ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಇಂಗ್ಲೆಂಡ್‌ ವಿರುದ್ಧ ಕೊನೆಯ ಪಂದ್ಯʼ: ಟೆಸ್ಟ್‌ ಕ್ರಿಕೆಟ್‌ಗೂ ಮುಷ್ಫಿಕರ್‌ ರಹೀಮ್‌ ಗುಡ್‌ಬೈ!

ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಹಿರಿಯ ವಿಕೆಟ್‌ ಕೀಪರ್‌ ಹಾಗೂ ಬ್ಯಾಟರ್‌ ಮುಷ್ಫಿಕರ್‌ ರಹೀಮ್‌ ಅವರು ಟೆಸ್ಟ್‌ ಕ್ರಿಕೆಟ್‌ಗೂ ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಬಿದ್ದಿದೆ. ಈ ವಿಷಯವನ್ನು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ತಮೀಮ್‌ ಇಕ್ಬಾಲ್‌ ಪ್ರಕಟಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೂ ವಿದಾಯ ಹೇಳಿದ ಮುಷ್ಫಿಕರ್‌ ರಹೀಮ್‌.

ನವದೆಹಲಿ: ಬಾಂಗ್ಲಾದೇಶ ಕ್ರಿಕೆಟ್‌ ತಂಡದ ದಿಗ್ಗಜ ಆಟಗಾರ, ಹಿರಿಯ ವಿಕೆಟ್‌ ಕೀಪರ್‌ ಬ್ಯಾಟರ್‌ ಮುಷ್ಫಿಕರ್‌ ರಹೀಮ್‌ (Mushfiqur Rahim) ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. 2027ರ ಫೆಬ್ರವರಿಯಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ (BAN vs ENG) ಮೊದಲ ಪಂದ್ಯದ ಬಳಿಕ ಅವರು ನಿವೃತ್ತಿಯಾಗಲಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ತಮೀಮ್‌ ಇಕ್ಬಾಲ್‌ ಶನಿವಾರ (ನವೆಂಬರ್‌ 28) ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ತಮೀಮ್‌ ಇಕ್ಬಾಲ್‌, ಮುಷ್ಫಿಕರ್‌ ರಹೀಮ್‌ ಅವರೇ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಲು ಬಯಸಿದ್ದರು. ಆದರೆ ಅವರ ಮನವಿಯ ಮೇರೆಗೆ ತಾವೇ ಈ ವಿಚಾರವನ್ನು ಬಹಿರಂಗಪಡಿಸುತ್ತಿರುವುದಾಗಿ ತಿಳಿಸಿದ್ದಾರೆ.

"ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಬಳಿಕ ಮುಷ್ಫಿಕರ್‌ ರಹೀಮ್‌ ನಿವೃತ್ತಿಯಾಗಲಿದ್ದಾರೆ. ಕೆಲವು ದಿನಗಳ ಹಿಂದೆ ಮುಷ್ಫಿಕರ್‌ ನನಗೆ ಕರೆ ಮಾಡಿ ತಮ್ಮ ನಿರ್ಧಾರವನ್ನು ತಿಳಿಸಿದ್ದರು. ಆ ಬಳಿಕ ನಾನು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ನಿವೃತ್ತಿ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರೇ ಅಧಿಕೃತವಾಗಿ ಪ್ರಕಟಿಸುವಂತೆ ಸಲಹೆ ನೀಡಿದ್ದೆ," ಎಂದು ತಮೀಮ್‌ ಹೇಳಿದ್ದಾರೆ.

IND vs NZ: ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ವಿಕೆಟ್ ಪಡೆಯದೆ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಜಸ್‌ಪ್ರೀತ್ ಬುಮ್ರಾ!

"ಫೇಸ್‌ಬುಕ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡದಂತೆಯೂ ನಾನು ಮನವಿ ಮಾಡಿದ್ದೆ. ಏಕೆಂದರೆ ಅವರು ಬಾಂಗ್ಲಾದೇಶ ಕ್ರಿಕೆಟ್‌ಗೆ ಅಪಾರ ಸೇವೆ ಸಲ್ಲಿಸಿರುವ ಆಟಗಾರ. ಅವರ ನಿವೃತ್ತಿ ಘೋಷಣೆಯನ್ನು ಗೌರವಯುತವಾಗಿ ಪ್ರಕಟಿಸಬೇಕೆಂದು ಬಯಸಿದ್ದೆ. ಆದರೆ ಮುಷ್ಫಿಕರ್‌ ಅವರ ಮನವಿಯ ಮೇರೆಗೆ ನಾನೇ ಈ ವಿಚಾರವನ್ನು ಪ್ರಕಟಿಸುತ್ತಿದ್ದೇನೆ. ಇಂಗ್ಲೆಂಡ್‌ ವಿರುದ್ಧ ಮಿರ್‌ಪುರದಲ್ಲಿ ನಡೆಯಲಿರುವ ಟೆಸ್ಟ್‌ ಪಂದ್ಯವೇ ಅವರ ಕೊನೆಯ ಪಂದ್ಯವಾಗಿರಲಿದೆ," ಎಂದು ತಮೀಮ್‌ ತಿಳಿಸಿದ್ದಾರೆ.

