ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಮುಂಬೈ ಇಂಡಿಯನ್ಸ್‌ ನಾಯಕತ್ವವನ್ನು ರೋಹಿತ್‌ ಶರ್ಮಾಗೆ ನೀಡಿʼ-ಮನೋಜ್‌ ತಿವಾರಿ!

IPL 2026: ಮುಂಬೈ ಇಂಡಿಯನ್ಸ್‌ ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ನಾಲ್ಕು ಪಂಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದರಿಂದ ಬೇಸರ ಹೊರಹಾಕಿದ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ, ಮುಂಬೈ ಇಂಡಿಯನ್ಸ್‌ ನಾಯಕತ್ವಕ್ಕೆ ರೋಹಿತ್‌ ಶರ್ಮಾ ಮರಳಬೇಕೆಂದು ಆಗ್ರಹಿಸಿದ್ದಾರೆ.

ಮುಂಬೈ ಇಂಡಿಯನ್ಸ್‌ಗೆ ರೋಹಿತ್‌ ಪುನಃ ನಾಯಕನಾಗಬೇಕೆಂದ ತಿವಾರಿ.

ಮುಂಬೈ: ಮುಂಬೈ ಇಂಡಿಯನ್ಸ್ (Mumbai Inians) ತಂಡದಲ್ಲಿ ನಾಯಕತ್ವದ ಬದಲಾವಣೆಗೆ ಕರೆ ನೀಡಿರುವ ಮಾಜಿ ಭಾರತೀಯ ಬ್ಯಾಟ್ಸ್‌ಮನ್ ಮನೋಜ್‌ ತಿವಾರಿ(Manoj Tiwary), ಎಂಐ ತಂಡದ ನಾಯಕತ್ವವನ್ನು ಪುನಃ ರೋಹಿತ್‌ ಶರ್ಮಾ (Rohit Sharma) ಅವರಿಗೆ ಒಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಪ್ರಸ್ತುತ ಹಾರ್ದಿಕ್‌ ಪಾಂಡ್ಯ ಅವರ ನಾಯಕತ್ವವನ್ನು ಪ್ರಶ್ನಿಸಿರುವ ಅವರು, ಈ ಸೀಸನ್‌ನಲ್ಲಿ ತಂಡದ ಸಾಧನೆ ಕುಸಿತದತ್ತ ಸಾಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ.

2026ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ತಂಡದ ಕಳಪೆ ಆರಂಭದಿಂದಾಗಿ ಹಾರ್ದಿಕ್ ಮೇಲೆ ಒತ್ತಡ ಹೆಚ್ಚಾಗಿದೆ. ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಿರುವ ಎಂಐ, ಪಾಯಿಂಟ್ಸ್‌ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಏಪ್ರಿಲ್ 16ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಮಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿತ್ತು.

ʻಶ್ರೇಯಸ್‌ ಅಯ್ಯರ್‌ ಅನುಪಸ್ಥಿತಿ ಕಾಡುತ್ತಿದೆʼ:ಬಿಸಿಸಿಐ ಸೆಲೆಕ್ಟರ್‌ಗಳಿಗೆ ಸಂದೇಶ ರವಾನಿಸಿದ ಆರ್‌ ಅಶ್ವಿನ್‌!

