IND vs NZ: ಟಿ20ಐ ಪಂದ್ಯದಲ್ಲಿ ಗೋಲ್ಡನ್ ಡಕ್‌ಔಟ್ ಆದ ಭಾರತದ ಟಾಪ್ 5 ಬ್ಯಾಟರ್ಸ್!
ನ್ಯೂಜಿಲೆಂಡ್ ವಿರುದ್ಧ ನಾಲ್ಕನೇ ಟಿ20ಐ ಪಂದ್ಯದಲ್ಲಿ ಇನ್‌ಫಾರ್ಮ್ ಬ್ಯಾಟರ್ ಅಭಿಷೇಕ್ ಶರ್ಮಾ ಗೋಲ್ಡನ್ ಡಕ್‌ಔಟ್ ಆಗಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಇವರ ಬ್ಯಾಟಿಂಗ್ ವೈಫಲ್ಯದಿಂದ ಭಾರತ ತಂಡ ಭಾರಿ ಹಿನ್ನಡೆಯನ್ನು ಅನುಭವಿಸಿತು. ಸರಿಯಾದ ಆರಂಭ ಸಿಗದ ಕಾರಣ ಭಾರತ ತಂಡ, ಕಿವೀಸ್ ನೀಡಿದ್ದ 216 ರನ್‌ಗಳನ್ನು ಗುರಿಯನ್ನು ಚೇಸ್ ಮಾಡಲು ಸಾಧ್ಯವಾಗಿಲ್ಲ. ಈ ಹಿಂದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೂಡ ಇದೇ ರೀತಿ ಔಟ್ ಆಗಿದ್ದರು. ಅಂದ ಹಾಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ
ಕೆಎಲ್ ರಾಹುಲ್
2016ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಕೆಎಲ್ ರಾಹುಲ್ ಗೋಲ್ಡನ್ ಡಕ್‌ಔಟ್ ಆಗಿದ್ದರು. ಅವರು ತಮ್ಮ ಟಿ20ಐ ಚೊಚ್ಚಲ ಪಂದ್ಯದಲ್ಲಿ ಎದುರಿಸಿದ ಮೊಟ್ಟ ಮೊದಲ ಎಸೆತದಲ್ಲೇ ಔಟಾದರು. ಭಾರತವು ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಳ್ಳುವ ಮೂಲಕ ಟಿ20ಐ ಇನಿಂಗ್ಸ್ ಅನ್ನು ಪ್ರಾರಂಭಿಸಿದ್ದು ಇದೇ ಮೊದಲು.
ಪೃಥ್ವಿ ಶಾ
2021ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ಪೃಥ್ವಿ ಶಾ ಕೂಡ ಗೋಲ್ಡನ್ ಡಕ್‌ಔಟ್ ಆಗಿದ್ದರು. ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ತೋರಿದ ನಂತರ, ಅವರು ಟಿ20ಐ ತಂಡದಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶವನ್ನು ಪಡೆದಿದ್ದರು. ಆದಾಗ್ಯೂ, ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿಯೇ ಪೃಥ್ವಿ ಶಾ, ತಾನು ಎದುರಿಸಿದ ಮೊದಲ ಎಸೆತದಲ್ಲೇ ಔಟಾದರು.
ರೋಹಿತ್ ಶರ್ಮಾ
2022ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ಕೂಡ ಇದೇ ರೀತಿಯ ನಿರಾಶೆಯನ್ನು ಅನುಭವಿಸಿದ್ದರು. ಸರಣಿಯ ಮೊದಲ ಟಿ20ಐ ಪಂದ್ಯದಲ್ಲಿ ಅವರು ಪಂದ್ಯ ಗೆಲ್ಲುವ ಅರ್ಧಶತಕ ಗಳಿಸಿದರು, ನಾಯಕನಾಗಿ ಭರವಸೆಯ ಆರಂಭವನ್ನು ನೀಡಿದರು. ಆದಾಗ್ಯೂ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗಿ ಓಬೇದ್ ಮೆಕಾಯ್ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು.
ಸಂಜು ಸ್ಯಾಮ್ಸನ್
2026ರಲ್ಲಿ ಗುವಾಹಟಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸಂಜು ಸ್ಯಾಮ್ಸನ್ ಕೂಡ ಕಹಿ ಅನುಭವವನ್ನು ಅನುಭವಿಸಿದರು. 154 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತದ ಪರ ಸಂಜು ಸ್ಯಾಮ್ಸನ್, ಮ್ಯಾಟ್ ಹೆನ್ರಿ ಎಸೆತವನ್ನು ಫ್ಲಿಕ್ ಮಾಡಲು ಪ್ರಯತ್ನಿಸಿದರು, ಆದರೆ ಚೆಂಡು ಒಳಗೆ ಬಂದು ಅವರ ಸ್ಟಂಪ್ಸ್‌ಗೆ ಬಡಿಯಿತು. ಈ ಗೋಲ್ಡನ್ ಡಕ್ಔಟ್ ಈ ಸರಣಿಯಲ್ಲಿನ ಅವರ ಸತತ ಮೂರನೇ ವೈಫಲ್ಯವಾಗಿತ್ತು, ಹಿಂದಿನ ಪಂದ್ಯಗಳಲ್ಲಿ ಕೇವಲ 10 ಮತ್ತು 6 ರನ್ ಗಳನ್ನು ಗಳಿಸಿದ್ದರು.
ಅಭಿಷೇಕ್ ಶರ್ಮಾ
ನ್ಯೂಜಿಲೆಂಡ್ ವಿರುದ್ಧ 2026ರ ಜನವರಿ 28 ರಂದು ವಿಶಾಖಪಟ್ಟಣಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ಔಟಾದರು. ಭಾರತ 216 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಉತ್ತಮ ಆರಂಭದ ಅಗತ್ಯವಿತ್ತು. ಆದಾಗ್ಯೂ, ಮ್ಯಾಟ್ ಹೆನ್ರಿಯ ನಿಖರವಾದ ಬೌಲಿಂಗ್‌ನಿಂದ ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಔಟಾದರು. ಡೆವೊನ್ ಕಾನ್ವೇ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್‌ನಿಂದ ಓಡಿ ಬಂದು ಅದ್ಭುತ ಕ್ಯಾಚ್ ಪಡೆದರು.