ಮುಷ್ಫಿಕರ್‌ ರಹೀಮ್‌ ಅವರ ಟೆಸ್ಟ್‌ ದಾಖಲೆಗಳು

ಬಾಂಗ್ಲಾದೇಶ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ದಾಖಲೆ ಮುಷ್ಫಿಕರ್‌ ರಹೀಮ್‌ ಹೆಸರಿನಲ್ಲಿದೆ. ಇದುವರೆಗೆ 108 ಟೆಸ್ಟ್‌ ಪಂದ್ಯಗಳನ್ನಾಡಿರುವ ಅವರು 38.80ರ ಸರಾಸರಿಯಲ್ಲಿ 7,062 ರನ್‌ ಗಳಿಸಿದ್ದಾರೆ. ಇದರಲ್ಲಿ 14 ಶತಕ ಹಾಗೂ 30 ಅರ್ಧಶತಕಗಳು ಸೇರಿವೆ. ಬಾಂಗ್ಲಾದೇಶದ ಬೇರೆ ಯಾವುದೇ ಬ್ಯಾಟರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 5,500 ರನ್‌ಗಳ ಗಡಿ ದಾಟಿಲ್ಲ. ಶತಕಗಳ ಪಟ್ಟಿಯಲ್ಲಿ ಮೊಮಿನುಲ್‌ ಹಕ್‌ 13 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಬಾಂಗ್ಲಾದೇಶ ಪರ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿದ ಆಟಗಾರ ಎಂಬ ಹೆಗ್ಗಳಿಕೆಯೂ ಮುಷ್ಫಿಕರ್‌ ಅವರದ್ದಾಗಿದೆ. ಅವರ ಹೊರತಾಗಿ ಬಾಂಗ್ಲಾದೇಶದ ಯಾವುದೇ ಆಟಗಾರ 100 ಟೆಸ್ಟ್‌ ಪಂದ್ಯಗಳನ್ನಾಡಿಲ್ಲ.



ನಾಯಕನಾಗಿಯೂ ವಿಶೇಷ ಸಾಧನೆ

ಮುಷ್ಫಿಕರ್‌ ರಹೀಮ್‌ ಬಾಂಗ್ಲಾದೇಶ ಟೆಸ್ಟ್‌ ತಂಡದ ನಾಯಕನಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ನಾಯಕತ್ವದಲ್ಲಿ ತಂಡ 34 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 18 ಪಂದ್ಯಗಳಲ್ಲಿ ಸೋಲು ಕಂಡಿದೆ. ಬಾಂಗ್ಲಾದೇಶ ಪರ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ದಾಖಲೆ ಕೂಡ ಅವರ ಹೆಸರಿನಲ್ಲಿದೆ.

2005ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪದಾರ್ಪಣೆ ಮಾಡಿದ್ದ ಮುಷ್ಫಿಕರ್‌, ಇದೀಗ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನು ಮಿರ್‌ಪುರದಲ್ಲಿ ಆಡಲಿದ್ದಾರೆ. 2027ರ ಮೇ ತಿಂಗಳಲ್ಲಿ ಇಂಗ್ಲೆಂಡ್‌ ಆತಿಥ್ಯದಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ಭಾಗವಹಿಸಲಿದೆ. ಆದರೆ ಆ ವೇಳೆಗೆ ಮುಷ್ಫಿಕರ್‌ ನಿವೃತ್ತರಾಗಿರುವುದರಿಂದ ಮತ್ತೊಮ್ಮೆ ಲಾರ್ಡ್ಸ್‌ನಲ್ಲಿ ಆಡುವ ಅವಕಾಶ ಅವರಿಗೆ ಸಿಗುವುದಿಲ್ಲ. ತಮ್ಮ ವೃತ್ತಿಜೀವನದಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ಅವರು ಎರಡು ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ.

IND vs NZ: ಭಾರತ ತಂಡದಲ್ಲಿ ಬೆಂಚ್‌ ಕಾಯುತ್ತಿರುವ ಮೊಹಮ್ಮದ್‌ ಸಿರಾಜ್‌ ಬಗ್ಗೆ ಭವಿಷ್ಯ ನುಡಿದ ಆರ್‌ ಅಶ್ವಿನ್‌!

ಈಗಾಗಲೇ 2022ರ ಸೆಪ್ಟೆಂಬರ್‌ನಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮುಷ್ಫಿಕರ್‌, 2025ರ ಚಾಂಪಿಯನ್ಸ್‌ ಟ್ರೋಫಿ ಬಳಿಕ ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳಿದ್ದರು. ಇದೀಗ ಟೆಸ್ಟ್‌ ಕ್ರಿಕೆಟ್‌ನಿಂದಲೂ ಹಿಂದೆ ಸರಿಯುವ ನಿರ್ಧಾರದೊಂದಿಗೆ ಅವರ 22 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಯಣ ಅಂತ್ಯಗೊಳ್ಳಲಿದೆ.