Virat Kohli: 21ನೇ ಶತಮಾನದ ಫ್ಯಾಬ್ 4 ಟೆಸ್ಟ್ ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ ದಿನೇಶ್ ಕಾರ್ತಿಕ್!
Dinesh Karthik picks Fab 4 Test Batters: 2000 ಇಸವಿಯ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆಟಗಾರರ ಪೈಕಿ ದಿನೇಶ್ ಕಾರ್ತಿಕ್ ಅವರು, ತಮ್ಮ ನೆಚ್ಚಿನ ಫ್ಯಾಬ್ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ್ದಾರೆ. ಇದರಲ್ಲಿ ಅವರು ಏಕೈಕ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ-ಸ್ಟೀವನ್ ಸ್ಮಿತ್ ನಡುವೆ ಉತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಅನ್ನು ಆರಿಸಿದ ದಿನೇಶ್ ಕಾರ್ತಿಕ. -

ನವದೆಹಲಿ: ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthik), 2000ರ ಇಸವಿಯ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬ್ಯಾಟ್ಸ್‌ಮನ್‌ಗಳ ಪೈಕಿ ಅತ್ಯುತ್ತಮ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆ ಮಾಡಿದ್ದಾರೆ. ಅಂತಿಮವಾಗಿ ಈ ಎಲ್ಲಾ ಆಟಗಾರರ ಪೈಕಿ 21ನೇ ಶತಮಾನದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಅನ್ನು ಅಂತಿಮಗೊಳಿಸಿದ್ದಾರೆ. ತಮ್ಮ ನೆಚ್ಚಿನ ಫ್ಯಾಬ್ ನಾಲ್ವರು (Fab 4 Batsman) ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿಗೆ (Virat Kohli) ದಿನೇಶ್ ಕಾರ್ತಿಕ್ ಸ್ಥಾನವನ್ನು ನೀಡಿದರೂ ಏಕೈಕ ಶ್ರೇಷ್ಠ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡುವಾಗ ಆರ್‌ಸಿಬಿ ಮೆಂಟರ್, ಆಧುನಿಕ ದಿಗ್ಗಜನನ್ನು ಕೈ ಬಿಟ್ಟು ಆಸ್ಟ್ರೇಲಿಯಾ ಮಾಜಿ ನಾಯಕನನ್ನು ಆರಿಸಿ ಅಚ್ಚರಿ ಮೂಡಿಸಿದ್ದಾರೆ.
ಕ್ರಿಕ್‌ಬಝ್ ಜೊತೆ ಮಾತನಾಡುವ ವೇಳೆ ದಿನೇಶ್ ಕಾರ್ತಿಕ್ ತಮ್ಮ ನೆಚ್ಚಿನ ಟೆಸ್ಟ್ ಬ್ಯಾಟ್ಸ್‌ಮನ್‌ಗಳನ್ನುಆಯ್ಕೆ ಮಾಡಿದ್ದಾರೆ. ಟೆನಿಸ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಮಾದರಿಯ ರೀತಿ 16ನೇ ಸುತ್ತಿನ ಮೂಲಕ ಆಟಗಾರರನ್ನು ಆಯ್ಕೆ ಮಾಡಿದರು. ಪ್ರತಿಯೊಂದು ಹಂತದಲ್ಲಿಯೂ ವಿಜೇತರನ್ನು ಡಿಕೆ ಆರಿಸಿದರು. ಏಂಜೆಲೊ ಮ್ಯಾಥ್ಯೂಸ್ ಬದಲಿಗೆ ವಿರಾಟ್ ಕೊಹ್ಲಿ, ಮೈಕಲ್ ಕ್ಲಾರ್ಕ್ ಬದಲು ಗ್ರೇಮ್ ಸ್ಮಿತ್, ಅಲಸ್ಟೈರ್ ಕುಕ್ ಬದಲಿಗೆ ವೀರೇಂದ್ರ ಸೆಹ್ವಾಗ್ ಹಾಗೂ ಹಾಶಿಮ್ ಆಮ್ಲಾ ಬದಲಿಗೆ ಯೂನಿಸ್ ಖಾನ್ ಅವರನ್ನು ಆಯ್ಕೆ ಮಾಡಿದರು.
ನಂತರ, ಕಿವೀಸ್ ದಿಗ್ಗಜ ಕೇನ್ ವಿಲಿಯಮ್ಸನ್ ಅವರ ಬದಲಿಗೆ ಸ್ಟೀವನ್ ಸ್ಮಿತ್, ಚೇತೇಶ್ವರ್ ಪೂಜಾರ ಬದಲು ಎಬಿ ಡಿ ವಿಲಿಯರ್ಸ್, ಡೇವಿಡ್ ವಾರ್ನರ್ ಬದಲಿಗೆ ಜೋ ರೂಟ್ ಹಾಗೂ ಕೆವಿನ್ ಪೀಟರ್ಸನ್ ಬದಲಿಗೆ ಕುಮಾರ ಸಂಗಕ್ಕಾರ ಅವರನ್ನು ಮತ್ತೊಂದು ತುದಿಯಲ್ಲಿ ದಿನೇಶ್ ಕಾರ್ತಿಕ್ ಆರಿಸಿದ್ದಾರೆ. ಇನ್ನು ಕ್ವಾರ್ಟರ್‌ಫೈನಲ್ಸ್‌ನಲ್ಲಿ ಗ್ರೇಮ್ ಸ್ಮಿತ್ ಬದಲು ವಿರಾಟ್ ಕೊಹ್ಲಿ, ಯೂನಿಸ್ ಖಾನ್ ಅವರ ಬದಲು ವೀರೇಂದ್ರ ಸೆಹ್ವಾಗ್, ಎಬಿ ಡಿ ವಿಲಿಯರ್ಸ್ ಬದಲು ಸ್ಟೀವನ್ ಸ್ಮಿತ್ ಹಾಗೂ ಕುಮಾರ ಸಂಗಕ್ಕಾರ ಬದಲು ಜೋ ರೂಟ್ ಅವರನ್ನು ಡಿಕೆ ಆಯ್ಕೆ ಮಾಡಿದ್ದಾರೆ.
