ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡ್ರಗ್ಸ್‌ ಸೇವಿಸಿ ತಗಲಾಕಿಕೊಂಡ ಮೊಹಮ್ಮದ್‌ ನವಾಝ್‌, ಪಿಸಿಬಿಗೆ ಐಸಿಸಿ ವಾರ್ನಿಂಗ್‌!

ಪಾಕಿಸ್ತಾನ ಕ್ರಿಕೆಟ್‌ ತಂಡದ ಆಲ್‌ರೌಂಡರ್ ಮೊಹಮ್ಮದ್‌ ನವಾಝ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತನಿಖೆ ಆರಂಭಿಸಿದೆ. ಟಿ20 ವಿಶ್ವಕಪ್ ವೇಳೆ ನಡೆದ ಡೋಪ್ ಪರೀಕ್ಷೆಯಲ್ಲಿ ಮನರಂಜನಾ ಮಾದಕ ವಸ್ತು ಬಳಕೆಗೆ ಸಂಬಂಧಿಸಿದಂತೆ ಪಾಸಿಟಿವ್ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.‌ ಈ ವಿಷಯವನ್ನು ಪಿಸಿಬಿಗೆ ಐಸಿಸಿ ತಿಳಿಸಿದ್ದು, ನಿಯಮಾನುಸಾರ ತನಿಖಾ ಪ್ರಕ್ರಿಯೆ ಮುಂದುವರಿಯುತ್ತಿದೆ.

ಮೊಹಮ್ಮದ್‌ ನವಾಝ್‌ ವಿರುದ್ಧ ತನಿಖೆಗೆ ಮುಂದಾದ ಪಿಸಿಬಿ.

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಮೊಹಮ್ಮದ್‌ ನವಾಝ್‌ (Mohammad Nawaz) ಅವರ ಕ್ರಿಕೆಟ್‌ ವೃತ್ತಿ ಜೀವನ ಸಂಕಷ್ಟಕ್ಕೆ ಸಿಲುಕಿದೆ. 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಸಂದರ್ಭದಲ್ಲಿ ಮನರಂಜನಾ ಮಾದಕ ವಸ್ತು ಸೇವನೆ ಮಾಡಿದ್ದ ಸಂಬಂಧ ಪರೀಕ್ಷೆಯಲ್ಲಿ ಪಾಟಿಟಿವ್‌ ಬಂದಿದೆ. ಹಾಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC) ಆದೇಶದಂತೆ ಪಾಕ್‌ ಆಲ್‌ರೌಂಡರ್‌ ಮೇಲೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತನಿಖೆ ನಡೆಸುತ್ತಿದೆ. ಇದರ ಪರಿಣಾಮ ಅವರು ಇಂಗ್ಲೆಂಡ್‌ನಲ್ಲಿ ನಡೆಯುವ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಸರ್ರೆ ಪರ ಆಡುವುದನ್ನು ತಡೆ ಹಿಡಿಯಲಾಗಿದೆ.

ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ವರದಿ ಪ್ರಕಾರ, 2026ರ ಐಸಿಸಿ ಟಿ20 ವಿಶ್ವಕಪ್‌ ವೇಳೆ ಮೊಹಮ್ಮದ್‌ ನವಾಝ್‌ ಅವರಿಂದ ಸಂಗ್ರಹಿಸಲಾಗಿದ್ದ ಮಾದರಿಯಲ್ಲಿ ಮಾದಕ ವಸ್ತು ಸೇವೆಸಿರುವುದು ಕಂಡು ಬಂದಿದೆ ಎಂದು ತಿಳಿದುಬಂದಿದೆ. 32ರ ವಯಸ್ಸಿನ ನವಾಝ್‌, ಶ್ರೀಲಂಕಾದಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಎಲ್ಲಾ ಏಳು ಪಂದ್ಯಗಳಲ್ಲಿಯೂ ಆಡಿದ್ದರು. ಪಾಕಿಸ್ತಾನ ತಂಡ ಸೂಪರ್ ಎಂಟರ ಹಂತದಲ್ಲೇ ಹೊರಬಿದ್ದರೂ, ನವಾಝ್‌ 15 ರನ್‌ಗಳನ್ನು ಗಳಿಸಿ ಏಳು ವಿಕೆಟ್‌ಗಳನ್ನು ಪಡೆದಿದ್ದರು.

