ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'2-3 ವರ್ಷಗಳಲ್ಲಿ ನೀನು ಭಾರತ ತಂಡಕ್ಕಾಗಿ ಆಡುವೆ': ಮೆಂಟರ್‌ ಯುವಿ ಮಾತನ್ನು ನೆನೆದ ಅಭಿಷೇಕ್‌ ಶರ್ಮಾ!

ಭಾರತ ತಂಡದ ಅಭಿಷೇಕ್ ಶರ್ಮಾ ತಮ್ಮ ಕ್ರಿಕೆಟ್ ಗುರು ಯುವರಾಜ್ ಸಿಂಗ್ ಮಾರ್ಗದರ್ಶನವನ್ನು ಸ್ಮರಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅಭಿಷೇಕ್, ಯುವರಾಜ್ ಸಿಂಗ್ ಅವರ ಮಾರ್ಗದರ್ಶನ ನನ್ನ ಕ್ರಿಕೆಟ್ ಕರಿಯರ್ ಮೇಲೆ ಬಹುದೊಡ್ಡ ಪ್ರಭಾವ ಬೀರಿದೆ ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಯುವರಾಜ್‌ ಸಿಂಗ್‌ ಹೇಳಿದ್ದ ಮಾತುಗಳನ್ನು ಸ್ಮರಿಸಿದ ಅಭಿಷೇಕ್‌ ಶರ್ಮಾ.

ದುಬೈ: ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್ ಶರ್ಮಾ (Abhishek Sharma) ಸದ್ಯ ಭಾರತ ತಂಡದಲ್ಲಿ (India) ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಕ್ರಿಕೆಟ್ ಗುರು ಯುವರಾಜ್ ಸಿಂಗ್ (Yuvraj Singh) ಅವರ ಮಾರ್ಗದರ್ಶನದ ಕುರಿತು ಕೆಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ನನ್ನ ವೃತ್ತಿ ಬದುಕಿನ ಸಂಕಷ್ಟದ ಸಮಯದಲ್ಲಿ ಯುವರಾಜ್ ಸಿಂಗ್ ತುಂಬಾ ಸಹಾಯ ಮಾಡಿದ್ದು, ಅವರ ಮಾರ್ಗದರ್ಶನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿತು. ಹಾಗಾಗಿ ಮಾಜಿ ಕ್ರಿಕೆಟಿಗ ಮತ್ತು ಅಭಿಷೇಕ್ ನಡುವೆ ಗುರು-ಶಿಷ್ಯರ ನಡುವಿನ ಬಾಂಧ್ಯವ್ಯವಿದೆ. ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ ಎನ್ನುವ ಹೊಸ ಸೀಸನ್‌ನಲ್ಲಿ ಮಾತನಾಡಿದ ಅಭಿಷೇಕ್‌ ಶರ್ಮಾ, ಯುವರಾಜ್ ಸಿಂಗ್ ತಮ್ಮನ್ನ ಹೇಗೆ ಪ್ರೇರೇಪಿಸುತ್ತಿದ್ದರು ಎಂದು ಗೌರವ್ ಕಪೂರ್ ಅವರೊಂದಿಗೆ ಹಂಚಿಕೊಂಡರು.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಸಮಯದಲ್ಲಿ ನಾನು ಸ್ವಲ್ಪ ಕಷ್ಟಪಡುತ್ತಿದ್ದೆ. ಐಪಿಎಲ್‌ನಲ್ಲೂ ನಾನು ಸ್ಥಿರವಾಗಿರಲಿಲ್ಲ ಮತ್ತು ತಂಡದ ಪ್ಲೇಯಿಂಗ್ XIನಲ್ಲಿಯೂ ನಾನು ಇರಲಿಲ್ಲ. ಶುಭ್‌ಮನ್ ಆಗಲೇ ಭಾರತ ತಂಡದ ಪರ ಆಡುತ್ತಿದ್ದರು. ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ, ಹೌದು! ನಾನು ಸ್ವಲ್ಪ ತಡವಾಗಿದ್ದೇನೆ, ನಮ್ಮ ಗುಂಪಿನಲ್ಲಿದ್ದವರಿಗಿಂತ ನಾನು ಹಿಂದೆ ಬಿದ್ದಿದ್ದೇನೆ," ಎಂದು ಹೇಳಿದ್ದಾರೆ.

IND vs WI 1st Test: ವಿಂಡೀಸ್‌ ಎದುರು ಮೊದಲನೇ ದಿನ ಪ್ರಾಬಲ್ಯ ಸಾಧಿಸಿದ ಭಾರತ ತಂಡ!

