ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಅಪಾಯಕಾರಿ ಆರಂಭಿಕ ವೈಭವ್ ಸೂರ್ಯವಂಶಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಏಕೆಂದರೆ, ಅವರು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಈ ಸೀಸನ್‌ನಲ್ಲಿ 400 ರನ್‌ಗಳನ್ನು ದಾಟಿ ಆರೆಂಜ ಕ್ಯಾಪ್ ಅನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ, ಇವರ ಆರಂಭಿಕ ಜೊತೆಗಾರ ಯಶಸ್ವಿ ಜೈಸ್ವಾಲ್ (Yashasvi jaiswal) ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ, ಅವರು ಕೂಡ 306 ರನ್‌ಗಳನ್ನು ಕಲೆ ಹಾಕಿದ್ದಾರೆ. ಆದರೆ, ವೈಭವ್ ಸೂರ್ಯವಂಶಿ ಬಗ್ಗೆ ಎಲ್ಲರೂ ಚರ್ಚೆ ನಡೆಸುತ್ತಿದ್ದಾರೆ, ಆದರೆ, ಮೌನವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಯಶಸ್ವಿ ಜೈಸ್ವಾಲ್ ಬಗ್ಗೆ ಯಾರೂ ತುಟಿ ಬಿಚ್ಚುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಯಶಸ್ವಿ ಜೈಸ್ವಾಲ್ ಅವರ ಪ್ರದರ್ಶನವನ್ನು ಹೈಲೈಟ್ ಮಾಡಿದ್ದಾರೆ. ಅವರು, "ಕಳೆದ ಮೂರು ವರ್ಷಗಳಲ್ಲಿ ಅವರ ಅಂಕಿಅಂಶಗಳನ್ನು ನೋಡಿ. ಅವರು 2024ರಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು, ನಂತರ ಅವರನ್ನು ಹೊರಗಿಟ್ಟರು. ಎಲ್ಲರೂ ಆಯ್ಕೆಯಾಗುತ್ತಾರೆ ಮತ್ತು ಹೊರಗೊಳ್ಳುತ್ತಾರೆ, ಆದರೆ ಅವರ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಾನು ಅವರನ್ನು ಆಯ್ಕೆ ಮಾಡಲೇಬೇಕು ಎಂದು ಹೇಳುವುದಿಲ್ಲ. ಭಾರತ ತಂಡದಲ್ಲಿ ಖಾಲಿ ಸ್ಥಾನ ಇಲ್ಲ ಎಂಬುದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ.
IPL 2026: ಸ್ಫೋಟಕ ಬ್ಯಾಟಿಂಗ್ ಮೂಲಕವೇ ಐಪಿಎಲ್‌ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಸೂರ್ಯವಂಶಿ
ಜೈಸ್ವಾಲ್ ಆಯ್ಕೆ ಸಂಬಂಧಿತ ಚರ್ಚೆಗಳಲ್ಲೂ ಕೂಡ ನಡೆಯುತ್ತಿಲ್ಲ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ಹೇಳಿದ್ದಾರೆ. ಅವರು 2024ರ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರೂ, ಆ ಟೂರ್ನಿಯಲ್ಲಿ ಒಂದೇ ಪಂದ್ಯದಲ್ಲೂ ಆಡಲು ಅವಕಾಶ ಸಿಕ್ಕಿರಲಿಲ್ಲ.
ಯಶಸ್ವಿ ಜೈಸ್ವಾಲ್ ಮಾಡಿದ ತಪ್ಪೇನು?
2025ರ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಅವರನ್ನು ವಿಶ್ರಾಂತಿ ನೀಡಲಾಗಿತ್ತು. ಆ ಸಮಯದಲ್ಲಿ ಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ನೀಡಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡರು. ನಂತರ ಜೈಸ್ವಾಲ್ ಅವರನ್ನು ಏಷ್ಯಾ ಕಪ್ ಟೂರ್ನಿಯಲ್ಲಿಯೂ ಪರಿಗಣಿಸಲಿಲ್ಲ ಮತ್ತು ಅವರು ಈಗ ಎರಡು ವರ್ಷಗಳಿಂದ ಟಿ20ಐ ಪಂದ್ಯವನ್ನೂ ಆಡಿಲ್ಲ.
