ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

LSG vs RR: 353 ದಿನಗಳ ಬಳಿಕ ಐಪಿಎಲ್‌ ಟೂರ್ನಿಗೆ ಮರಳಿದ ಮಯಾಂಕ್‌ ಯಾದವ್‌!

Mayank Yadav IPL Comeback: ಲಖನೌ ಸೂಪರ್‌ ಜಯಂಟ್ಸ್‌ ತಂಡದ ವೇಗದ ಬೌಲರ್ ಮಯಾಂಕ್‌ ಯಾದವ್‌ ಸುಮಾರು 353 ದಿನಗಳ ಗಾಯದ ವಿರಾಮದ ನಂತರ ಮತ್ತೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪ್ಲೇಯಿಂಗ್ ಇಲೆವೆನ್‌ಗೆ ಮರಳಿದ್ದಾರೆ. ಮಂಗಳವಾರ ಏಕಾನಾ ಸ್ಟೇಡಿಯಂನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕೆ ಇಳಿದರು.

353 ದಿನಗಳ ಬಳಿಕ ಐಪಿಎಲ್‌ ಪಂದ್ಯವನ್ನು ಆಡಿದ ಮಯಾಂಕ್‌ ಯಾದವ್‌.

ಲಖನೌ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ (LSG) ತಂಡದ ಯುವ ವೇಗಿ ಮಯಾಂಕ್‌ ಯಾದವ್‌ (Mayank Yadav) ಕಣಕ್ಕೆ ಇಳಿದರು. ಅವರು ಬರೋಬ್ಬರಿ 353 ಗಾಯದ ದಿನಗಳ ಬಳಿಕ ಅವರು ಐಪಿಎಲ್‌ ಪಂದ್ಯದ ಪ್ಲೇಯಿಂಗ್‌ XIಗೆ ಮರಳಿದ್ದಾರೆ. ಬುಧವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ಟಾಸ್‌ ವೇಳೆ ನಾಯಕ ರಿಷಭ್‌ ಪಂತ್‌ ಅವರು ಪ್ಲೇಯಿಂಗ್‌ XI ಪ್ರಕಟಿಸುತ್ತಿದ್ದಂತೆ ಈ ಸುದ್ದಿ ಹೊರ ಬಂದಿತ್ತು. ಮಯಾಂಕ್‌ ಯಾದವ್‌ ಆಗಮನದಿಂದ 2026ರ ಐಪಿಎಲ್‌ ಟೂರ್ನಿಯಲ್ಲಿ ಆರಂಭಿಕ ಆಘಾತ ಅನುಭವಸಿದ್ದ ಎಲ್‌ಎಸ್‌ಜಿಗೆ ಆನೆ ಬಲ ಬಂದಂತಾಗಿದೆ.

ರಾಜಸ್ಥಾನ್‌ ರಾಯಲ್ಸ್‌ ತಂಡ, ನಾಯಕ ರಿಯಾನ್‌ ಪರಾಗ್‌ ಅವರ ನೇತೃತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಅದೇ ಪ್ಲೇಯಿಂಗ್ ಇಲೆವೆನ್ ಅನ್ನು ಮುಂದುವರಿಸಿದೆ. ಇತ್ತೀಚಿನ ಫಾರ್ಮ್ ಸ್ವಲ್ಪ ಅಸ್ಥಿರವಾಗಿದ್ದರೂ ಸಹ, ತಮ್ಮ ತಂಡದ ಸಂಯೋಜನೆಯನ್ನು ಅವರು ಕಾಯ್ದುಕೊಂಡಿದ್ದಾರೆ. ಇನ್ನು ಲಖನೌ ಸೂಪರ್‌ ಜಯಂಟ್ಸ್‌ ಎರಡು ಬದಲಾವಣೆಗಳನ್ನು ಮಾಡಿದೆ. ಲೆಗ್-ಸ್ಪಿನ್ನರ್ ದಿಗ್ವೇಶ್‌ ರಾಥಿ ಅವರನ್ನು ಎಂ ಸಿದ್ದಾರ್ಥ್‌ ಬದಲಿಗೆ ತಂಡಕ್ಕೆ ಸೇರಿಸಲಾಗಿದೆ. ಜೊತೆಗೆ ವೇಗದ ಬೌಲರ್ ಮಯಾಂಕ್‌ ಯಾದವ್‌ ಅವರು ಆವೇಶ್‌ ಖಾನ್‌ ಅವರ ಸ್ಥಾನದಲ್ಲಿ ಈ ಸೀಸನ್‌ನ ತಮ್ಮ ಮೊದಲ ಪಂದ್ಯಕ್ಕೆ ಮರಳಿದ್ದಾರೆ.