IPL 2026: ಲಖನೌ ಸೂಪರ್‌ ಜಯಂಟ್ಸ್‌ ವೈಫಲ್ಯಕ್ಕೆ ಬಲವಾದ ಕಾರಣ ತಿಳಿಸಿದ ಸೈಮನ್‌ ದುಲ್‌!

ಡೋಪ್‌ ಪರೀಕ್ಷೆಯ ಬಗ್ಗೆ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್‌, ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಮಾಹಿತಿ ನೀಡಿದ್ದು, ಅದರಂತೆ ಪಿಸಿಬಿ ತನಿಖಾ ಪ್ರಕ್ರಿಯೆಯನ್ನು ಆರಂಭಿಸಿದೆ. “ಈ ವಿಷಯದ ಬಗ್ಗೆಐಸಿಸಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಮಾಹಿತಿ ನೀಡಿದೆ. ಅದರಂತೆ ಪಿಸಿಬಿ ನಿಯಮಾನುಸಾರ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಪ್ರಕ್ರಿಯೆಯ ಫಲಿತಾಂಶವನ್ನು ಇಂದು ಐಸಿಸಿಗೆ ತಿಳಿಸಲಾಗುತ್ತದೆ,” ಎಂದು ಪಿಸಿಬಿ ವಕ್ತಾರರು ಇಎಸ್‌ಪಿಎನ್‌ ಕ್ರಿಕ್‌ಇನ್ಪೋಗೆ ತಿಳಿಸಿದ್ದಾರೆ.

IPL 2026: ಇಶಾನ್‌ ಕಿಶನ್‌ ನಾಯಕತ್ವದ ಬಗ್ಗೆ ಸಂಜಯ್‌ ಬಾಂಗರ್‌ ದೊಡ್ಡ ಹೇಳಿಕೆ!

ಸರ್ರೆ ತಂಡದಿಂದ ಹೊರಬಿದ್ದ ನವಾಝ್‌

ಮೇ 26 ರಿಂದ ಜೂನ್‌ 18ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯುವ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಆಡಲು ಮೊಹಮ್ಮದ್‌ ನವಾಝ್‌ ಒಪ್ಪಿಕೊಂಡಿದ್ದರು. ಕಳೆದ ಎರಡು ವಾರಗಳ ಹಿಂದೆ ಪಿಸಿಬಿ, ನವಾಝ್‌ಗೆ ಎನ್‌ಒಸಿ ಕೂಡ ನೀಡಿತ್ತು. ಸರ್ರೆ ತಂಡ ಕೂಡ ಅಧಿಕೃತವಾಗಿ ಪ್ರಕಟಣೆಯನ್ನು ಮಾಡಿತ್ತು. ಆದರೆ, ಡೋಪ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಹಾಗೂ ತನಿಖೆ ನಡೆಯುತ್ತಿರುವ ಕಾರಣ ಸರ್ರೆ ತಂಡದ ಪಾಕ್‌ ಆಟಗಾರನ ಒಪ್ಪಂದ ಮುರಿದುಬಿದ್ದಿದೆ.

ಸರ್ರೆ ತಂಡದ ಅವಕಾಶ ತಪ್ಪಿದ ಹೊರತಾಗಿಯೂ ಮೊಹಮ್ಮದ್‌ ನವಾಝ್‌ ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯಲ್ಲಿ ಮುಲ್ತಾನ್‌ ಸುಲ್ತಾನ್‌ ತಂಡದ ಪ್ರಮುಖ ಆಟಗಾರರಲ್ಲೊಬ್ಬರಾಗಿದ್ದಾರೆ. ಇತ್ತೀಚೆಗೆ ರಾವಲ್ಪಿಂಡಿ ವಿರುದ್ಧ ಆರು ವಿಕೆಟ್‌ಗಳ ಗೆಲುವು ಸಾಧಿಸಿದ ಪಂದ್ಯದಲ್ಲೂ ಅವರು ತಂಡದ ಭಾಗವಾಗಿದ್ದರು. ಆದರೆ ಆ ಪಂದ್ಯದಲ್ಲಿ ಅವರು ಮೂರು ಓವರ್‌ಗಳನ್ನು ಎಸೆದರೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಮಲ್ತಾನ್ ತಂಡ ಎಂಟು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.