ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: 27 ವಿಕೆಟ್‌ ಪಡೆಯುವ ಮೂಲಕ ಮಿಚೆಲ್‌ ಸ್ಟಾರ್ಕ್‌ ದಾಖಲೆ ಮುರಿದ ಮೊಹಮ್ಮದ್‌ ಸಿರಾಜ್‌!

Mohammed Siraj breaks Mitchell Starc Record: ಭಾರತ ತಂಡದ ವೇಗದ ಬೌಲಿಂಗ್‌ ಮೊಹಮ್ಮದ್‌ ಸಿರಾಜ್‌ ಅವರು ಆಸ್ಟ್ರೇಲಿಯಾ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರ ದಾಖಲೆಯನ್ನು ಮುರಿದಿದ್ದಾರೆ. ಅವರು ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಬಳಿಸುವ ಮೂಲಕ ಈ ದಾಖಲೆಯನ್ನು ಬರೆದಿದ್ದಾರೆ.

ಮಿಚೆಲ್‌ ಸ್ಟಾರ್ಕ್‌ ದಾಖಲೆ ಮುರಿದ ಮೊಹಮ್ಮದ್‌ ಸಿರಾಜ್‌.

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದ (IND vs WI) ಪ್ರಥಮ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆಯುವ ಮೂಲಕ ಭಾರತ (India) ತಂಡದ ವೇಗಿ ಮೊಹಮ್ಮದ್‌ ಸಿರಾಜ್‌ (Mohammed Siraj) ಮಹತ್ವದ ದಾಖಲೆಯೊಂದನ್ನು ಬರೆದಿದ್ದಾರೆ. ಇಂಗ್ಲೆಂಡ್‌ ವಿರುದ್ದದ ಕಳೆದ ಟೆಸ್ಟ್‌ ಸರಣಿಯಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದ ಸಿರಾಜ್‌, ಇದೀಗ ವಿಂಡೀಸ್‌ ಎದುರು ಅದೇ ಲಯವನ್ನು ಮುಂದುವರಿಸಿದ್ದಾರೆ. ಪಂದ್ಯದ ಮೊದಲನೇ ದಿನ ಭೋಜನ ವಿರಾಮಕ್ಕೂ ಮುನ್ನ ಅವರು ಮೂರು ವಿಕೆಟ್‌ ಕಿತ್ತಿದ್ದರು.

ಪಂದ್ಯದ ಮೊದಲನೇ ದಿನ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌, ತ್ಯಾಗಿನಾರಯಣ್‌ ಚಂದ್ರಪಾಲ್‌, ಅಲಿಕ್‌ ಅಥನಾಝೆ ಹಾಗೂ ಬ್ರೆಂಡನ್‌ ಕಿಂಗ್‌ ಅವರನ್ನು ಭೋಜನ ವಿರಾಮಕ್ಕೂ ಮುನ್ನ ಔಟ್‌ ಮಾಡಿದ್ದರು. ಭೋಜನ ವಿರಾಮ ಮುಗಿಸಿಕೊಂಡು ಬಂದ ಬಳಿಕ ಪ್ರವಾಸಿ ತಂಡದ ನಾಯಕ ರಾಸ್ಟನ್‌ ಚೇಸ್‌ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆ ಮೂಲಕ ವೆಸ್ಟ್‌ ಇಂಡೀಸ್‌ 105 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಜಸ್‌ಪ್ರೀತ್‌ ಬುಮ್ರಾ ಮೂರು ವಿಕೆಟ್‌ ಪಡೆದರೆ, ಕುಲ್ದೀಪ್‌ ಯಾದವ್‌ ಎರಡು ಮತ್ತು ವಾಷಿಂಗ್ಟನ್‌ ಸುಂದರ್‌ ಒಂದು ವಿಕೆಟ್‌ ಪಡೆದರು. ಅಂತಿಮವಾಗಿ ವೆಸ್ಟ್‌ ಇಂಡೀಸ್‌ ಪ್ರಥಮ ಇನಿಂಗ್ಸ್‌ನಲ್ಲಿ 162 ರನ್‌ಗಳಿಗೆ ಆಲ್‌ಔಟ್‌ ಆಯಿತು.