ಕ್ರಿಕ್‌ಬಜ್‌ ಜೊತೆ ಮಾತನಾಡಿದ ಮನೋಜ್‌ ತಿವಾರಿ, “ಜವಾಬ್ದಾರಿ ಎಲ್ಲಿಂದ ಬರುತ್ತದೆ? ಮೊದಲು ಸ್ವತಃ ತನ್ನನ್ನಿ ಪರಿಶೀಲಿಸಬೇಕು. ನೀವು ಹೇಗೆ ಆಡುತ್ತಿದ್ದೀರಿ ಎಂಬುದನ್ನು ಗಮನಿಸಬೇಕು. ಈ ವರ್ಷ ಯಶಸ್ಸು ಸಿಗುತ್ತಿಲ್ಲವೆಂದರೆ, ತಪ್ಪುಗಳು ಈ ವರ್ಷದಲ್ಲೇ ನಡೆದವು ಎನ್ನುವುದಿಲ್ಲ. ಅದರ ಮೂಲ ಕಾರಣವನ್ನು ಕೂಡ ಪರಿಶೀಲಿಸಬೇಕು. 2015ರಿಂದ 2023ರವರೆಗೆ ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ಗೆ ಹಲವು ಟ್ರೋಫಿಗಳನ್ನು ಗೆಲ್ಲುವಂತೆ ಮಾಡಿದ್ದರು,” ಎಂದು ಹೇಳಿದ್ದಾರೆ.

ರೋಹಿತ್‌ ಶರ್ಮಾಗೆ ನಾಯಕತ್ವ ನೀಡಬೇಕು: ಮನೋಜ್‌ ತಿವಾರಿ

" ಶ್ರೇಯಸ್‌ ಅಯ್ಯರ್‌ ಅದ್ಭುತ ನಾಯಕತ್ವವನ್ನು ತೋರಿಸಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಬಹಳ ದುರ್ಬಲವಾಗಿದೆ. ಪರಿಹಾರ ಬೇಕಾದರೆ, ಹಾರ್ದಿಕ್‌ ಪಾಂಡ್ಯ ನಾಯಕತ್ವದಿಂದ ಹಿಂದೆ ಸರಿದು, ಜವಾಬ್ದಾರಿಯನ್ನು ಮತ್ತೆ ರೋಹಿತ್‌ ಶರ್ಮಾ ಅವರಿಗೆ ನೀಡಬೇಕು. ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದ್ದು ಅನ್ಯಾಯ,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್‌ ಅಯ್ಯರ್‌ ಗ್ರೇಟೆಸ್ಟ್‌ ಐಪಿಎಲ್‌ ಫೀಲ್ಡಿಂಗ್‌ ಕಂಡು ದಂಗಾದ ರೋಹಿತ್‌, ಸೂರ್ಯಕುಮಾರ್‌

ಮುಂಬೈ ವೈಫಲ್ಯಕ್ಕೆ ಹಾರ್ದಿಕ್‌ ಕಾರಣವೇ?

ಮುಂಬೈ ಇಂಡಿಯನ್ಸ್‌ ತಂಡದ ಕುಸಿತಕ್ಕೆ ನಾಯಕ ಹಾರ್ದಿಕ್‌ ಪಾಂಡ್ಯ ಒಬ್ಬರನ್ನೇ ಕಾರಣ ಎಂದು ಹೇಳುವ ಅಭಿಪ್ರಾಯವನ್ನು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ತಳ್ಳಿಹಾಕಿದ್ದಾರೆ.

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದು ಹಾರ್ದಿಕ್ ಒಬ್ಬರ ಮೇಲೆ ಮಾತ್ರ ಇರುವ ವಿಷಯವಲ್ಲ. ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ಜವಾಬ್ದಾರಿ ಇದೆ. ನಾವು ಚೆನ್ನಾಗಿ ಆಡದಿದ್ದಾಗ, ಅದು ಒಬ್ಬ ವ್ಯಕ್ತಿಯ ತಪ್ಪಲ್ಲ. ಅದು ನನ್ನ ಮೇಲೂ ಇದೆ ಮತ್ತು ಟೀಮ್‌ ಮ್ಯಾನೇಜ್‌ಮೆಂಟ್‌ ಎಲ್ಲರ ಮೇಲೂ ಇದೆ. ನಾವು ಹೇಗೆ ಉತ್ತಮವಾಗಬಹುದು ಎಂಬುದನ್ನು ಪರಿಶೀಲಿಸಬೇಕು,” ಎಂದು ಹೇಳಿದರು.