IPL 2026 ಫೈನಲ್‌ಗೆ ಅರ್ಹತೆ ಪಡೆಯಬಲ್ಲ 2 ತಂಡಗಳನ್ನು ಆರಿಸಿದ ಸೌರವ್ ಗಂಗೂಲಿ!
“ಕಳೆದ ಮೂರು ವರ್ಷಗಳ ಐಪಿಎಲ್ ಅಂಕಿಅಂಶಗಳನ್ನು ನೋಡಿದರೆ, ಅವರು ರನ್‌ಗಳನ್ನು ಗಳಿಸಿದ್ದಾರೆ ಮತ್ತು ಉತ್ತಮ ಸರಾಸರಿ ಹಾಗೂ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದಾರೆ. ಆದರೂ ಆಯ್ಕೆ ವಿಚಾರವನ್ನು ಬದಿಗಿಟ್ಟು ನೋಡಿದರೆ, ಅವರು ಚರ್ಚೆಯಲ್ಲಿಯೂ ಇಲ್ಲ. 2024ರ ನಂತರ ತೆಗೆದುಕೊಂಡ ನಿರ್ಧಾರವು ಹಾಲಿನಿಂದ ಈಚೆಯನ್ನು ತೆಗೆದು ಹೊರಹಾಕಿದಂತಾಗಿದೆ. ಆ ಆಟಗಾರನ ತಪ್ಪೇನು?” ಎಂದು ಆಕಾಶ ಚೋಪ್ರಾ ಪ್ರಶ್ನೆ ಮಾಡಿದ್ದಾರೆ.
ಸ್ಥಿರವಾಗಿ ಟೆಸ್ಟ್ ಆಡುತ್ತಿರುವ ಜೈಸ್ವಾಲ್
ಜೈಸ್ವಾಲ್ ಎರಡು ವರ್ಷಗಳಿಂದ ಟಿ20ಐ ತಂಡದಿಂದ ಹೊರಗಿದ್ದರೂ, ಅವರು ಟೆಸ್ಟ್ ತಂಡದಲ್ಲಿ ನಿಯಮಿತ ಸದಸ್ಯರಾಗಿದ್ದಾರೆ. ಈ ಎಡಗೈ ಬ್ಯಾಟರ್ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಪದಾರ್ಪಣೆ ಮಾಡಿ, ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದರು.
IPL 2026: ರಾಜಸ್ಥಾನ್ ವಿರುದ್ಧ ಸೋಲಿಗೆ ಬೌಲರ್‌ಗಳನ್ನು ದೂರಿದ ಶ್ರೇಯಸ್ ಅಯ್ಯರ್
ಇದುವರೆಗೆ ಜೈಸ್ವಾಲ್ 28 ಟೆಸ್ಟ್ ಪಂದ್ಯಗಳಲ್ಲಿ 49.23ರ ಸರಾಸರಿಯಲ್ಲಿ 2511 ರನ್‌ಗಳನ್ನು ಗಳಿಸಿದ್ದಾರೆ. ಅವರ ದಾಖಲೆಯಲ್ಲಿ 7 ಶತಕಗಳು ಮತ್ತು 13 ಅರ್ಧಶತಕಗಳು ಸೇರಿವೆ. ಅವರು ಇದುವರೆಗೆ ಕೇವಲ 4 ಒಡಿಐ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. 2025ರ ಡಿಸೆಂಬರ್‌ನಲ್ಲಿ ವೈಜಾಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ತಮ್ಮ ಕೊನೆಯ ಒಡಿಐ ಪಂದ್ಯದಲ್ಲೂ ಅವರು ಶತಕ ಬಾರಿಸಿದ್ದರು.