೆಚ್ಚಿನ ಕಾರಾಯಿತು. ಈ ಕಾರನ್ನು ನಾನು ತುಂಬಾ ಇಷ್ಟಪಡುತ್ತೇನೆ," ಎಂದು ಭಾರತ ಟೆಸ್ಟ್‌ ತಂಡದ ನಾಯಕ ಹೇಳಿದ್ದಾರೆ.



ಸೆಪ್ಟಂಬರ್‌ 14 ರಂದು ಪಾಕಿಸ್ತಾನ ಪಂದ್ಯ

ಸೆಪ್ಟಂಬರ್‌ 10 ರಂದು ನಡೆದಿದ್ದ ಯುಎಇ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಶುಭಮನ್‌ ಗಿಲ್‌ 9 ಎಸೆತಗಳಲ್ಲಿ ಅಜೇಯ 20 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡ 58 ರನ್‌ಗಳ ಗುರಿಯನ್ನು ಬಹುಬೇಗ ಮುಟ್ಟಿತ್ತು. ಇದೀಗ ಸೆಪ್ಟಂಬರ್‌ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಗಿಲ್‌ ಅತ್ಯಂತ ಪ್ರಮುಖ ಬ್ಯಾಟ್ಸ್‌ಮನ್‌ ಆಗಿದ್ದಾರೆ.