ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪನ್ನುನ್ ಹತ್ಯೆ ಸಂಚು ಪ್ರಕರಣ: ನಿಖಿಲ್ ಗುಪ್ತಾಗೆ ಅಮೆರಿಕದಲ್ಲಿ 19 ವರ್ಷಕ್ಕೂ ಹೆಚ್ಚು ಅವಧಿ ಜೈಲು ಶಿಕ್ಷೆ!

ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸುಪಾರಿ ನೀಡುವ ಸಂಚಿನಲ್ಲಿ ಭಾಗಿಯಾಗಿದ್ದ ಭಾರತೀಯ ಪ್ರಜೆ ನಿಖಿಲ್ ಗುಪ್ತಾಗೆ ಅಮೆರಿಕದ ನ್ಯಾಯಾಲಯ 235 ತಿಂಗಳು ಅಂದರೆ ಸುಮಾರು 19 ವರ್ಷ ಏಳು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಅವರು ಮೂರು ಆರೋಪಗಳನ್ನು ಒಪ್ಪಿಕೊಂಡಿದ್ದರು.

ನಿಖಿಲ್ ಗುಪ್ತಾಗೆ ಅಮೆರಿಕದಲ್ಲಿ 19 ವರ್ಷಕ್ಕೂ ಹೆಚ್ಚು ಅವಧಿ ಜೈಲು ಶಿಕ್ಷೆ!

ನ್ಯೂಯಾರ್ಕ್: ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ( Gurpatwant Singh Pannun) ಸುಪಾರಿ ನೀಡುವ ಸಂಚಿನಲ್ಲಿ ಭಾಗಿಯಾಗಿದ್ದ ಭಾರತೀಯ ಪ್ರಜೆ ನಿಖಿಲ್ ಗುಪ್ತಾಗೆ (Nikhil Gupta) ಅಮೆರಿಕದ ನ್ಯಾಯಾಲಯ 19 ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸಿದೆ. ನ್ಯೂಯಾರ್ಕ್‌ನಲ್ಲಿರುವ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ 55 ವರ್ಷದ ನಿಖಿಲ್ ಗುಪ್ತಾಗೆ 235 ತಿಂಗಳು ಅಂದರೆ ಸುಮಾರು 19 ವರ್ಷ ಏಳು ತಿಂಗಳ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.

ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಫೆಡರಲ್ ನ್ಯಾಯಾಧೀಶ ವಿಕ್ಟರ್ ಮರೇರೊ ಶುಕ್ರವಾರ ಈ ಶಿಕ್ಷೆಯನ್ನು ಪ್ರಕಟಿಸಿದರು. ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ನಿಖಿಲ್ ಗುಪ್ತಾ, ಹತ್ಯೆಗೆ ಸುಪಾರಿ ನೀಡಲು ಸಂಚು ರೂಪಿಸಿದ ಆರೋಪ, ಹತ್ಯೆ ಸಂಚಿಗೆ ಸಹಕರಿಸಿದ ಆರೋಪ ಹಾಗೂ ಹಣ ಅಕ್ರಮ ವರ್ಗಾವಣೆ ಸಂಚು ಸೇರಿದಂತೆ ಮೂರು ಆರೋಪಗಳನ್ನು ಒಪ್ಪಿಕೊಂಡಿದ್ದರು.

ಮಂಡ್ಯದಲ್ಲಿ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ 'ಅಲ್ಲಾಹು ಅಕ್ಬರ್' ಘೋಷಣೆ ಕೂಗಿದ ಮುಸ್ಲಿಂ ಯುವಕ; ವಿಡಿಯೊ ವೈರಲ್‌

ಏನಿದು ಪನ್ನುನ್ ಹತ್ಯೆ ಸಂಚು ಪ್ರಕರಣ?

ಅಮೆರಿಕದ ಪ್ರಾಸಿಕ್ಯೂಟರ್‌ಗಳ ಆರೋಪದ ಪ್ರಕಾರ, 2023ರಲ್ಲಿ ವಿಕಾಶ್ ಯಾದವ್ ಎಂಬಾತನ ಸೂಚನೆಯಂತೆ ನಿಖಿಲ್ ಗುಪ್ತಾ, ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಮಾಡಲು ವ್ಯಕ್ತಿಯೊಬ್ಬನನ್ನು ಸಂಪರ್ಕಿಸಿದ್ದರು. ಆದರೆ, ಗುಪ್ತಾ ಭಾವಿಸಿದ್ದ ಹತ್ಯೆ ಮಾಡಲು ನೆರವಾಗುವ ವ್ಯಕ್ತಿ ವಾಸ್ತವದಲ್ಲಿ ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ಸಂಸ್ಥೆಯ ರಹಸ್ಯ ಮಾಹಿತಿದಾರನಾಗಿದ್ದ.