RCB vs GT: ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

ಐಪಿಎಲ್‌ ಟೂರ್ನಿಯಲ್ಲಿ ಮೂಡಿಬಂದ ಪ್ರತಿಭಾವಂತ ವೇಗದ ಬೌಲರ್‌ಗಳಲ್ಲಿ ಮಯಾಂಕ್‌ ಯಾದವ್‌ ಕೂಡ ಒಬ್ಬರಾಗಿದ್ದಾರೆ. ದೀರ್ಘಕಾಲದ ಗಾಯದ ಸಮಸ್ಯೆಗಳ ನಂತರ ಅವರು ಮತ್ತೆ ಮೈದಾನಕ್ಕೆ ಬಂದಿದ್ದಾರೆ. ಈ ಬಲಗೈ ವೇಗದ ಬೌಲರ್‌ಗೆ ತೀವ್ರವಾದ ಕೆಳಬೆನ್ನಿನ ಸ್ಟ್ರೆಸ್ ಫ್ರ್ಯಾಕ್ಚರ್ ಉಂಟಾಗಿ, 2025ರ ಐಪಿಎಲ್‌ನ ಬಹುಭಾಗ ಹಾಗೂ ನಡೆಯುತ್ತಿರುವ ಸೀಸನ್‌ನ ಆರಂಭಿಕ ಹಂತದಿಂದಲೇ ಅವರು ಹೊರಗುಳಿಯಬೇಕಾಯಿತು.



ಮಯಂಕ್ ಕೊನೆಯ ಬಾರಿ 2025ರ ಮೇನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ ಪರ ಆಡಿದ್ದರು. ಆ ಪಂದ್ಯದಲ್ಲಿ ಅವರು 4 ಓವರ್‌ಗಳಲ್ಲಿ 60 ರನ್ ನೀಡಿ ವಿಕೆಟ್ ಪಡೆದಿರಲಿಲ್ಲ. ಹಿಂದಿನ ಸೀಸನ್‌ನಲ್ಲಿ ಅವರು ಕೇವಲ ಎರಡು ಪಂದ್ಯಗಳನ್ನು ಆಡಿದ್ದರು. ಅದರಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಎರಡು ವಿಕೆಟ್ ಪಡೆದಿದ್ದರು, ಆದರೆ ನಂತರ ಮತ್ತೆ ಗಾಯದಿಂದ ಹೊರಗುಳಿಯಬೇಕಾಯಿತು.

ಉಭಯ ತಂಡಗಳ ಪ್ಲೇಯಿಂಗ್‌ XI

ರಾಜಸ್ಥಾನ್‌ ರಾಯಲ್ಸ್:‌ ಯಶಸ್ವಿ ಜೈಸ್ವಾಲ್‌, ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್‌, (ವಿ.ಕೀ), ರಿಯಾನ್‌ ಪರಾಗ್‌ (ನಾಯಕ), ಶಿಮ್ರಾನ್‌ ಹೆಟ್ಮಾಯೆರ್‌, ಡೊನೊವಾನ ಫೆರೆರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್‌, ರವಿ ಬಿಷ್ಣೋಯ್‌, ಬ್ರಿಜೇಶ ಶರ್ಮಾ, ನಾಂಡ್ರೆ ಬರ್ಗರ್‌

ಲಖನೌ ಸೂಪರ್‌ ಜಯಂಟ್ಸ್‌: ಮಿಚೆಲ್ ಮಾರ್ಷ್, ಆಯುಷ್ ಬದೋನಿ, ರಿಷಭ್ ಪಂತ್ (ನಾಯಕ, ವಿ.ಕೀ), ನಿಕೋಲಸ್ ಪೂರನ್, ಏಡೆನ್ ಮಾರ್ಕ್ರಮ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಮಯಾಂಕ್ ಯಾದವ್