ʻನನ್ನ ಒಪ್ಪಿಗೆ ಇಲ್ಲದೆ ಭಾರತಕ್ಕೆ ಏಷ್ಯಾ ಕಪ್ ಟ್ರೋಫಿ ನೀಡಬಾರದುʼ: ಮೊಹ್ಸಿನ್ ನಖ್ವಿಯ ಮತ್ತೊಂದು ಚಿಲ್ಲರೆ ಬುದ್ದಿ ಬಯಲು!
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ 2025ರ ಏಷ್ಯಾ ಕಪ್ ಟ್ರೋಫಿ ಸ್ವೀಕರಿಸುವ ವಿಷಯದಲ್ಲಿ ದಿನದಿಂದ ದಿನಕ್ಕೆ ಹೈಡ್ರಾಮಾ ನಡೆಯುತ್ತಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಏಷ್ಯಾ ಕಪ್ ಟ್ರೋಫಿಯನ್ನು ಲಾಕರ್‌ನಲ್ಲಿ ಇಟ್ಟಿದ್ದು, ನನ್ನ ಅನುಮತಿ ಇಲ್ಲದೆ ಭಾರತಕ್ಕೆ ಯಾರೂ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಏಷ್ಯಾ ಕಪ್ ಟ್ರೋಫಿಯನ್ನು ಲಾಕರ್‌ನಲ್ಲಿಟ್ಟ ಮೊಹ್ಸಿನ್ ನಖ್ವಿ. -

ನವದಹೆಲಿ: 2025ರ ಏಷ್ಯಾ ಕಪ್ (Asia Cup 2025) ಕ್ರಿಕೆಟ್ ಟೂರ್ನಿ ಮುಗಿದು ಎರಡು ವಾರಗಳು ಮುಗಿದಿವೆ. ಆದರೂ ಚಾಂಪಿಯನ್ಸ್ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ (Indian Cricket Team) ಟ್ರೋಫಿಯನ್ನು ಇನ್ನೂ ಪಡೆದಿಲ್ಲ. ಸೆಪ್ಟಂಬರ್ 28 ರಂದು ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಆಗಿದ್ದ ಭಾರತ, ಮೊಹ್ಸಿನ್ ನಖ್ವಿ (Mohsin Naqvi) ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿರುವ ನಖ್ವಿ, ಏಷ್ಯಾ ಕಪ್ ಟ್ರೋಫಿಯನ್ನು ತಮ್ಮ ಕಚೇರಿಗೆ ವಾಪಸ್ ತೆಗೆದುಕೊಂಡು ಹೋಗಿದ್ದರು. ಬಳಿಕ ಭಾರತ ತಂಡ ಟ್ರೋಫಿ ಇಲ್ಲದೆ ಅಂದು ಸಂಭ್ರಮಿಸಿತ್ತು.
ಏಷ್ಯಾ ಕಪ್ ಫೈನಲ್ ಬಳಿಕ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಸಾಕಷ್ಟು ಹೈಡ್ರಾಮಾ ಮಾಡಿದ್ದರು. ಭಾರತ ತಂಡಕ್ಕೆ ನಾನೇ ಟ್ರೋಫಿ ಕೊಡಬೇಕೆಂದು ಪಟ್ಟು ಹಿಡಿದಿದ್ದರು, ಮತ್ತೊಂದು ಕಡೆ ಭಾರತ ತಂಡದ ಆಟಗಾರರು, ನಖ್ವಿ ಬಿಟ್ಟು ಬೇರೆ ಯಾರಾದರೂ ಕೊಟ್ಟರೆ ಮಾತ್ರ ಸ್ವೀಕರಿಸುತ್ತೇವೆಂದು ಹೇಳಿದ್ದರು. ಬಳಿಕ ಮೊಹ್ಸಿನ್ ನಖ್ವಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಟ್ರೋಫಿಯೊಂದಿಗೆ ಮೈದಾನವನ್ನು ತೊರೆದಿದ್ದರು. ಇದಾದ ಬಳಿಕ ಸಾಕಷ್ಟು ವಿವಾದಗಳು ಸೃಷ್ಟಿಯಾಗಿದ್ದವು. ಅಲ್ಲದೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ಮತ್ತೊಂದು ಚಿಲ್ಲರೆ ಬುದ್ದಿ ಬಯಲಾಗಿದೆ.
