ಬರ್ಮಿಂಗ್‌ಹ್ಯಾಮ್: ಭಾರತ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಮಂಗಳವಾರ ಇಲ್ಲಿ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ (IND vs ENG) ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವ ಮೂಲಕ ಒಡಿಐ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳು, 200 ಟೆಸ್ಟ್ ವಿಕೆಟ್‌ಗಳು ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಹ್ಯಾರಿ ಬ್ರೂಕ್ ಅವರ ಈ ವಿಕೆಟ್ ಹಲವು ಕಾರಣಗಳಿಂದ ವಿಶೇಷ ಮಹತ್ವ ಪಡೆದಿದೆ. ಇದು ಇಂಗ್ಲೆಂಡ್ ನೆಲದಲ್ಲಿ ಜಸ್‌ಪ್ರೀತ್ ಬುಮ್ರಾ ಅವರ 31ನೇ ವಿಕೆಟ್ ಆಗಿದ್ದು, ಇಂಗ್ಲೆಂಡ್‌ನಲ್ಲಿ 30ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಐತಿಹಾಸಿಕ ಸಾಧನೆಗೆ ಅವರು ಪಾತ್ರರಾಗಿದ್ದಾರೆ. ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವ ಮೂಲಕ ಬುಮ್ರಾ ಈ ಮೈಲಿಗಲ್ಲು ತಲುಪಿದ್ದು, ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
IND vs ENG: 200ನೇ ಒಡಿಐ ಪಂದ್ಯವನ್ನು ಆಡಿ ಆಂಗ್ಲರ ಪರ ಇತಿಹಾಸ ಬರೆದ ಜೋಸ್ ಬಟ್ಲರ್!
ವೇಗವಾಗಿ 150 ವಿಕೆಟ್ ಕಿತ್ತ ಎರಡನೇ ವೇಗಿ ಬುಮ್ರಾ
ಜಸ್‌ಪ್ರೀತ್ ಬುಮ್ರಾ ಮತ್ತೊಂದು ಮಹತ್ವದ ಸಾಧನೆಗೂ ಪಾತ್ರರಾಗಿದ್ದಾರೆ. ಕೇವಲ 90 ಏಕದಿನ ಪಂದ್ಯಗಳಲ್ಲಿ 150 ವಿಕೆಟ್‌ಗಳ ಮೈಲಿಗಲ್ಲು ತಲುಪುವ ಮೂಲಕ, ಈ ಸಾಧನೆ ಮಾಡಿದ ಭಾರತದ ಎರಡನೇ ಅತಿ ವೇಗದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ್ ಶಮಿ ಅವರು 80 ಪಂದ್ಯಗಳಿಂದ ಈ ದಾಖಲೆ ಬರೆದಿದ್ದರು.
ಬುಮ್ರಾ ಈ ಪಂದ್ಯಕ್ಕೆ 121 ಟಿ20 ಅಂತಾರಾಷ್ಟ್ರೀಯ ವಿಕೆಟ್‌ಗಳು ಹಾಗೂ 234 ಟೆಸ್ಟ್ ವಿಕೆಟ್‌ಗಳೊಂದಿಗೆ ಕಣಕ್ಕಿಳಿದಿದ್ದರು. ಮೊದಲ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಆತಿಥೇಯ ತಂಡದ ನಾಯಕ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವ ಮೂಲಕ ಅವರು ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳ ಮಹತ್ವದ ಮೈಲಿಗಲ್ಲು ತಲುಪಿದರು.
IND vs ENG: ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ನಡುವೆ ಮುನಿಸು? ವಿಡಿಯೊ ವೈರಲ್
ವಿಶ್ವ ಕ್ರಿಕೆಟ್‌ನಲ್ಲಿ ಈ ಮೂರು ಮಾದರಿಗಳಲ್ಲೂ (ಟಿ20ಐ, ಏಕದಿನ ಹಾಗೂ ಟೆಸ್ಟ್) ಮಹತ್ವದ ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಇನ್ನಿಬ್ಬರು ಆಟಗಾರರು ಮಾತ್ರ ಇದ್ದಾರೆ. ನ್ಯೂಜಿಲೆಂಡ್‌ನ ಟಿಮ್ ಸೌಥಿ (ಟಿ20ಐನಲ್ಲಿ 164, ಏಕದಿನದಲ್ಲಿ 221 ಹಾಗೂ ಟೆಸ್ಟ್‌ನಲ್ಲಿ 391 ವಿಕೆಟ್‌ಗಳು) ಮತ್ತು ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ (ಟಿ20ಐನಲ್ಲಿ 149, ಏಕದಿನಕ್ರಿಕೆಟ್‌ನಲ್ಲಿ 317 ಹಾಗೂ ಟೆಸ್ಟ್‌ನಲ್ಲಿ 246 ವಿಕೆಟ್‌ಗಳು) ಈ ಸಾಧನೆ ಮಾಡಿದವರಾಗಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದದ್ದ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಬಳಿಕ ಬುಮ್ರಾ ಯಾವುದೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಈ ಮಾದರಿಯಲ್ಲಿ ಭಾರತ ತಂಡಕ್ಕೆ ಅವರ ಅನುಪಸ್ಥಿತಿ ದೊಡ್ಡ ಕೊರತೆಯಾಗಿತ್ತು. ಆದರೆ ಆಟಗಾರರ ಕೆಲಸದ ಒತ್ತಡ ನಿರ್ವಹಣೆಯ ಭಾಗವಾಗಿ ಅವರನ್ನು ಏಕದಿನ ಕ್ರಿಕೆಟ್‌ನಿಂದ ದೂರ ಇರಿಸುವ ಅನಿವಾರ್ಯತೆ ಎದುರಾಗಿತ್ತು.
ಆಂಡಿ ಫ್ಲವರ್ ಆರ್‌ಸಿಬಿ ತಂಡವನ್ನು ತೊರೆದು ಇಂಗ್ಲೆಂಡ್‌ಗೆ ಕೋಚ್ ಆಗ್ತಾರಾ? ಸ್ಪಷ್ಟನೆ ನೀಡಿದ ದಿನೇಶ್ ಕಾರ್ತಿಕ್!
ಇದೀಗ ಮುಂದಿನ ಏಕದಿನ ವಿಶ್ವಕಪ್ ಟೂರ್ನಿಗೆ ಕೇವಲ 15 ತಿಂಗಳುಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಭಾರತ ತಂಡ ಬುಮ್ರಾ ಅವರನ್ನು ಮತ್ತೆ ಏಕದಿನ ಕ್ರಿಕೆಟ್‌ಗೆ ಕರೆತರುತ್ತಿದೆ. ಎಜ್‌ಬಾಸ್ಟನ್‌ನಲ್ಲಿ ಅವರು ನೀಡಿದ ಬೌಲಿಂಗ್ ಪ್ರದರ್ಶನ, ಹಲವು ವರ್ಷಗಳ ಬಳಿಕ ಆಡುತ್ತಿರುವ ಮಾದರಿಯಲ್ಲೂ ತಕ್ಷಣವೇ ಪ್ರಭಾವ ಬೀರುವ ಅವರ ಅಸಾಧಾರಣ ಕೌಶಲವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.