ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌RCB vs MI: ಬೆಥೆಲ್‌ ಔಟ್‌, ಜೋರ್ಡನ್‌ ಇನ್? ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

RCB Playing XI for MI Clash: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಮೇ 10 ರಂದು ಭಾನುವಾರ ರಾಯ್ಪುರದಲ್ಲಿ ನಡೆಯುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎರಡನೇ ಬಾರಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು.

ಮುಂಬೈ ಇಂಡಿಯನ್ಸ್‌ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

ರಾಯ್ಪುರ: ಗುಜರಾತ್‌ ಟೈಟನ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಕಳೆದ ಎರಡು ಪಂದ್ಯಗಳನ್ನು ಸೋತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಇದೀಗ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಮುಂದಿನ ಪಂದ್ಯವನ್ನು ಗೆದ್ದು ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದೆ. ಕಳೆದ ಎರಡು ಹಣಾಹಣಿಗಳಲ್ಲಿ ಸೋತಿರುವ ಕಾರಣ ಆರ್‌ಸಿಬಿ ತಂಡ, ಐದು ಚಾಂಪಿಯನ್ಸ್‌ ವಿರುದ್ಧದ ಹೈವೋಲ್ಟೇಜ್‌ ಕದನಕ್ಕೆ ತನ್ನ ಪ್ಲೇಯಿಂಗ್‌ XIನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಆರ್‌ಸಿಬಿ ತಂಡದ ಇನ್ನುಳಿದ ಎರಡು ತವರು ಪಂದ್ಯಗಳು ರಾಯ್ಪುರದ ಸಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದರ ಒಂದು ಪಂದ್ಯ ಇದೀಗ ಮುಂಬೈ ಇಂಡಿಯನ್ಸ್‌ ಎದುರು ನಡೆಯಲಿದೆ. ಇಲ್ಲಿಯವರೆಗೂ ಆರ್‌ಸಿಬಿ ತಂಡ ಆಡಿದ 10 ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ 12 ಅಂಕಗಳ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ಆರ್‌ಸಿಬಿ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳ ಮೂಲಕ ಲೀಗ್‌ ಹಂತವನ್ನು ಮುಗಿಸಬೇಕೆಂದರೆ, ಕೊನೆಯ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಅಗತ್ಯ. ಹಾಗಾಗಿ ಆರ್‌ಸಿಬಿ ಮುಂದಿನ ಪಂದ್ಯಗಳಲ್ಲಿ ಬಹಳ ಎಚ್ಚರಿಕೆಯಿಂದ ಆಡಬೇಕಾಗುತ್ತದೆ.

RCB vs MI: ಎರಡನೇ ತವರಿನಲ್ಲಿ ಆರ್‌ಸಿಬಿಗೆ ಮೊದಲ ಪಂದ್ಯ; ಮುಂಬೈ ಎದುರಾಳಿ

ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ

ಅಂದ ಹಾಗೆ ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಆರ್‌ಸಿಬಿ ಎರಡನೇ ಬಾರಿ ಎದುರಿಸುತ್ತಿದೆ. ಇದಕ್ಕೂ ಮುನ್ನ ಮೊದಲ ಬಾರಿ ಎದುರಿಸಿದ್ದ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ಸ್‌ ಅನ್ನು ಆರ್‌ಸಿಬಿ ಮಣಿಸಿತ್ತು. ಇದೀಗ ಅದೇ ಲಯವನ್ನು ಮುಂದುವರಿಸಲು ಬೆಂಗಳೂರು ತಂಡ ಎದುರು ನೋಡುತ್ತಿದೆ. ಅಂದ ಹಾಗೆ ಕಳೆದ ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಆರ್‌ಸಿಬಿ ಜೇಕಬ್‌ ಬೆಥೆಲ್‌ ಹಾಗೂ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಅವರನ್ನು ಕೈ ಬಿಟ್ಟು ಬೇರೆ ಆಟಗಾರರಿಗೆ ಪ್ಲೇಯಿಂಗ್‌ XIನಲ್ಲಿ ಅವಕಾಶ ಸಿಗಬಹುದು.