ʻಬಿಸಿಸಿಐ ಬಳಿ ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲʼ: ಭಾರತಕ್ಕೆ ಏಷ್ಯಾ ಕಪ್ ನೀಡಲು ಸಿದ್ದ ಎಂದ ಮೊಹ್ಸಿನ್ ನಖ್ವಿ!
ಏಷ್ಯಾ ಕಪ್ ಟ್ರೋಫಿಯನ್ನು ಲಾಕ್ ಮಾಡಿದ ಮೊಹ್ಸಿನ್ ನಖ್ವಿ
ಮೊಹ್ಸಿನ್ ನಖ್ವಿ ಅವರು ಏಷ್ಯಾ ಕಪ್ ಟ್ರೋಫಿಯನ್ನು ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಧಾನ ಕಛೇರಿಯ ಲಾಕರ್‌ನಲ್ಲಿ ಇಟ್ಟಿದ್ದಾರೆ ಹಾಗೂ ಬೀಗ ಹಾಕಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನನ್ನ ಅನುಮತಿ ಇಲ್ಲದೆ ಭಾರತ ತಂಡಕ್ಕೆ ಯಾರೂ ಟ್ರೋಫಿಯನ್ನು ನೀಡಬಾರದು ಎಂದು ಎಲ್ಲರಿಗೂ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಆ ಮೂಲಕ ಭಾರತ ತಂಡ ನನ್ನ ಕೈಯಿಂದಲೇ ಏಷ್ಯಾ ಕಪ್ ಟ್ರೋಫಿಯನ್ನು ತೆಗೆದುಕೊಳ್ಳಬೇಕೆಂಬ ಮೊಂಡು ವಾದವನ್ನು ಮುಂದಿಟ್ಟಿದ್ದಾರೆ.
ʻಕ್ರೀಡೆಯಿಂದ ರಾಜಕೀಯ ದೂರವಿರಬೇಕುʼ: ಭಾರತ-ಪಾಕ್ ಏಷ್ಯಾ ಕಪ್ ವಿವಾದದ ಬಗ್ಗೆ ಎಬಿಡಿ ಪ್ರತಿಕ್ರಿಯೆ!
ನಖ್ವಿ ಅವರ ಆಪ್ತ ಮೂಲಗಳು ಹೇಳಿದ್ದೇನು?
"ಏಷ್ಯಾ ಕಪ್ ಟ್ರೋಫಿ ಇನ್ನೂ ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿದೆ. ಮೊಹ್ಸಿನ್ ನಖ್ವಿ ಅವರ ಸ್ಪಷ್ಟ ಸೂಚನೆಯ ಮೇರೆಗೆ ಅವರ ಅನುಮೋದನೆ ಇಲ್ಲದೆ ಮತ್ತು ವೈಯಕ್ತಿಕ ಉಪಸ್ಥಿತಿಯಿಲ್ಲದೆ ಅದನ್ನು ಯಾರಿಗೂ ವರ್ಗಾಯಿಸಬಾರದು ಅಥವಾ ಹಸ್ತಾಂತರಿಸಬಾರದು. ಭಾರತ ತಂಡ ಅಥವಾ ಬಿಸಿಸಿಐಗೆ ವೈಯಕ್ತಿಕವಾಗಿ ಮಾತ್ರ ಟ್ರೋಫಿಯನ್ನು ಹಸ್ತಾಂತರಿಸಬೇಕೆಂದು ನಖ್ವಿ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ," ಎಂದು ನಖ್ವಿ ಅವರ ಆಪ್ತ ಮೂಲಗಳು ಪಿಟಿಐಗೆ ತಿಳಿಸಿವೆ.
ಈ ವಿಷಯವು ಪಿಸಿಬಿ ಮತ್ತು ನಖ್ವಿ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ, ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಪ್ರಸ್ತಾಪಿಸಲಿದೆ. ನಖ್ವಿ ಅವರನ್ನು ವಿಶ್ವ ಕ್ರಿಕೆಟ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಬಹುದು ಎಂದು ಅದೇ ವರದಿಯ ತಿಳಿಸಿದೆ.