ಗಾಲೆ: ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಆರಂಭವಾಗುವ ಮೊದಲನೇ ಟೆಸ್ಟ್ ಪಂದ್ಯದ (IND vs SL) ಮೂಲಕ ಭಾರತ ತಂಡದ ಶ್ರೀಲಂಕಾ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ಭಾರತ ತಂಡದ ಹಿರಿ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರು ಗಾಯದಿಂದಾಗಿ ಈ ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ. ಇದು ಪ್ರವಾಸಿ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆಯನ್ನು ತಂದೊಡ್ಡಲಿದೆ ಎಂದು ಶ್ರೀಲಂಕಾ ತಂಡದ ನಾಯಕ ಧನಂಜಯ ಡಿ ಸಿಲ್ವಾ ಹೇಳಿದ್ದಾರೆ.
ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಜಸ್‌ಪ್ರೀತ್ ಬುಮ್ರಾ ಗಾಯಕ್ಕೆ ತುತ್ತಾಗಿದ್ದರು. ಅವರು ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ, ಅವರ ಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿಗೆ ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಅವರು ಈ ಸರಣಿಯಲ್ಲಿ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
IND vs SL: ʻಭಾರತ ತಂಡವನ್ನು ಶ್ರೀಲಂಕಾ ಮಣಿಸಲಿದೆʼ-ಶುಭಮನ್ ಗಿಲ್ ಬಳಗಕ್ಕೆ ಧನಂಜಯ್ ಡಿ ಸಿಲ್ವಾ ಎಚ್ಚರಿಕೆ!
ಮಾಧ್ಯಮವೊಂದರ ಜೊತೆ ಮಾತನಾಡಿದ ಶ್ರೀಲಂಕಾ ನಾಯಕ ಧನಂಜಯ್ ಡಿ ಸಿಲ್ವಾ, "ಹಲವು ಕೀ ಆಟಗಾರರನ್ನು ಭಾರತ ತಂಡಕ್ಕೆ ಕಳೆದುಕೊಂಡಿದ್ದರೂ, ನಾನು ಪ್ರವಾಸಿ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಭಾರತ ತಂಡದಲ್ಲಿ ಹಲವು ಮ್ಯಾಚ್ ವಿನ್ನರ್‌ಗಳಿದ್ದಾರೆ. ಜಸ್‌ಪ್ರೀತ್ ಬುಮ್ರಾ ಅಲಭ್ಯತೆ ಭಾರತ ತಂಡಕ್ಕೆ ಈ ಸರಣಿಯಲ್ಲಿ ದೊಡ್ಡ ನಷ್ಟವನ್ನು ಅನುಭವಿಸಲಿಸದೆ. ಬುಮ್ರಾ ಅನುಪಸ್ಥಿತಿಯಲ್ಲಿ ಇತರೆ ಬೌಲರ್‌ಗಳನ್ನು ಟೀಮ್ ಮ್ಯಾನೇಜ್‌ಮೆಂಟ್ ಆಡಿಸುತ್ತಿದೆ, ಪ್ರವಾಸ ಆಟಗಾರರ ಎದುರು ನಾವು ಉತ್ತಮ ರಣತಂತ್ರವನ್ನು ರೂಪಿಸಿದ್ದೇವೆ," ಎಂದು ಅವರು ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ಎದುರು ತನ್ನ ಕೊನೆಯ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರಿತ್ತು. ಇದೀಗ ಅದೇ ಲಯವನ್ನು ಮುಂದುವರಿಸಿ ಭಾರತ ವಿರುದ್ಧವೂ ಗೆಲುವು ಪಡೆಯಲು ಸಿಂಹಳೀಯರು ಎದುರು ನೋಡುತ್ತಿದ್ದಾರೆ. ವಿಂಡೀಸ್ ಎದುರು ಎರಡನೇ ಪಂದ್ಯದಲ್ಲಿ ತೋರಿದ ಪ್ರದರ್ಶನದಿಂದ ತಂಡದ ಅಗ್ರ ದರ್ಜೆಯಲ್ಲಿ ತೋರುವ ಸಾಮರ್ಥ್ಯ ಬಹಿರಂಗವಾಗಿದೆ ಎಂದು ಹೇಳಿದ್ದಾರೆ ಶ್ರೀಲಂಕಾ ನಾಯಕ.
ಗೌತಮ್ ಗಂಭೀರ್ ಮುಖ್ಯ ಕೋಚ್ ಹುದ್ದೆ ಸುರಕ್ಷಿತವೋ, ಅಸುರಕ್ಷಿತವೋ?
"ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ತುಂಬಾ ಕೊನೆಯವರೆಗೂ ಸಾಗಿತ್ತು. ಕೊನೆಯ ಹಂತದವರೆಗೂ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಅಂತಿಮ ವೆಸ್ಟ್ ಇಂಡೀಸ್ ತಂಡವನ್ನು ನಮ್ಮ ತಂಡ ಹಿಂದಿಕ್ಕಿತ್ತು. ಇಂಥಾ ಪ್ರದರ್ಶನಗಳಿಂದ ನಮ್ಮ ತಂಡದ ವಿಶ್ವಾಸ ಹೆಚ್ಚಾಗಿದೆ," ಎಂದು ಧನಂಜಯ ಡಿ ಸಿಲ್ವಾ ತಿಳಿಸಿದ್ದಾರೆ.
ಶ್ರೀಲಂಕಾ ಟೆಸ್ಟ್ ತಂಡ: ಧನಂಜಯ್ ಡಿ ಸಿಲ್ವಾ (ನಾಯಕ), ಲಹಿರು ಉದಾರ, ನಿಶಾನ್ ಮದಷ್ಕ, ಕಮಿಂದು ಮೆಂಡಿಸ್, ದಿನೇಶ್ ಚಾಂಡಿಮಾಲ್,ಪಸಿಂದು ಸೂರ್ಯಭಂಡಾರ, ಸೋನಲ್ ದಿನುಶ್,ನಿರೋಶನ್ ಡಿಕ್ವೇಲ್, ರಮೇಶ್ ಮೆಂಡೀಸ್, ಪ್ರಭತ್ ಜಯಸೂರ್ಯ,ಕೇಶಾರ ನುವಾಂತ, ಮಿಲನ್ ರತ್ನನಾಯಕೆ, ಆಸಿತಾ ಫೆರ್ನಾಂಡೊ, ಲಹಿರು ಕುಮಾರ, ವಿಶ್ವ ಫೆರ್ನಾಂಡೊ, ದಿಲ್ಷನ್ ಮಧುಶಂಕ