ನವದೆಹಲಿ: ಅರುಣಾಚಲ ಪ್ರದೇಶ ವಿರುದ್ಧದ ವಿಜಯ್ ಹಝಾರೆ ಟ್ರೋಫಿ (Vijay Hazare Trophy 2025-26) ಪಂದ್ಯದಲ್ಲಿ 190 ರನ್‌ಗಳನ್ನು ಬಾರಿಸಿದ ಹಾಗೂ ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಹಾಗೂ ಭಾರತ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಗುಣಗಾನ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ರೀತಿ ವೈಭವ್ ಸೂರ್ಯವಂಶಿ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಭಾರತ ತಂಡವನ್ನು ಪ್ರತಿನಿಧಿಸಬೇಕೆಂದು ಶಶಿ ತರೂರ್ ಆಗ್ರಹಿಸಿದ್ದಾರೆ. ದೇಶಿ ಕ್ರಿಕೆಟ್ ಅಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ್ದ ವೈಭವ್ ಸೂರ್ಯವಂಶಿ ಅವರನ್ನು ಇಡೀ ವಿಶ್ವದ ಗಮನವನ್ನು ಸೆಳೆದಿದ್ದರು.
ಬುಧವಾರ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೈಭವ್ ಸೂರ್ಯವಂಶಿ ಅವರು ತಮ್ಮ ಅಬ್ಬರದ ಆಟದ ಮೂಲಕ ಧೂಳೆಬ್ಬಿಸಿದರು. ಅವರ ಸ್ಪೋಟಕ ಬ್ಯಾಟಿಂಗ್ ಮೂಲಕ ಅರುಣಾಚಲ ಪ್ರದೇಶ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಅವರು ಆಡಿದ 84 ಎಸೆತಗಳಲ್ಲಿ 190 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಬಿಹಾರ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 574 ರನ್‌ಗಳನ್ನು ಕಲೆ ಹಾಕಿತು. ಅಂದ ಹಾಗೆ ವೈಭವ್ ಅವರ ಈ ಇನಿಂಗ್ಸ್ ಎಲ್ಲರ ಗಮನವನ್ನು ಸೆಳೆದರು.
Vijay Hazare Trophy: ಆಂಧ್ರ ಬೌಲರ್‌ಗಳನ್ನು ಬೆಂಡೆತ್ತಿದ್ದ ವಿರಾಟ್ ಕೊಹ್ಲಿ, 131 ರನ್ ಚಚ್ಚಿದ ರನ್ ಮಷೀನ್!
ದೀರ್ಘಾವಧಿಯಿಂದ ದೊಡ್ಡ ಕ್ರೀಡಾಭಿಮಾನಿಯಾಗಿರುವ ಶಶಿ ತರೂರ್ ಅವರು ಕೂಡ ವೈಭವ್ ಸೂರ್ಯವಂಶಿ ಅವರನ್ನು ಗುಣಗಾನ ಮಾಡಿದ್ದಾರೆ. ದಿಟ್ಟ ಹೋಲಿಕೆಯನ್ನು ತೋರಿಸುತ್ತಾ ಶಶಿ ತರೂರ್, ಭಾರತೀಯ ಕ್ರಿಕೆಟ್ ನಿಜವಾಗಿಯೂ ವಿಶೇಷವಾದದ್ದನ್ನು ವೀಕ್ಷಿಸುತ್ತಿರಬಹುದು ಎಂದು ಸೂಚಿಸಿದರು. ಕೇವಲ 16ನೇ ವಯಸ್ಸಿನಲ್ಲಿ ಸಚಿನ್ ತೆಂಡೂಲ್ಕರ್ ಅವರ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ನೆನಪಿಸಿಕೊಂಡ ತರೂರ್, ತಮ್ಮ ಎಕ್ಸ್ ಖಾತೆಯಲ್ಲಿ 14 ವರ್ಷದ ಬಾಲಕನೊಬ್ಬ ಕೊನೆಯ ಬಾರಿ ಅಂತಹ ಅದ್ಭುತ ಪ್ರತಿಭೆಯನ್ನು ತೋರಿಸಿದ್ದು ತೆಂಡೂಲ್ಕರ್ ಎಂದು ಬರೆದರು ಮತ್ತು ಆಯ್ಕೆದಾರರು ಯಾವುದಕ್ಕಾಗಿ ಕಾಯುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಫೈನಲ್‌ನಲ್ಲಿ ವೈಫಲ್ಯ ಅನುಭವಿಸಿದ ಬಳಿಕ ತನ್ನನ್ನು ಟೀಕಿಸಿದ್ದವರಿಗೆ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ವೈಭವ್ ಸೂರ್ಯವಂಶಿ ತಿರುಗೇಟು ನೀಡಿದ್ದಾರೆ. ತಮ್ಮ ಸ್ಪೋಟಕ ಹಾಗೂ ಪವರ್ ಹಿಟ್‌ಗಳ ಮೂಲಕ ಯುವ ಬ್ಯಾಟ್ಸ್‌ಮನ್ ದೇಶಿ ಕ್ರಿಕೆಟ್‌ನ ಹಿರಿಯ ಬೌಲಿಂಗ್ ದಾಳಿಯನ್ನು ಧೂಳೆಪಟ ಮಾಡಿದ್ದಾರೆ. ಆ ಮೂಲಕ ತಮ್ಮ ಕೌಶಲ ಹಾಘೂ ಆಟದಲ್ಲಿನ ಪರಿಪಕ್ವತೆಯನ್ನು ಎತ್ತಿ ತೋರಿಸಿದ್ದಾರೆ.
33 ಎಸೆತಗಳಲ್ಲಿ ಶತಕ ಬಾರಿಸಿ ವೈಭವ್ ಸೂರ್ಯವಂಶಿ ದಾಖಲೆ ಮುರಿದ ಇಶಾನ್ ಕಿಶನ್!
ವೈಭವ್ ಸೂರ್ಯವಂಶಿಗೆ ಆಕಾಶ್ ಚೋಪ್ರಾ ಮೆಚ್ಚುಗೆ
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಆಕಾಶ್ ಚೋಪ್ರಾ ಕೂಡ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಅವರು ಇದೇ ಪ್ರದರ್ಶನವನ್ನು ತೋರಿದರೆ, ಭಾರತ ತಂಡಕ್ಕೆ ಆಯ್ಕೆಯಾಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
2025ರ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಹಾಗಾಗಿ ಅವರನ್ನು 2026ರ ಟೂರ್ನಿಗೂ ಕೂಡ ರಾಜಸ್ಥಾನ್ ಫ್ರಾಂಚೈಸಿ ಉಳಿಸಿಕೊಂಡಿದೆ. ಅಂಡರ್-19 ಕ್ರಿಕೆಟ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ತೋರಿದ ಅದೇ ಪ್ರದರ್ಶನನ್ನು ಐಪಿಎಲ್ ಟೂರ್ನಿಯಲ್ಲಿ ತೋರಿದರೆ, ಅವರನ್ನು ಖಂಡಿತವಾಗಿಯೂ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.