ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 2026ರ (IPL 2026) ಸಾಲಿನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಆಡಿದ ಐದು ಪಂದ್ಯಗಳಲ್ಲಿ ಆರಂಭಿಕ ಹಣಾಹಣಿಯಲ್ಲಿ ಗೆದ್ದಿದ್ದು ಬಿಟ್ಟರೆ ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಅಂಕಪಟ್ದಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಇದರ ನಡುವೆ ಅಚ್ಚರಿಯ ಸಂಗತಿ ಏನೆಂದರೆ ಮುಂಬೈ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಇನ್ನೂ ಒಂದೇ ಒಂದು ವಿಕೆಟ್ ಪಡೆದಿಲ್ಲ. ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರು 41 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರತಿಕ್ರಿಯೆ ನೀಡಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಅವರ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆತಂಕ ವ್ಯಕ್ತಪಡಿಸಿದ್ದು, ನಿಧಾನಗತಿಯ ಎಸೆತಗಳ ಲೆನ್ತ್‌ನಲ್ಲಿ ಬದಲಾವಣೆ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಬುಮ್ರಾ ಸದ್ಯ ಸ್ಲೋವರ್ ಡೆಲಿವರಿಗಳನ್ನು ಹೆಚ್ಚು ಶಾರ್ಟ್ ಲೆನ್ತ್‌ನಲ್ಲಿ ಹಾಕುತ್ತಿದ್ದಾರೆ ಮತ್ತು ನಿರಂತರವಾಗಿ ಹೆಚ್ಚಿನ ವೇಗದಲ್ಲಿ ಅವರಿಂದ ಬೌಲ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಜಸ್‌ಪ್ರೀತ್ ಬುಮ್ರಾರನ್ನು ಹಿಂದಿಕ್ಕಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾದ ಸಂಜು ಸ್ಯಾಮ್ಸನ್!
“ಬುಮ್ರಾ ವಿಕೆಟ್ ಪಡೆಯದೆ ಇರುವುದು ತಂಡಕ್ಕೆ ಸಮಸ್ಯೆಯಾಗಿದೆ. ಅವರು ಹೆಚ್ಚಿನ ವೇಗದಲ್ಲಿ ಬೌಲ್ ಮಾಡುತ್ತಿಲ್ಲ, ಜೊತೆಗೆ ಸ್ಲೋವರ್ ಬಾಲ್‌ಗಳನ್ನು ಶಾರ್ಟ್ ಹಾಕುತ್ತಿದ್ದಾರೆ. ಅವರು ಬಾಲ್ ಅನ್ನು ಸ್ವಲ್ಪ ಮುಂದೆ (ಫುಲ್ಲರ್ ಲೆನ್ತ್) ಹಾಕಬೇಕು. ಅವರಿಗೆ ಯಾವುದೇ ಗಾಯ ಇರುವಂತೆ ಕಾಣುತ್ತಿಲ್ಲ. ಆದರೆ ಈ ಎರಡು ಅಂಶಗಳು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿವೆ. ಸ್ಲೋವರ್ ಬಾಲ್ ಅನ್ನು ಫುಲ್ಲರ್ ಲೆನ್ತ್‌ನಲ್ಲಿ ಎಸೆದು, ಹೆಚ್ಚು ವೇಗದ ಡೆಲಿವರಿಗಳನ್ನು ಕೂಡ ಬಳಸಬೇಕು,” ಎಂದು ಪಠಾಣ್ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ತಿಳಿಸಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಪಠಾಣ್ ಮೆಚ್ಚುಗೆ
ಇರ್ಫಾನ್ ಪಠಾಣ್ ಅವರು ಶ್ರೇಯಸ್ ಅಯ್ಯರ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್‌ನ್ನು ಗುಣಗಾನ ಮಾಡಿದ್ದಾರೆ. ಆ ಪಂದ್ಯದಲ್ಲಿ ಅಯ್ಯರ್ ಕೇವಲ 35 ಬಾಲ್‌ಗಳಲ್ಲಿ 66 ರನ್ ಗಳಿಸಿ, ತನ್ನ ತಂಡವನ್ನು 196 ರನ್ ಗುರಿಯನ್ನು ಕೇವಲ 16.3 ಓವರ್‌ಗಳಲ್ಲಿ ಬೆನ್ನಟ್ಟುವಲ್ಲಿ ಮುನ್ನಡೆಸಿದರು. ಪಠಾಣ್ ಅವರ ಪ್ರಕಾರ, ಅಯ್ಯರ್, ಬುಮ್ರಾ ಎಸೆಯುವ ಶಾರ್ಟ್ ಪಿಚ್ ಎಸೆತವನ್ನು ಮುಂಚಿತವಾಗಿಯೇ ಊಹಿಸಿ, ಅದನ್ನು ಭರ್ಜರಿ ಸಿಕ್ಸರ್‌ಗೆ ಕಳುಹಿಸಿದದ್ದು ಅವರ ಆತ್ಮವಿಶ್ವಾಸ ಮತ್ತು ತಂತ್ರಗಾರಿಕೆಗೆ ಉದಾಹರಣೆಯಾಗಿದೆ.
KKR vs RR: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕೆಕೆಆರ್; ರಾಜಸ್ಥಾನ್ ಎದುರಾಳಿ
“ಅಯ್ಯರ್ ಮೈದಾನದಲ್ಲಿದ್ದಾಗ ಆಟವನ್ನು ಅತ್ಯಂತ ಚೆನ್ನಾಗಿ ನಿಯಂತ್ರಿಸುತ್ತಾರೆ. ಬೌಲರ್‌ಗಳನ್ನು ಸರಿಯಾಗಿ ರೋಟೇಟ್ ಮಾಡುತ್ತಾರೆ—ಅದನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ ಅವರು ಬ್ಯಾಟ್ ಮಾಡುವಾಗಲೂ ಯಾವತ್ತೂ ನಿಯಂತ್ರಣ ಕಳೆದುಕೊಳ್ಳುವುದಿಲ್ಲ. ಅದು ಚೇಸ್ ಆಗಿರಲಿ, ಬೌಲರ್‌ಗಳನ್ನು ಎದುರಿಸುವುದಾಗಿರಲಿ ಅಥವಾ ಶಾಟ್ ಆಯ್ಕೆ ಆಗಿರಲಿ—ಎಲ್ಲವೂ ಸಮತೋಲನದಲ್ಲಿರುತ್ತದೆ,” ಎಂದು ಹೇಳಿದರು.
“ಜಸ್‌ಪ್ರೀತ್ ಬುಮ್ರಾ ವಿರುದ್ಧ ಶಾರ್ಟ್ ಬಾಲ್‌ಗೆ ಸಿಕ್ಸರ್ ಹೊಡೆದಾಗ, ಅವರು ಆ ಡೆಲಿವರಿಗಾಗಿ ಕಾಯುತ್ತಿದ್ದಂತೆ ಕಂಡಿತು. ಕಳೆದ ವರ್ಷ ಹೊಡೆದ ಬೌಂಡರಿಯನ್ನು ನಾವು ಮರೆಯಲು ಸಾಧ್ಯವಿಲ್ಲ ಮತ್ತು ಈ ಬಾರಿ ಕೂಡ ಅದ್ಭುತ ಶಾಟ್ ಆಡಿದರು. ಅವರ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ‘ಕ್ರೂಸ್ ಕಂಟ್ರೋಲ್’ ಕಾಣಿಸುತ್ತದೆ,” ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟರು.