ನವದೆಹಲಿ: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಎಂಟು ಎಸೆತಗಳಲ್ಲಿ 8 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಮೇಘಾಲಯ (Meghalaya) ತಂಡದ ಆಕಾಶ್ ಚೌಧರಿ (Anil Choudhary) ಬರೆದಿದ್ದಾರೆ. ನವೆಂಬರ್ 9 ರಂದು ಸೂರತ್‌ನ ಭೀಮ್‌ಪುರದ ಪಿತವಾಲ ಕ್ರೀಡಾಂಗಣದಲ್ಲಿ ಅರುಣಾಚಲ ಪ್ರದೇಶ ವಿರುದ್ದದ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಪ್ಲೇಟ್ ಪಂದ್ಯದಲ್ಲಿ ಅವರು ಈ ಸಾಧನೆಗೆ ಭಾಜನರಾಗಿದ್ದಾರೆ. ಸತತ ಎಂಟು ಸಿಕ್ಸರ್‌ಗಳ ಮೂಲಕ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ.
ಆಕಾಶ್ ಚೌಧರಿ ಅವರು ಕೇವಲ 11 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಮೇಘಾಲಯ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 628 ರನ್‌ಗಳನ್ನು ಕಲೆ ಹಾಕಿ ಡಿಕ್ಲೆರ್ ಮಾಡಿಕೊಂಡಿತು. ತಮ್ಮ ದಾಖಲೆ ಇನಿಂಗ್ಸ್‌ನಲ್ಲಿ ಮೇಘಾಲಯ ಬ್ಯಾಟ್ಸ್‌ಮನ್ ಏಕೈಕ ಓವರ್‌ನಲ್ಲಿ 6 ಸಿಕ್ಸರ್ ಸೇರಿದಂತೆ ಎಂಟು ಎಸೆತಗಳಲ್ಲಿ ಸತತವಾಗಿ 8 ಸಿಕ್ಸರ್ ಅನ್ನು ಬಾರಿಸಿದ್ದಾರೆ.
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಅವರು ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು 1968ರಲ್ಲಿನಾಟಿಂಗ್‌ಹ್ಯಾಮ್ ಪರ ಆಡುವಾಗ ಈ ದಾಖಲೆಯನ್ನು ಬರೆದಿದ್ದರು. 1984-85ರ ಸಾಲಿನಲ್ಲಿ ಭಾರತದ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರು ಬರೋಡಾ ವಿರುದ್ದದ ಪಂದ್ಯದಲ್ಲಿ ಈ ದಾಖಲೆ ಬರೆದಿದ್ದರು.
ಅರುಣಾಚಲ ಪ್ರದೇಶ ತಂಡದ ಎಡಗೈ ಸ್ಪಿನ್ನರ್ ಲಿಮಾರ್ ದಾಬಿ ಅವರು ಕೊನೆಯ ಓವರ್‌ನಲ್ಲಿ ಆಕಾಶ್ ಚೌಧರಿ ಅವರಿಂದ ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದರು. ಪಂದ್ಯದ ಎರಡನೇ ದಿನ 126ನೇ ಓವರ್‌ನಲ್ಲಿ ಆಕಾಶ್ ಈ ಸಿಕ್ಸರ್‌ಗಳನ್ನು ಬಾರಿಸಿದ್ದರು. 25ರ ಪ್ರಾಯದ ಬ್ಯಾಟ್ಸ್‌ಮನ್ ಕೇವಲ 11 ಎಸೆತಗಳಲ್ಲಿಯೇ ಅರ್ಧಶತಕ ಬಾರಿಸಿ, ವೇಯ್ನ್ ವೇಟ್ ಅವರ ದಾಖಲೆಯನ್ನು ಮುರಿದಿದ್ದಾರೆ. 2012ರಲ್ಲಿ ಎಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಲೈಸೆಸ್ಟರ್‌ಶೈರ್ ಪರ ವೇಯ್ನ್ 12 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ಸ್
ಆಕಾಶ್ ಕುಮಾರ್ ಚೌಧರಿ – 50 ರನ್, 11 ಎಸೆತಗಳು (ಮೇಘಾಲಯಾ vs ಅರುಣಾಚಲ ಪ್ರದೇಶ, 2025)
ವೇಯ್ನ್ ವೇಟ್ – 50 ರನ್, 12 ಎಸೆತಗಳು (ಲೆಸಸ್ಟರ್‌ಶೈರ್ vs ಎಸೆಕ್ಸ್, 2012)
ಮೈಕಲ್ ವಾನ್ ವೂರನ್– 50 ರನ್, 13 ಎಸೆತಗಳಯ (ಈಸ್ಟರ್ನ್ ಪ್ರಾಔಿನ್ಸ್ ಬಿ vs ಗ್ರಿಕ್ವಾಲ್ಯಾಂಡ್ ವೆಸ್ಟ್ 1984/85)
ನೆಡ್ ಎಕರ್ಸ್ಲೆ – 50 ರನ್, 14 ಎಸೆಗಳು (ಲೆಸಸ್ಟರ್‌ಶೈರ್ vs ಎಸೆಕ್ಸ್, 2012)
ಬಂದಿಪ್ ಸಿಂಗ್ – 50 ರನ್, 15 ಎಸೆತಗಳು (ಜಮ್ಮು ಮತ್ತು ಕಾಶ್ಮೀರ vs ತ್ರಿಪುರ, 2015/16)
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಬ್ಯಾಟರ್ಸ್
ಸರ್ ಗ್ಯಾರಿಫೀಲ್ಡ್ ಸೋಬರ್ಸ್ – 31 ಆಗಸ್ಟ್ 1968 — ನಾಟಿಂಗ್‌ಹ್ಯಾಮ್‌ಶೈರ್ vs ಗ್ಲಾಮೋರ್ಗನ್ | ಬೌಲರ್: ಮಾಲ್ಕಮ್ ನ್ಯಾಶ್
ರವಿ ಶಾಸ್ತ್ರಿ – 19 ಜನವರಿ 1985 — ಬಾಂಬೆ vs ಬರೋಡಾ (ರಣಜಿ ಟ್ರೋಫಿ) | ಬೌಲರ್: ತಿಲಕ್ ರಾಜ್
ಆಕಾಶ್ ಕುಮಾರ್ ಚೌಧರಿ – 09 ನವೆಂಬರ್ 2025 — ಮೇಘಾಲಯ vs ಅರುಣಾಚಲ ಪ್ರದೇಶ | ಬೌಲರ್: ಲಿಮರ್ ದಾಬಿ