ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ(Inian Cricket) ಸಾಕಷ್ಟು ದಿಗ್ಗಜ ಬೌಲರ್‌ಗಳು ಆಡಿದ್ದಾರೆ. ಕಪಿಲ್ ದೇವ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಜಸ್‌ಪ್ರೀತ್ ಬುಮ್ರಾ, ಅನಿಲ್ ಕುಂಬ್ಳೆ, ಆರ್ ಅಶ್ವಿನ್, ಹರ್ಭಜನ್ ಸಿಂಗ್ ಸೇರಿದಂತೆ ಸಾಕಷ್ಟು ದಿಗ್ಗಜರು ಭಾರತ ತಂಡದ ಪರ ಆಡಿದ್ದಾರೆ. ಇವರು ಭಾರತ ತಂಡವನ್ನು ಪ್ರತಿನಿಧಿಸಿದ ಶ್ರೇಷ್ಠ ಬೌಲರ್‌ಗಳೆಂದರೆ ತಪ್ಪಾಗಲಾರದು. ಭಾರತದ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಅದರಂತೆ ಇತ್ತೀಚೆಗೆ ಸ್ಪಿನ್ ದಂತಕತೆಗಳಾದ ಆರ್ ಅಶ್ವಿನ್ (R Ashwin) ಹಾಗೂ ಹರ್ಭಜನ್ ಸಿಂಗ್ (Harbhajan Singh) ಅವರು ʻಕುಟ್ಟಿ ಸ್ಟೋರಿಸ್ ವಿಥ್ ಆಶ್ʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಹರ್ಭಜನ್ ಸಿಂಗ್ ಹಲವು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನ ʻಕುಟ್ಟಿ ಸ್ಟೋರಿಸ್ ವಿಥ್ ಆಶ್ʼ ಕಾರ್ಯಕ್ರಮಕ್ಕೆ ಹರ್ಭಜನ್ ಸಿಂಗ್ ಅವರನ್ನು ಆರ್ ಅಶ್ವಿನ ಕರೆದಿದ್ದರು. ಈ ವೇಳೆ ಹರ್ಭಜನ್ ಸಿಂಗ್‌ಗೆ ಆರ್ ಅಶ್ವಿನ್ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಅದರಂತೆ ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲಿಂಗ್ ಮ್ಯಾಚ್ ವಿನ್ನರ್ ಯಾರೆಂದು ಕೇಳಲಾಯಿತು. ಈ ವೇಳೆ ಹರ್ಭಜನ್ ಸಿಂಗ್, ಭಾರತದ ಸ್ಪಿನ್ ದಂತಕತೆ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ಆಯ್ಕೆ ಮಾಡಿಕೊಂಡರು.
IND vs ENG: ವೀರೇಂದ್ರ ಸೆಹ್ವಾಗ್‌ರ ದೊಡ್ಡ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್ ಪಂತ್!
"ಚೆನ್ನೈನಲ್ಲಿ ಕೆಂಪ್ಲಾಸ್ಟ್ ಪರ ಆಡುತ್ತಿದ್ದಾಗ ನಾನು ಅನಿಲ್ ಭಾಯ್ ಜೊತೆ ಕೊನೆಯ ಬಾರಿ ಆಡಿದ್ದೆ. ಅವರು ಅಲ್ಲಿ ನನ್ನ ಮೊದಲ ನಾಯಕರಾಗಿದ್ದರು. ಖಂಡಿತ, ಜನರು ನಾನು ವಿಕೆಟ್ ಪಡೆದಿದ್ದೇನೆ ಎಂದು ಹೇಳುತ್ತಾರೆ, ನೀವು ಅಥವಾ ಕಪಿಲ್ ಪಾಜಿ ಕೂಡ ಹಾಗೆ ಮಾಡಿದ್ದೀರಿ, ಆದರೆ ಅನಿಲ್ ಕುಂಬ್ಳೆ ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್ ಮತ್ತು ಮೈದಾನದಲ್ಲಿ ಅವರು ಅತಿದೊಡ್ಡ ಹೋರಾಟಗಾರ ಎಂದು ನಾನು ಭಾವಿಸುತ್ತೇನೆ. ನಾವೆಲ್ಲರೂ ಅವರನ್ನು ಗೌರವಿಸುತ್ತಿದ್ದೆವು. ಅವರಿಗೆ ಒಂದು ವಿಧಾನವಿದೆ, 'ಇದನ್ನು ಹೀಗೆ ಮಾಡಲಾಗುತ್ತದೆ ಮತ್ತು 'ನಾನು ಅದನ್ನು ಮಾಡುತ್ತೇನೆ' ಎಂಬ ಮನೋಭಾವವಿದೆ," ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.
