ಬೆಂಗಳೂರು: ಬಹುನಿರೀಕ್ಷಿತ 2026ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಲೀಗ್ (Maharaja Trophy KSCA T20) ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಜೂನ್ 5 ರಂದು ಶುಕ್ರವಾರ ನಗರದಲ್ಲಿ ನಡೆಯಲಿದೆ. ಈ ಹರಾಜಿನ ವಿಶೇಷ ಏನೆಂದರೆ ಮನೀಷ್ ಪಾಂಡೆ (Manish Pandey), ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸ್ಟಾರ್ ಆಟಗಾರರ ಹೆಸರುಗಳು ಕೂಡ ಎಲ್ಲರ ಗಮನ ಸೆಳೆಯಲಿದೆ. ಆರು ತಂಡಗಳು ತಲಾ 60 ಲಕ್ಷ ರು ಪರ್ಸ್‌ನೊಂದಿಗೆ ಒಟ್ಟು 150 ಆಟಗಾರರ ಹರಾಜಿನಲ್ಲಿ ತಮ್ಮ ಅಗತ್ಯಕ್ಕೆ ತಕ್ಕತೆ ಆಟಗಾರರನ್ನು ಖರೀದಿಸಿ ತಮ್ಮ-ತಮ್ಮ ತಂಡಗಳನ್ನು ಬಲಿಷ್ಠಗೊಳಿಸಿಕೊಳ್ಳಲು ಪ್ರಯತ್ನಿಸಲಿವೆ. ಒಂದು ತಂಡ ಕನಿಷ್ಠ 16 ಆಟಗಾರರು ಹಾಗೂ ಗರಿಷ್ಠ 18 ಆಟಗಾರರನ್ನು ಖರೀದಿಸಲು ಅವಕಾಶವಿದೆ.
"ಆಟಗಾರರನ್ನು ಎ, ಬಿ, ಸಿ, ಡಿ ಹಾಗೂ ಇ ಎಂಬಂತೆ ಐದು ಗುಂಪುಗಳನ್ನಾಗಿ ಮಾಡಿದ್ದು, ಕ್ರಮವಾಗಿ 2 ಲಕ್ಷ ರು, ಒಂದು ಲಕ್ಷ ರು, 50 ಸಾವಿರ ರು, 75 ಸಾವಿರ ರು ಹಾಗೂ 30 ಸಾವಿರ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಫ್ರಾಂಚೈಸಿಗಳು ಪೂಲ್ ಎ, ಪೂಲ್ ಬಿ ಮತ್ತು ಪೂಲ್ ಸಿ ವಿಭಾಗಗಳಿಂದ ಒಟ್ಟಾರೆ ಕನಿಷ್ಠ 12 ಆಟಗಾರರನ್ನು ಕಡ್ಡಾಯವಾಗಿ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಬೇಕಾಗಿದೆ," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
IND vs AFG: ಅಫ್ಘಾನಿಸ್ತಾನ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಸ್ಥಾನಕ್ಕೆ ಋತುರಾಜ್ ಗಾಯಕ್ವಾಡ್?
ʻಎʼ ಗುಂಪಿನಲ್ಲಿ ಸ್ಟಾರ್ ಆಟಗಾರರು
ಪೂಲ್ ಎ ವಿಭಾಗದಲ್ಲಿ ಭಾರತದ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನುಭವ ಹೊಂದಿರುವ ಆಟಗಾರರಾದ ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಮತ್ತು ಮನೀಷ್ ಪಾಂಡೆ ಸೇರಿದ್ದು, ಇವರ ಮೂಲ ಬೆಲೆಯನ್ನು 2 ಲಕ್ಷ ರುಗಳಿಗೆ ನಿಗದಿಪಡಿಸಲಾಗಿದೆ.
ಇದರ ಜೊತೆಗೆ, ವೈಶಾಖ್ ವಿಜಯ್‌ಕುಮಾರ್, ಆರ್ ಸ್ಮರಣ್ ಹಾಗೂ ಕಳೆದ ಆವೃತ್ತಿಯಲ್ಲಿ 26 ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್ ಕಬಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದ ಯಶ್ ರಾಜ್ ಪೂಂಜ ಕೂಡ ಪೂಲ್ ʻಎʼನಲ್ಲಿ ಸ್ಥಾನ ಪಡೆದಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಆಟಗಾರರಾದ ಅಭಿನವ್ ಮನೋಹರ್, ವಿದ್ವತ್ ಕಾವೇರಪ್ಪ ಹಾಗೂ ಶರತ್ ಬಿಆರ್ ಪೂಲ್ ಎ ವಿಭಾಗದ ಪ್ರಮುಖ ಆಟಗಾರರ ಪಟ್ಟಿಯಲ್ಲಿ ಸೇರಿದ್ದಾರೆ.