ಪನ್ನುನ್ ಹತ್ಯೆಗಾಗಿ ಒಂದು ಲಕ್ಷ ಅಮೆರಿಕನ್ ಡಾಲರ್ ಪಾವತಿಸಲು ವಿಕಾಶ್ ಯಾದವ್ ಒಪ್ಪಿಕೊಂಡಿದ್ದರು ಎಂದು ಅಮೆರಿಕದ ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ಪೈಕಿ 15 ಸಾವಿರ ಡಾಲರ್ ಮುಂಗಡ ಹಣವನ್ನು 2023ರ ಜೂನ್‌ನಲ್ಲಿ ನೀಡಲಾಗಿತ್ತು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅಮೆರಿಕದ ಅಧಿಕಾರಿಗಳು ಸಂಚನ್ನು ಪತ್ತೆಹಚ್ಚಿ ಹತ್ಯೆಯನ್ನು ವಿಫಲಗೊಳಿಸಿದ್ದರು.

ಮಣಿಪುರದಲ್ಲಿ ಕಳ್ಳಭಟ್ಟಿ ದುರಂತ: 11 ಮಂದಿ ದುರ್ಮರಣ, 181 ಜನರ ಸ್ಥಿತಿ ಗಂಭೀರ

ನಿಖಿಲ್ ಗುಪ್ತಾರನ್ನು 2023ರ ಜೂನ್ 30ರಂದು ಜೆಕ್ ಗಣರಾಜ್ಯದ ಪ್ರಾಗ್‌ನಲ್ಲಿ ಬಂಧಿಸಲಾಗಿತ್ತು. ಬಳಿಕ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ವಿಕಾಶ್ ಯಾದವ್ ಪ್ರಸ್ತುತ ಅಮೆರಿಕದ ವಶದಲ್ಲಿಲ್ಲ.

ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿದ ನಿಖಿಲ್ ಗುಪ್ತಾ

ಶಿಕ್ಷೆ ಪ್ರಕಟಿಸುವ ಸಂದರ್ಭದಲ್ಲಿ ನಿಖಿಲ್ ಗುಪ್ತಾ ನ್ಯಾಯಾಲಯದಲ್ಲಿ ಪನ್ನುನ್ ಹಾಗೂ ತಾವು ನೋವುಂಟು ಮಾಡಿದ ಸಮುದಾಯಗಳ ಬಳಿ ಕ್ಷಮೆಯಾಚಿಸಿದರು. ತಮ್ಮ ಕುಟುಂಬಕ್ಕೂ ನೋವುಂಟು ಮಾಡಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದರು. ಶಿಕ್ಷೆ ಪೂರ್ಣಗೊಂಡ ಬಳಿಕ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಮತ್ತೊಂದೆಡೆ ನ್ಯಾಯಾಲಯದಲ್ಲಿ ಮಾತನಾಡಿದ ಪನ್ನುನ್, ತಮ್ಮ ಜೀವಕ್ಕೆ ಅಪಾಯ ಎದುರಾದ ಹಿನ್ನೆಲೆಯಲ್ಲಿ 1,200 ದಿನಗಳಿಗೂ ಹೆಚ್ಚು ಕಾಲ ವಕೀಲ ವೃತ್ತಿಯನ್ನು ಸಾಮಾನ್ಯವಾಗಿ ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

Bengaluru Murder Case: ಮಹಿಳೆ ಅಸ್ಥಿಪಂಜರ ಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್; ಅಕ್ರಮ ಸಂಬಂಧ ಹಿನ್ನೆಲೆ ಪತ್ನಿಯ ಕತೆ ಮುಗಿಸಿದ್ದ 2ನೇ ಗಂಡ!

ಭಾರತದ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದ ಸರ್ಕಾರ

ಈ ಪ್ರಕರಣದಲ್ಲಿ ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರ ಪಾತ್ರವಿದೆ ಎಂಬ ಅಮೆರಿಕದ ಆರೋಪಗಳನ್ನು ಭಾರತ ಸರ್ಕಾರ ಈ ಹಿಂದೆ ತಳ್ಳಿಹಾಕಿತ್ತು. ಇಂತಹ ಕೃತ್ಯಗಳು ಸರ್ಕಾರದ ನೀತಿಗೆ ವಿರುದ್ಧವಾಗಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು. ಪ್ರಕರಣದ ಆರೋಪಗಳನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನೂ ರಚಿಸಲಾಗಿತ್ತು.

ನಿಖಿಲ್ ಗುಪ್ತಾ ಪರ ವಕೀಲರು, ಅವರು ಈ ಸಂಚಿನ ಪ್ರಮುಖ ಸೂತ್ರಧಾರರಲ್ಲ ಎಂದು ವಾದಿಸಿದ್ದರು. ಶಿಕ್ಷೆಯನ್ನು ಭಾರತಕ್ಕೆ ನೀಡುವ ಸಂದೇಶವಾಗಿ ಪರಿಗಣಿಸದೆ, ಗುಪ್ತಾ ಅವರ ಪಾತ್ರಕ್ಕೆ ಅನುಗುಣವಾಗಿ ನಿರ್ಧರಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ 235 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.