ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈಭವ್‌ ಸೂರ್ಯವಂಶಿಗೆ 14 ವರ್ಷ ವಯಸ್ಸು ಫೇಕ್‌ ಎಂದ ಮ್ಯಾಥ್ಯೂ ಹೇಡನ್!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ವೈಭವ್‌ ಸೂರ್ಯವಂಶಿ ಅವರ 14 ವರ್ಷ ವಯಸ್ಸು ಫೇಕ್‌ ಎಂದು ಆಸ್ಟ್ರೇಲಿಯಾ ದಿಗ್ಗಜ ಮ್ಯಾಥ್ಯೂ ಹೇಡನ್‌ ಆರೋಪ ಮಾಡಿದ್ದರು ಎಂದು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ರವಿ ಶಾಸ್ತ್ರಿ ಸ್ಮರಿಸಿಕೊಂಡಿದ್ದಾರೆ.

ವೈಭವ್‌ ಸೂರ್ಯವಂಶಿ ವಯಸ್ಸು ಫೇಕ್‌ ಎಂದ ಮ್ಯಾಥ್ಯೂ ಹೇಡನ್!

ವೈಭವ್‌ ಸೂರ್ಯವಂಶಿ ಅವರ ವಯಸ್ಸು ನಕಲಿ ಎಂದ ಮ್ಯಾಥ್ಯೂ ಹೇಡನ್‌. -

Profile Ramesh Kote Oct 16, 2025 5:14 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಹಾಗೂ ಜೂನಿಯರ್‌ ಲೆವೆಲ್‌ ಕ್ರಿಕೆಟ್‌ನಲ್ಲಿ ವೈಭವ್‌ ಸೂರ್ಯವಂಶಿ (Vaibhav Suryavanshi) ದೊಡ್ಡ ಹೆಸರು ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಐಪಿಎಲ್‌ ಇತಿಹಾಸ ಎರಡನೇ ವೇಗದ ಶತಕವನ್ನು ಬಾರಿಸಿದ್ದರು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ನೀಡಿದ್ದ 1.1 ಕೋಟಿ ರೂ. ಗಳ ಮೊತ್ತಕ್ಕೆ ಮೌಲ್ಯವನ್ನು ತಂದುಕೊಟ್ಟಿದ್ದರು. ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆಗೆ ಭಾಜನರಾಗಿದ್ದರು. ಇತ್ತೀಚೆಗೆ ಇಂಗ್ಲೆಂಡ್‌ ಅಂಡರ್‌-19 ತಂಡದ ವಿರುದ್ಧ ಕೇವಲ 78 ಎಸೆತಗಳಲ್ಲಿ 143 ರನ್‌ಗಳನ್ನು ಬಾರಿಸಿದ್ದರು ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಂಡರ್‌-19 ಮೊದಲ ಯೂಥ್‌ ಟೆಸ್ಟ್‌ನಲ್ಲಿಯೂ 62 ಎಸೆತಗಳಲ್ಲಿ 104 ರನ್‌ಗಳನ್ನು ಸಿಡಿಸಿದ್ದರು.

ಕಳೆದ ಏಪ್ರಿಲ್‌ 28 ರಂದು ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ತಮ್ಮ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರು. ಅವರು ಅಂದು ಆಡಿದದ ಕೇವಲ 35 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ತಮ್ಮ ಈ ದಾಖಲೆ ಇನಿಂಗ್ಸ್‌ನಲ್ಲಿ ಬರೋಬ್ಬರಿ 11 ಸಿಕ್ಸರ್‌ ಹಾಗೂ 7 ಬೌಂಡರಿಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಸ್ಟಾರ್‌ ವೇಗಿಗಳಾದ ಮೊಹಮ್ಮದ್‌ ಸಿರಾಜ್‌ ಹಾಗೂ ಇಶಾಂತ್‌ ಶರ್ಮಾ ಅವರಂಥ ಅನುಭವಿ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಅಂದು ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ ಅವರು,ವೈಭವ್‌ ಸೂರ್ಯವಂಶಿಗೆ ಇನ್ನೂ 14 ವರ್ಷ ಎಂದು ನಂಬಿರಲಿಲ್ಲ ಎಂಬ ಸಂಗತಿಯನ್ನು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ರವಿ ಶಾಸ್ತ್ರಿ ರಿವೀಲ್‌ ಮಾಡಿದ್ದಾರೆ.

Abhinav Tejrana: ದ್ವಿಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಗೋವಾ ಬ್ಯಾಟ್ಸ್‌ಮನ್‌!