IND vs AFG: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ ಅನುಮಾನ!
ʻಬಿʼ ಗುಂಪಿನಲ್ಲಿ ಯಾರಿದ್ದಾರೆ?
ಪೂಲ್ ಬಿ ವಿಭಾಗದಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಕರ್ನಾಟಕ ರಾಜ್ಯ ಹಿರಿಯ ತಂಡವನ್ನು ಯಾವುದೇ ಮಾದರಿಯಲ್ಲಿ ಪ್ರತಿನಿಧಿಸಿರುವ ಆಟಗಾರರು ಸೇರಿದ್ದಾರೆ. ಈ ವಿಭಾಗದ ಆಟಗಾರರ ಮೂಲ ಬೆಲೆಯನ್ನು ಒಂದು ಲಕ್ಷ ರು. ಗಳಿಗೆ ನಿಗದಿಪಡಿಸಲಾಗಿದೆ.
ಇನ್ನು ಪೂಲ್ ʻಸಿʼ ವಿಭಾಗದಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಕರ್ನಾಟಕವನ್ನು ಕಿರಿಯರ ಮಟ್ಟದಲ್ಲಿ ಪ್ರತಿನಿಧಿಸಿರುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಈ ವಿಭಾಗದ ಆಟಗಾರರ ಮೂಲ ಬೆಲೆ ₹50,000 ಆಗಿದ್ದು, ಪ್ರಮುಖ ಹೆಸರುಗಳಲ್ಲಿ ಅನ್ವಯ್ ದ್ರಾವಡ್, ಸಮಿತ್ ದ್ರಾವಿಡ್, ಹರ್ಷಿಲ್ ಧರ್ಮಾಣಿ, ಕಾರ್ತಿಕ್ ಎಸ್‌ಯು, ಆದರ್ಶ ಪ್ರಜ್ವಲ್ ಹಾಗೂ ಅನೀಶ್ವರ್ ಗೌತಮ್ ಸೇರಿದ್ದಾರೆ.
“ಪೂಲ್ ಡಿ ವಿಭಾಗದಲ್ಲಿ 30ರಿಂದ 35 ವರ್ಷ ವಯೋಮಾನದೊಳಗಿನ ಹಾಗೂ ಕರ್ನಾಟಕ ರಾಜ್ಯದ ಹಿರಿಯ ತಂಡವನ್ನು ಪ್ರತಿನಿಧಿಸಿರುವ ಆಟಗಾರರು ಸೇರಿದ್ದಾರೆ. ಈ ವಿಭಾಗದ ಆಟಗಾರರ ಮೂಲ ಬೆಲೆಯನ್ನು 75,000 ಎಂದು ನಿಗದಿಪಡಿಸಲಾಗಿದೆ. ಆದರೆ ಫ್ರಾಂಚೈಸಿಗಳಿಗೆ ತಮ್ಮ ಅಂತಿಮ ಹನ್ನೊಂದರ ಬಳಗದಲ್ಲಿ ಈ ವಿಭಾಗದಿಂದ ಗರಿಷ್ಠ ಇಬ್ಬರು ಆಟಗಾರರನ್ನು ಮಾತ್ರ ಕಣಕ್ಕಿಳಿಸಲು ಅವಕಾಶ ಇರುತ್ತದೆ,” ಎಂದು ಆಯೋಜಕರು ತಿಳಿಸಿದ್ದಾರೆ.
IND vs AFG ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಸ್ಥಾನವನ್ನು ತುಂಬಬಲ್ಲ ನಾಲ್ವರು ಆಟಗಾರರು!
“ಪೂಲ್ ಇ ವಿಭಾಗದಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯಲ್ಲಿ ನೋಂದಾಯಿತವಾಗಿರುವ ಹಾಗೂ ರಾಜ್ಯ ಆಯ್ಕೆ ಸಮಿತಿಯಿಂದ ಶಾರ್ಟ್‌ಲಿಸ್ಟ್ ಮಾಡಲ್ಪಟ್ಟ ಉಳಿದ ಎಲ್ಲಾ ಕ್ರಿಕೆಟಿಗರು ಸೇರಿದ್ದಾರೆ. ಈ ವಿಭಾಗದ ಆಟಗಾರರ ಮೂಲ ಬೆಲೆ 30,000 ಆಗಿರುತ್ತದೆ,” ಎಂದು ಅವರು ವಿವರಿಸಿದ್ದಾರೆ.
ಟೂರ್ನಿಯ ಐದನೇ ಆವೃತ್ತಿಯು ಜೂನ್ 12ರಿಂದ ಜುಲೈ 12ರವರೆಗೆ ನಡೆಯಲಿದ್ದು, ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರು ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.