WI vs IND 1st Test: ಮೊಹಮ್ಮದ್‌ ಸಿರಾಜ್‌ ದಾಳಿಗೆ ವಿಂಡೀಸ್‌ ಆಲೌಟ್‌

ವಿಶೇಷ ದಾಖಲೆ ಬರೆದ ಮೊಹಮ್ಮದ್‌ ಸಿರಾಜ್‌

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಐತಿಹಾಸಿಕ ಬೌಲಿಂಗ್‌ ಸ್ಪೆಲ್‌ ಹಾಕಿದರು. ಅವರು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಆವೃತ್ತಿಯಲ್ಲಿ ಪ್ರಸಕ್ತ ವರ್ಷ 30 ವಿಕೆಟ್‌ಗಳನ್ನು ಪಡೆದ ಬೌಲರ್‌ ಎನಿಸಿಕೊಂಡಿದ್ದಾರೆ. ಆ ಮೂಲಕ 2025ರಲ್ಲಿ 29 ವಿಕೆಟ್‌ಗಳನ್ನು ಕಬಳಿಸಿದ್ದ ಆಸ್ಟ್ರೇಲಿಯಾ ಹಿರಿಯ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರನ್ನು ಹಿಂದಿಕ್ಕಿದ್ದಾರೆ.

2025ರಲ್ಲಿ ಅತಿ ಹೆಚ್ಚು ಡಬ್ಲ್ಯುಟಿಸಿ ವಿಕೆಟ್‌ ಪಡೆದ ಬೌಲರ್‌ಗಳು

ಮೊಹಮ್ಮದ್‌ ಸಿರಾಜ್‌: 31 ವಿಕೆಟ್‌ಗಳು (7 ಪಂದ್ಯಗಳು)

ಮಿಚೆಲ್‌ ಸ್ಟಾರ್ಕ್‌: 29 ವಿಕೆಟ್‌ಗಳು (7 ಪಂದ್ಯಗಳು)

ಶಮರ್‌ ಜೋಸೆಫ್‌: 24 ವಿಕೆಟ್‌ಗಳು (6 ಪಂದ್ಯಗಳು)

ನೇಥನ್‌ ಲಯಾನ್‌: 22 ವಿಕೆಟ್‌ಗಳು (3 ಪಂದ್ಯಗಳು)

ಜಾಶ್‌ ಟಾಂಗ್:‌ 21 ವಿಕೆಟ್‌ಗಳು (4 ಪಂದ್ಯಗಳು)



ಇದರ ನಡುವೆ ಸಿರಾಜ್ ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ತಮ್ಮ ಮುನ್ನಡೆಯನ್ನು ವಿಸ್ತರಿಸಿದ್ದಾರೆ. 2025-2027ರ ಸಾಲಿನಲ್ಲಿ ಸಿರಾಜ್ 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಋತುವಿನಲ್ಲಿ ಎರಡು ಬಾರಿ ನಾಲ್ಕು ವಿಕೆಟ್ ಸಾಧನೆ ಮತ್ತು ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದ ಏಕೈಕ ಬೌಲರ್ ಆಗಿದ್ದಾರೆ.

ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದಿಂದ ಮೊಹಮ್ಮದ್‌ ಸಿರಾಜ್ ಅವರನ್ನು ಕೈಬಿಡಲಾಗಿತ್ತು. ಆದರೆ ಅವರು ಅದ್ಭುತ ಫಾರ್ಮ್ ಅನ್ನು ಪ್ರದರ್ಶಿಸಿದ್ದಾರೆ ಮತ್ತು ಯಾವುದೇ ಸ್ವರೂಪದಲ್ಲಿ ಅವರನ್ನು ಹೊರಗಿಡುವುದು ಭಾರತ ತಂಡಕ್ಕೆ ಕಷ್ಟಕರವಾಗಿರುತ್ತದೆ. ಭಾರತ ತಂಡ, ಆಸ್ಟ್ರೇಲಿಯಾ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಅಲ್ಲಿ ಭಾರತ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಜಸ್‌ಪ್ರೀತ್‌ ಬುಮ್ರಾ ಸರಣಿಯಲ್ಲಿ ವಿಶ್ರಾಂತಿ ಪಡೆದರೆ ಸಿರಾಜ್ ವೇಗದ ದಾಳಿಯ ನಾಯಕನಾಗುವ ಸಾಧ್ಯತೆಯಿದೆ.