"ನನಗೆ ಆಶ್ಚರ್ಯವಾಯಿತು; ಜೈಪುರದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ನಾನು ಕಾಮೆಂಟರಿ ಮಾಡುತ್ತಿದ್ದೆ. 4ನೇ ಓವರ್‌ನಲ್ಲಿ ನಾನು ಕಾಮೆಂಟರಿಗೆ ಬಂದೆ ಮತ್ತು ಆ ಹೊತ್ತಿಗೆ ನಮ್ಮಲ್ಲಿ ಒಬ್ಬ ಕಾಮೆಂಟೇಟರ್ ಕಡಿಮೆ ಇದ್ದ ಕಾರಣ ನಾನು ಸತತವಾಗಿ ಎರಡು ಬಾರಿ ಪ್ರದರ್ಶನ ನೀಡಿದ್ದೇನೆ. 9ನೇ, 10ನೇ ಓವರ್‌ನ ಹೊತ್ತಿಗೆ ಅವರು 100 ರನ್ ಗಳಿಸಿದ್ದರು ಮತ್ತು ಅವರು ಚೆಂಡನ್ನು ಮೂಲೆ ಮೂಲೆಗೆ ಹೊಡೆದಿದ್ದರು. ಅವರು ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಎಕ್ಸ್‌ಟ್ರಾ ಕವರ್ ಮತ್ತು ಮಿಡ್‌ವಿಕೆಟ್‌ನಲ್ಲಿ ಸತತವಾಗಿ 10 ಬಾರಿ ಹೊಡೆಯುತ್ತಿದ್ದರು. ಮ್ಯಾಥ್ಯೂ ಹೇಡನ್ ಕೂಡ ಅಲ್ಲಿದ್ದರು ಮತ್ತು ಅವರು 'ಓಹ್ ಅವರಿಗೆ 14 ವರ್ಷ ವಯಸ್ಸಾಗಿರಲು ಸಾಧ್ಯವಿಲ್ಲ' ಎಂದು ಹೇಳಿದ್ದರು. ನಾನು 'ಬನ್ನಿ, ಶಾಂತವಾಗಿರಿ' ಎಂದು ಹೇಳಿದೆ," ಎಂದು ರವಿ ಶಾಸ್ತ್ರಿ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ತಿಳಿಸಿದ್ದಾರೆ.

ವೈಭವ್‌ ಸೂರ್ಯವಂಶಿ ಮುಂದೆ ದೊಡ್ಡ ಸವಾಲಿದೆ: ರವಿ ಶಾಸ್ತ್ರಿ

ಸೂರ್ಯವಂಶಿಯವರ ಪ್ರತಿಭೆಯ ಬಗ್ಗೆ ಯಾವುದೇ ಸಂದೇಹವಿಲ್ಲ, ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಕಹಿ ಸತ್ಯವೆಂದರೆ ಹಲವಾರು ಪ್ರತಿಭಾನ್ವಿತ ಕ್ರಿಕೆಟಿಗರು ಹಿಂದೆ ಬಿದ್ದಿದ್ದಾರೆ. ಅವರು ಅವಕಾಶ ಸಿಗದೆ ನಲುಗಿದ್ದಾರೆ. ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಆಯ್ಕೆಯಾಗುತ್ತಾರೆ ಎಂಬ ಕೂಗುಗಳು ಹೆಚ್ಚಾಗುತ್ತಿರುವಾಗ, ಶಾಸ್ತ್ರಿ ಹದಿಹರೆಯದ ಆಟಗಾರರಿಗೆ ಬಹಳ ಮುಖ್ಯವಾದ ವಿಷಯ ಯಾವುದೆಂದು ವಿವರಿಸಿದ್ದಾರೆ.

T20 World Cup 2026: ಟಿ20 ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಒಮಾನ್, ನೇಪಾಳ

"ವೈಭವ್‌ ಸೂರ್ಯವಂಶಿ ಅವರ ಪಾಲಿಗೆ ಅತ್ಯಂತ ಕಠಿಣ ಅವಧಿ ಎದುರಾಗಿದೆ. ಏಕೆಂದರೆ ಅವರು ಸಚಿನ್‌ ತೆಂಡೂಲ್ಕರ್‌ ರೀತಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಆ ರೀತಿಯ ಪ್ರದರ್ಶನವನ್ನು ತೋರಿದ್ದಾರೆ. ಮುಂದಿನ 3-4 ವರ್ಷಗಳ ಕಾಲ ಆ ಹುಡುಗನಿಗೆ ಯಾರಾದರೂ ಸರಿಯಾದ ಮಾರ್ಗದರ್ಶನವನ್ನು ನೀಡಬೇಕಾಗಿದೆ. ಅದು ನಿಮ್ಮ ತಲೆಗೆ ಹೋಗಬಹುದು; ನಿರೀಕ್ಷೆಗಳು ಹೆಚ್ಚಿರುತ್ತವೆ, ನೀವು ಅದನ್ನು ನಿಭಾಯಿಸಲು ಸಾಧ್ಯವಾಗದಿರಬಹುದು. ಯಾರಾದರೂ ಹೋಗಿ ಅವರಿಗೆ, 'ನೀವು ಯಾವುದೋ ಹಂತದಲ್ಲಿ ವಿಫಲರಾಗುವುದು ಖಚಿತ' ಎಂದು ಹೇಳಬೇಕಾದ ಸ್ಥಳ ಇದು. ಈ ಆಟವು ಸಮತಟ್ಟು ಮಾಡುವ ಆಟ. ಆದ್ದರಿಂದ ಅಸಮಾಧಾನಗೊಳ್ಳಬೇಡಿ. ಇದು ಜೀವನದ ಒಂದು ಭಾಗ, ಆದರೆ ನೀವು ಏನು ಮಾಡುತ್ತಿದ್ದೀರಿ ಎಂಬುದರ ಮೇಲೆ ನೀವು ಅಂಟಿಕೊಳ್ಳುತ್ತೀರಿ ಮತ್ತು ಒಮ್ಮೆ ನೀವು ವೈಫಲ್ಯವನ್ನು ಸ್ವೀಕರಿಸಲು ಪ್ರಾರಂಭಿಸಿದರೆ, ಅದನ್ನು ನಿಮ್ಮ ಹೆಜ್ಜೆಯಾಗಿ ತೆಗೆದುಕೊಳ್ಳಿ, ಆಗ ನೀವು ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಆದರೆ ಇದು ಅವರಿಗೆ ಒಂದು ಪ್ರಮುಖ ಅವಧಿ," ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.