ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌KSCA Election: ಡಿಸೆಂಬರ್‌ 7 ರಂದು ಕೆಎಸ್‌ಸಿಎ ಚುನಾವಣೆ, ಕರ್ನಾಟಕ ಹೈಕೋರ್ಟ್‌ ಆದೇಶ!

ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ಚುನಾವಣೆಯ ದಿನಾಂಕ ಪ್ರಕಟವಾಗಿದೆ. ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಕೆಎಸ್‌ಸಿಎ ಕ್ರಿಕೆಟ್‌ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಚುನಾವಣೆಯನ್ನು ಡಿಸೆಂಬರ್‌ 7 ರಂದು ನಡೆಸಬೇಕೆಂದು ನ್ಯಾಯಾಲಯ ಆದೇಶ ನೀಡಿದೆ. ಭಾರತ ತಂಡದ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌ ನಾಯಕತ್ವದ ಟೀಮ್‌ ಗೇಮ್‌ ಚೇಂಜರ್ಸ್‌ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದೆ.

ಕೆಎಸ್‌ಸಿಎ ಚುನಾವಣೆ ಸಂಬಂಧ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸ್ವಾಗತಿಸಿದ ವೆಂಕಟೇಶ್‌ ಪ್ರಸಾದ್‌.

ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ (KSCA Election) ವಿವಿಧ ಹುದ್ದೆಗಳಿಗೆ ಚುನಾವಣೆ ಡಿಸೆಂಬರ್‌ 7 ರಂದು ನಡೆಯಲಿದೆ. ಕರ್ನಾಟಕ ಹೈಕೋರ್ಟ್‌ (Karnataka High Court) ಶುಕ್ರವಾರ ಕೆಎಸ್‌ಸಿಎ ಚುನಾವಣೆಯ ದಿನಾಂಕಕ್ಕೆ ಸಂಬಂಧ ತನ್ನ ಆದೇಶವನ್ನು ನೀಡಿದೆ. ನ್ಯಾಯಾಲಯದ ಆದೇಶವನ್ನು ವೆಂಕಟೇಶ್‌ ಪ್ರಸಾದ್‌ (Venkatesh Prasad) ಹಾಗೂ ಬ್ರಿಜೇಶ್‌ ಪಟೇಲ್‌ ನೇತೃತ್ವದ ಎರಡೂ ತಂಡಗಳು ಸ್ವಾಗತಿಸಿವೆ. ಅಂದ ಹಾಗೆ ಈ ಹಿಂದೆ ಚುನಾವಣೆಯನ್ನು ನವೆಂಬರ್‌ 30 ರಂದು ನಿಗದಿಪಡಿಸಲಾಗಿತ್ತು. ಆದರೆ, 9 ವರ್ಷಗಳ ಷರತ್ತಿನ ಬಗ್ಗೆ ಭಾಗವಹಿಸುವವರಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಕೆಎಸ್‌ಸಿಎ ಚುನಾವಣಾ ಅಧಿಕಾರಿ ಡಿಸೆಂಬರ್ 30 ರವರೆಗೆ ಅದನ್ನು ಮುಂದೂಡಿದ್ದರು.

ಕೆಎಸ್‌ಸಿಎ ಚುನಾವಣೆ ಮುಂದೂಡಿಕೆಗೆ ಸಂಬಂಧಿಸಿದಂತೆ ನವೆಂಬರ್ 17 ರಂದು ಚುನಾವಣಾ ಅಧಿಕಾರಿ ನೀಡಿದ ಪತ್ರವನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಇಂದು (ಶುಕ್ರವಾರ) ಆದೇಶ ಹೊರಡಿಸಿದ್ದಾರೆ.

IND vs SA: ಎರಡನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸೂಚಿಸಿದ ಆರ್‌ ಅಶ್ವಿನ್‌!

ಕೆಎಸ್‌ಸಿಎ ಮತ್ತು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಬಿ ಕೆ ರವಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸುತ್ತಾ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಾಲಯವು, ಕೆಎಸ್‌ಸಿಎಯ ಅಸ್ತಿತ್ವದಲ್ಲಿರುವ ಉಪ-ಕಾನೂನುಗಳ ಪ್ರಕಾರ ಚುನಾವಣೆಗಳನ್ನು ನಡೆಸಬೇಕಾಗುತ್ತದೆ ಮತ್ತು ನ್ಯಾಯಾಲಯವು ಮಾರ್ಪಡಿಸಿದ ಕಾರ್ಯಕ್ರಮಗಳ ಕ್ಯಾಲೆಂಡರ್ ಪ್ರಕಾರ ಚುನಾವಣೆಗಳನ್ನು ಪೂರ್ಣಗೊಳಿಸಲು ನಿರ್ದೇಶಿಸಿದೆ.

ಮಾರ್ಪಡಿಸಿದ ಕಾರ್ಯಕ್ರಮಗಳ ಕ್ಯಾಲೆಂಡರ್ ಪ್ರಕಾರ, ನಾಮಪತ್ರ ಸಲ್ಲಿಸುವ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ನವೆಂಬರ್ 17 ರಂದು ನಡೆಯಬೇಕಿದ್ದ ನಾಮಪತ್ರಗಳ ಪರಿಶೀಲನೆಯನ್ನು ಈಗ ನವೆಂಬರ್ 24 ರಂದು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ನಡೆಸಲಾಗುವುದು. ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ 24 ರಂದು ಪ್ರಕಟಿಸಬೇಕು.

IND vs SA: ಭಾರತ ತಂಡದ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಅಜಿಂಕ್ಯ ರಹಾನೆ!

ನವೆಂಬರ್ 24 ರಂದು ನಾಮಪತ್ರ ಪರಿಶೀಲನೆ ನಡೆಸಿ, ಅದೇ ದಿನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು, ನವೆಂಬರ್ 26 ರಂದು ನಾಮಪತ್ರ ಹಿಂಪಡೆಯಲು ಮತ್ತು ಅರ್ಹ ಅಭ್ಯರ್ಥಿಗಳ ಘೋಷಣೆಗೆ ದಿನಾಂಕ ನಿಗದಿಪಡಿಸಲಾಗಿದೆ. ಡಿಸೆಂಬರ್ 7 ರಂದು ಚುನಾವಣೆ ನಡೆದು ಅದೇ ದಿನ ಫಲಿತಾಂಶ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.