ನವದೆಹಲಿ: ಇಂಗ್ಲೆಂಡ್ ವಿರುದ್ಧ ಆಶಸ್ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ (AUS vs ENG) ಪ್ರಥಮ ಇನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಆಸ್ಟ್ರೇಲಿಯಾ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) 7 ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಇಂಗ್ಲೆಂಡ್ ತಂಡವನ್ನು 172 ರನ್‌ಗಳಿಗೆ ಆಲ್‌ಔಟ್ ಮಾಡಲು ತಮ್ಮ ತಂಡಕ್ಕೆ ನೆರವು ನೀಡಿದರು. ಇದರೊಂದಿಗೆ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರ 7 ವರ್ಷಗಳ ದಾಖಲೆಯನ್ನು ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮುರಿದಿದ್ದಾರೆ.
ಮಾರಕ ಬೌಲಿಂಗ್ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್ ಅವರರು 12.5 ಓವರ್‌ಗಳ ತಮ್ಮ ಸ್ಪೆಲ್‌ನಲ್ಲಿ 58 ರನ್ ನೀಡಿ 7ವಿಕೆಟ್ ಕಬಳಿಸಿದರು. ಆ ಮೂಲಕ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡ ಕೇವಲ 32.5 ಓವರ್‌ಗಳಿಗೆ ತನ್ನ ಪ್ರಥಮ ಇನಿಂಗ್ಸ್ ಅನ್ನು ಮುಗಿಸಿತು. ಪ್ರವಾಸಿ ತಂಡದ ಪರ ಹ್ಯಾರಿ ಬ್ರೂಕ್ ಅರ್ಧಶತಕ ಗಳಿಸಿದರು. ಒಲ್ಲೀ ಪೋಪ್ ಹಾಗೂ ಜೇಮಿ ಓವರ್ಟನ್ ಅವರು 30 ರನ್ ಗಳಿಸಿದರು. ಪ್ರವಾಸಿಗರು ಕೊನೆಯ 12 ರನ್‌ಗಳ ಅಂತರದಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡರು. ಝ್ಯಾಕ್ ಕ್ರಾವ್ಲಿ, ಬೆನ್ ಡಕೆಟ್, ಜೋ ರೂಟ್, ಬೆನ್ ಸ್ಟೋಕ್ಸ್, ಜೇಮಿ ಸ್ಮಿತ್, ಗಸ್ ಅಟ್ಕಿನ್ಸನ್ ಹಾಗೂ ಮಾರ್ಕ್‌ವುಡ್ ಅವರನ್ನು ಸ್ಟಾರ್ಕ್ ಔಟ್ ಮಾಡಿದರು.
IND vs SA: ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ, ಎರಡನೇ ಟೆಸ್ಟ್‌ನಿಂದಲೂ ಕಗಿಸೊ ರಬಾಡ ಔಟ್!
ಮೊಹಮ್ಮದ್ ಶಮಿ ದಾಖಲೆ ಮುರಿದ ಸ್ಟಾರ್ಕ್
ಪರ್ತ್‌ನ ಒಪ್ಟಸ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯದ ಏಕೈಕ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎಂಬ ದಾಖಲೆ ಮಿಚೆಲ್ ಸ್ಟಾರ್ಕ್ ಬರೆದಿದ್ದಾರೆ. ಈ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯದ ಅತ್ಯುತ್ತಮ ಸ್ಪೆಲ್ ಮಾಡಿದ ಕೀರ್ತಿಗೂ ಸ್ಟಾರ್ಕ್ ಭಾಜನರಾಗಿದ್ದಾರೆ. ಆ ಮೂಲಕ ಭಾರತ ತಂಡದ ಹಿರಿಯ ವೇಗಿ ಮೊಹ್ಮಮದ್ ಶಮಿ ದಾಖಲೆಯನ್ನು ಮುರಿದಿದ್ದಾರೆ. ಶಮಿ ಅವರು 2018ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಪಂದ್ಯವೊಂದರಲ್ಲಿ 56 ರನ್ ನೀಡಿ 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಪರ್ತ್‌ನ ಅಪ್ಟಸ್ ಕ್ರೀಡಾಂಗಣದಲ್ಲಿ ಟೆಸ್ಟ್ ಇನಿಂಗ್ಸ್‌ನಲ್ಲಿನ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಮಾಡಿದ ಬೌಲರ್‌ಗಳು
ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾ ( ಇಂಗ್ಲೆಂಡ್ ವಿರುದ್ಧ) 7/58-2025
ಮೊಹಮ್ಮದ್ ಶಮಿ: ಭಾರತ (ಆಸ್ಟ್ರೇಲಿಯಾ ವಿರುದ್ಧ) 6/56-2018
ಆಮಿರ್ ಜಮಿಲ್: ಪಾಕಿಸ್ತಾನ (ಆಸ್ಟ್ರೇಲಿಯಾ ವಿರುದ್ಧ) 6/111-2023
ನೇಥನ್ ಲಯಾನ್: ಆಸ್ಟ್ರೇಲಿಯಾ ( ವೆಸ್ಟ್ ಇಂಡೀಸ್ ವಿರುದ್ಧ) 6/128-2022
ಜಸ್‌ಪ್ರೀತ್ ಬುಮ್ರಾ: ಭಾರತ (ಆಸ್ಟ್ರೇಲಿಯಾ ವಿರುದ್ಧ) 5/30-2024
IND vs SA: ದಕ್ಷಿಣ ಆಫ್ರಿಕಾ ಒಡಿಐ ಸರಣಿಗೆ ಭಾರತದ ಸಂಭಾವ್ಯ ಆಟಗಾರರ ತಂಡ!
100 ಆಶಸ್ ಟೆಸ್ಟ್ ವಿಕೆಟ್ ಪೂರ್ಣಗೊಳಿಸಿದ ಮಿಚೆಲ್ ಸ್ಟಾರ್ಕ್
ಆಶಸ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮಿಚೆಲ್ ಸ್ಟಾರ್ಕ್ ಅವರು 104 ವಿಕೆಟ್‌ಗಳನ್ನು ಕಬಳಿಸಿದ್ದಾರೆಎ. ಆಸಸ್ ಟೆಸ್ಟ್ ಸರಣಿಯಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಮೊದಲ ವೇಗದ ಬೌಲರ್ ಹಾಗೂ ಒಟ್ಟಾರೆ 21ನೇ ಬೌಲರ್ ಎಂಬ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಬರೆದಿದ್ದಾರೆ. ಅವರು ಸದ್ಯ ಆಶಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 44.9ರ ಸ್ಟ್ರೈಕ್ ರೇಟ್‌ನಲ್ಲಿ 104 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಗ್ಲೆನ್ ಮೆಗ್ರಾಥ್ ಅವರು 46.3ರ ಸ್ಟ್ರೈಕ್ ರೇಟ್‌ನಲ್ಲಿ 157 ವಿಕೆಟ್‌ಗಳನ್ನು ಕಬಳಿಸಿದ್ದಾರೆ.