IND vs WI: ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಭಾರತೀಯ ಸೇನೆಗೆ ಸಮರ್ಪಿಸಿದ ಧ್ರುವ್ ಜುರೆಲ್!
ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಸ್ಟೀವನ್ ಸ್ಮಿತ್
ನಂತರ ಅಂತಿಮ ನಾಲ್ಕರ ಸುತ್ತಿನಲ್ಲಿ ದಿನೇಶ್ ಕಾರ್ತಿಕ್, ನಾಲ್ಕು ಆಟಗಾರರ ಪೈಕಿ ಇಬ್ಬರನ್ನು ಆರಿಸಿದ್ದಾರೆ. ಅದರಂತೆ ವೀರೇಂದ್ರ ಸೆಹ್ವಾಗ್ ಬದಲು ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಅವರ ಬದಲು ಸ್ಟೀವನ್ ಸ್ಮಿತ್ ಅವರನ್ನುಆಯ್ಕೆ ಮಾಡಿದ್ದಾರೆ. ಇನ್ನು ಕೊನೆಯ ಸುತ್ತಿನಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಟೀವನ್ ಸ್ಮಿತ್ ಅವರ ನಡುವೆ ಪೈಪೋಟಿ ಬಂದಾಗ ದಿನೇಶ್ ಕಾರ್ತಿಕ್ ಆಸ್ಟ್ರೇಲಿಯಾ ಮಾಜಿ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಆ ಮೂಲಕ ಆಧುನಿಕ ದಿಗ್ಗಜ ಕೊಹ್ಲಿಯನ್ನು ಕಡೆಗಣಿಸಿದ್ದಾರೆ.
ಜೋ ರೂಟ್, ಆಲಸ್ಟೈರ್ ಕುಕ್ ಟೆಸ್ಟ್ ದಾಖಲೆಗಳು
ಈ 16 ಬ್ಯಾಟ್ಸ್‌ಮನ್‌ಗಳ ಪೈಕಿ ಜೋ ರೂಟ್ ಹಾಗೂ ಆಲಸ್ಟೈರ್ ಕುಕ್ ಅವರು ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಜೋ ರೂಟ್ 13,543 ರನ್‌ಗಳನ್ನು ಗಳಿಸಿದ್ದರೆ, ಆಲಸ್ಟೈರ್ ಕುಕ್ 12,472 ರನ್‌ಗಳನ್ನು ದಾಖಲಿಸಿದ್ದಾರೆ. 12400 ರನ್‌ಗಳ ಮೂಲಕ ಕುಮಾರ ಸಂಗಕ್ಕಾರ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿರುವ ಮತ್ತೊರ್ವ ಬ್ಯಾಟ್ಸ್‌ಮನ್ ಆಗಿದ್ದಾರೆ.
IND vs WI: ಶತಕ ಸಿಡಿಸಿದ ಬಳಿಕ ಶಿಳ್ಳೆ ಹೊಡೆದು ಸಂಭ್ರಮಿಸಲು ಕಾರಣ ತಿಳಿಸಿದ ಕೆಎಲ್ ರಾಹುಲ್!
ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ-ಸ್ಮಿತ್ ಅಂಕಿಅಂಶಗಳು
ವಿರಾಟ್ ಕೊಹ್ಲಿ ಹಾಗೂ ಸ್ಟೀವನ್ ಸ್ಮಿತ್ ಅವರು ತಮ್ಮ ವೃತ್ತಿ ಜೀವನದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸಾಕಷ್ಟು ಬಾರಿ ಮುಖಾಮುಖಿಯಾಗಿದ್ದಾರೆ. ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರು ತಮ್ಮ ವೃತ್ತಿ ಜೀವನದಲ್ಲಿ ಆಡಿದ 123 ಪಂದ್ಯಗಳಿಂದ 46.85ರ ಸರಾಸರಿಯಲ್ಲಿ 9,230 ರನ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಅವರು 30 ಶತಕಗಳನ್ನು ಬಾರಿಸಿದ್ದಾರೆ. ಇನ್ನು ಆಸೀಸ್ ದಿಗ್ಗಜ ಸ್ಟೀವನ್ ಸ್ಮಿತ್ ಅವರು ಇನ್ನೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದು, 119 ಪಂದ್ಯಗಳಿಂದ 56.02ರ ಸರಾಸರಿಯಲ್ಲಿ 10,477 ರನ್‌ಗಳನ್ನು ಸೇರಿಸಿದ್ದಾರೆ.