"ನಂತರ, ಪಾಜಿ (ಯುವರಾಜ್‌ ಸಿಂಗ್‌) ನನ್ನನ್ನು ಮನೆಗೆ ಕರೆದಿದ್ದರು. ಶುಭಮನ್ ಮತ್ತು ನಾನು ಪಾಜಿ ಜೊತೆ ಊಟ ಮಾಡುತ್ತಿದ್ದೆವು. ಪಾಜಿ ನೇರವಾಗಿ ನನಗೆ, ʻನಾನು ನಿನ್ನನ್ನು ರಾಜ್ಯ ತಂಡಕ್ಕೆ ಸಿದ್ಧಪಡಿಸುತ್ತಿಲ್ಲ, ಐಪಿಎಲ್‌ಗೆ ಸಿದ್ಧಪಡಿಸುತ್ತಿಲ್ಲ, ಕೇವಲ ವಿಷಯಗಳನ್ನು ನಿರ್ವಹಿಸಲು ನಾನು ನಿನ್ನನ್ನು ಸಿದ್ಧಪಡಿಸುತ್ತಿಲ್ಲ. ನಾನು ನಿನ್ನನ್ನು ಭಾರತಕ್ಕಾಗಿ ಆಡಲು ಸಿದ್ಧಪಡಿಸುತ್ತಿದ್ದೇನೆ. ನೀವು ಭಾರತದ ಪರ ಪಂದ್ಯಗಳನ್ನು ಗೆಲ್ಲಬೇಕು. ಇದನ್ನು ಬರೆದಿಟ್ಟುಕೊಳ್ಳಿ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನೀವು ಆಡುತ್ತೀರಿʼ ಎಂದು ಹೇಳಿದ್ದರು," ಎಂಬುದನ್ನು ಅಭಿಷೇಕ್‌ ಶರ್ಮಾ ತಿಳಿಸಿದ್ದಾರೆ.

ನನ್ನ ಗುರಿ ಬೇರೆ ಇರಬಹುದೆಂದು ಭಾಸವಾಗಿತ್ತು: ಅಭಿಷೇಕ್‌

ಯುವಿ ಅವರ ಜೊತೆಗಿನ ಈ ಭೇಟಿ ನನ್ನ ಮನಸ್ಥಿತಿಯನ್ನು ಬದಲಾಯಿಸಿತು ಮತ್ತು ಉತ್ತಮ ದರ್ಜೆಗೇರಲು ತಯಾರಿ ನಡೆಸಬೇಕು ಮತ್ತು ಭಾರತಕ್ಕಾಗಿ ಪ್ರದರ್ಶನ ನೀಡಬೇಕೆಂದು ಪ್ರೇರೇಪಿಸಿತು ಎಂದು ಪಂಜಾಬ್‌ ಆರಂಭಿಕ ಹೇಳಿಕೊಂಡಿದ್ದಾರೆ.

WI vs IND 1st Test: 3 ವಿಕೆಟ್‌ ಕಿತ್ತು ಹಲವು ದಾಖಲೆ ಬರೆದ ಜಸ್‌ಪ್ರೀತ್‌ ಬುಮ್ರಾ

"ಅಂದರೆ, ಈ ಮಾತು ನಾನು ಆರಾಧಿಸುತ್ತಿದ್ದ ವ್ಯಕ್ತಿಯಿಂದ ಬಂದಿದೆ. ಅವರು ಹೀಗೆ ಹೇಳುತ್ತಿದ್ದರೆ, ಅವರಿಗೆ ನನ್ನ ಮೇಲೆ ತುಂಬಾ ನಂಬಿಕೆ ಇದೆ ಎಂದರ್ಥ. ನಾನು ನನ್ನೊಳಗೆ ಯೋಚಿಸಿದೆ, ಹೌದು! ಇದು ವಿಶೇಷವಾಗಿದೆ ಎಂದು ನನಗೆ ಅನಿಸಿತ್ತು. ಶಿಬಿರದ ನಂತರ, ನನ್ನ ಗುರಿ ಬೇರೆಯೇ ಎಂದು ನನಗೆ ಅನಿಸಿತು. ಭಾರತ ತಂಡದ ಪರ ಉತ್ತಮ ಪ್ರದರ್ಶನ ತೋರಲು ಮತ್ತು ಇನಿಂಗ್ಸ್ ಮುನ್ನಡೆಸಲು ನಾನು ಉತ್ತಮವಾಗಿ ಸಿದ್ಧನಾಗಿದ್ದೆ. ನಾನು ಏನು ಅಂದುಕೊಂಡಿದ್ದೆ, ಅದನ್ನೇ ನಾನು ಸಾಧಿಸುತ್ತೇನೆ.

ಇತ್ತೀಚೆಗೆ ಮುಕ್ತಾಯಗೊಂಡಿದ್ದ 2025 ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.