"ಅವರು ಪಂದ್ಯವನ್ನು ಗೆಲ್ಲಿಸಲು ಇತರರನ್ನು ಅವಲಂಬಿಸುವುದಿಲ್ಲ. ಅವರು ನಾಯಕರೂ ಆಗಿದ್ದರು. ಅದನ್ನು ಹೇಗೆ ಮಾಡಲಾಗಿದೆ ಎಂಬುದನ್ನು ಅವರು ನಮಗೆ ದಾರಿ ತೋರಿಸುತ್ತಿದ್ದರು. ನಾನು ಅವರೊಂದಿಗೆ ಆಡಿದ ಸಣ್ಣ ಕ್ರಿಕೆಟ್ ಏನೇ ಇರಲಿ ಮತ್ತು ನಾವು ಒಟ್ಟಿಗೆ ಆಡುವಾಗ ನಾನು ಸಾಧಿಸಿದ ಸಣ್ಣದಾದರೂ, ನನಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ, ನಿರ್ದೇಶನಗಳನ್ನು ನೀಡಿದ್ದಕ್ಕಾಗಿ ಅವರಿಗೆ ಬಹಳಷ್ಟು ಶ್ರೇಯ ಸಲ್ಲಬೇಕು," ಎಂದು ಭಾರತದ ಮಾಜಿ ಆಫ್-ಸ್ಪಿನ್ನರ್ ಗುಣಗಾನ ಮಾಡಿದ್ದಾರೆ.
ENG vs IND: ಟೀಂ ಇಂಡಿಯಾಗೆ ಗಾಯಾಳುಗಳ ಚಿಂತೆ; ಆಲ್‌ರೌಂಡರ್ ಸರಣಿಯಿಂದ ಔಟ್!
2001ರಲ್ಲಿ ಸರಣಿಯಲ್ಲಿ ಅನಿಲ್ ಕುಂಬ್ಳೆ ಗಾಯಕ್ಕೆ ತುತ್ತಾಗಿದ್ದರು, ಹಾಗಾಗಿ ಆಗ ಭಾರತ ತಂಡದ ಸ್ಪಿನ್ ವಿಭಾಗವನ್ನು ಹರ್ಭಜನ್ ಸಿಂಗ್ ತಮ್ಮ ಚಿಕ್ಕ ವಯಸ್ಸಿನಲ್ಲಿ ಮುನ್ನಡೆಸಿದ್ದರು. ಈ ವೇಳೆ ಅವರು ಸರಣಿಯಲ್ಲಿ ಒಟ್ಟು 32 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಲ್ಲಿ ಅವರು ಒಮ್ಮೆ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದರು. ಅಂತಿಮವಾಗಿ ಈ ಸರಣಿಯನ್ನು ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡ 2-1 ಅಂತರದಲ್ಲಿ ಗೆದ್ದುಕೊಂಡಿತ್ತು.
ಅನಿಲ್ ಕುಂಬ್ಳೆ ಅಂಕಿಅಂಶ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅನಿಲ್ ಕುಂಬ್ಳೆ. 1990 ರಿಂದ 2008 ರವರೆಗೆ ಭಾರತದ ಮಾಜಿ ನಾಯಕ 401 ಪಂದ್ಯಗಳನ್ನು ಆಡಿದ್ದು, 30.06 ರ ಸರಾಸರಿಯಲ್ಲಿ ಒಟ್ಟು 953 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 37 ಐದು ವಿಕೆಟ್‌ಗಳು ಮತ್ತು ಎಂಟು 10 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.