ಫಿಲ್‌ ಸಾಲ್ಟ್‌ ಅವರು ಗಾಯದ ಕಾರಣ ತವರಿಗೆ ಮರಳಿದ್ದಾರೆ. ಹಾಗಾಗಿ ಅವರ ಸ್ಥಾನದಲ್ಲಿ ಜೇಕಬ್‌ ಬೆಥೆಲ್‌ ಅವರು ವಿರಾಟ್‌ ಕೊಹ್ಲಿ ಜತೆ ಇನಿಂಗ್ಸ್‌ ಆರಂಭಿಸುತ್ತಿದ್ದಾರೆ. ಆದರೆ, ಇವರಿಂದ ಇನ್ನೂ ಹೇಳಿಕೊಳ್ಳುವಂಥ ಪ್ರದರ್ಶನವನ್ನು ಮೂಡಿಬಂದಿಲ್ಲ. ಹಾಗಾಗಿ ಅವರ ಸ್ಥಾನಕ್ಕೆ ಮತ್ತೊಬ್ಬ ವಿದೇಶಿ ಆಟಗಾರ ಜಾರ್ಡನ್‌ ಕಾಕ್ಸ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಇನ್ನು ವಿಕೆಟ್ ಕೀಪರ್-ಬ್ಯಾಟರ್‌ ಜತೇಶ್‌ ಶರ್ಮಾ ಅವರು ಕೂಡ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ವೆಂಕಟೇಶ್‌ ಅಯ್ಯರ್‌ಗೆ ಸ್ಥಾನ ನೀಡಬಹುದು. ವಿಕೆಟ್‌ ಕೀಪರ್‌ ಸ್ಥಾನವನ್ನು ಕಾಕ್ಸ್‌ಗೆ ನೀಡಬಹುದು.

ಫಿಲ್‌ ಸಾಲ್ಟ್‌ ಗೈರಲ್ಲಿ ಆರ್‌ಸಿಬಿಗೆ ಓಪನರ್‌ ಯಾರು? ಪರ್ಫೆಕ್ಟ್‌ ಪ್ಲೇಯರ್‌ ಕೊಟ್ಟ ಕ್ರಿಸ್‌ ಶ್ರೀಕಾಂತ್‌!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್‌ XI

  1. ಜಾರ್ಡನ್‌ ಕಾಕ್ಸ್‌/ಜೇಕಬ್‌ ಬೆಥೆಲ್‌ (ಆರಂಭಿಕ ಬ್ಯಾಟ್ಸ್‌ಮನ್‌)
  2. ವಿರಾಟ್‌ ಕೊಹ್ಲಿ (ಆರಂಭಿಕ ಬ್ಯಾಟ್ಸ್‌ಮನ್‌)
  3. ದೇವದತ್‌ ಪಡಿಕ್ಕಲ್‌ (ಬ್ಯಾಟ್ಸ್‌ಮನ್‌)
  4. ರಜತ್‌ ಪಾಟಿದಾರ್‌ (‌ನಾಯಕ, ಬ್ಯಾಟ್ಸ್‌ಮನ್)
  5. ವೆಂಕಟೇಶ ಅಯ್ಯರ್‌ (ಆಲ್‌ರೌಂಡರ್‌)
  6. ಟಿಮ್‌ ಡೇವಿಡ್‌ (ಆಲ್‌ರೌಂಡರ್‌)
  7. ಕೃಣಾಲ್‌ ಪಾಂಡ್ಯ (ಆಲ್‌ರೌಂಡರ್‌)
  8. ರೊಮ್ಯಾರಿ ಶೆಫರ್ಡ್‌ (ಆಲ್‌ರೌಂಡರ್‌)‌
  9. ಭುವನೇಶ್ವರ್‌ ಕುಮಾರ್‌ (ವೇಗದ ಬೌಲರ್)
  10. ಜಾಶ್‌ ಹೇಝಲ್‌ವುಡ್‌ (ವೇಗದ ಬೌಲರ್‌)
  11. ಸುಯಾಶ್‌ ಶರ್ಮಾ (ಸ್ಪಿನ್ನರ್‌)

ಇಂಪ್ಯಾಕ್ಟ್‌ ಪ್ಲೇಯರ್‌: ರಸಿಖ್‌ ದಾರ್‌ ಸಲಾಮ್‌