ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯು ಟರ್ನ್‌ ಹೊಡೆದ ಆರ್‌ಸಿಬಿ ವೇಗಿ: ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ತಲೆ ಬಾಗಿದ ನುವಾನ್‌ ತುಷಾರ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಎನ್‌ಒಸಿ ನೀಡಲು ನಿರಾಕರಿಸಿದ್ದ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ವಿರುದ್ಧ ನ್ಯಾಯಾಲಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವೇಗಿ ನುವಾನ್‌ ತುಷಾರ ದೂರು ನೀಡಿದ್ದರು. ಇದೀಗ ಅವರು ಯೂಟರ್ನ್‌ ಹೊಡೆದಿದ್ದು, ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಎದುರು ಕ್ಷಮೆ ಕೇಳಿದ್ದಾರೆ.

ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಬಳಿ ಕ್ಷಮೆಯಾಚಿಸಿದ ನುವಾನ್‌ ತುಷಾರ.

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಪರ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026: ಟೂರ್ನಿಯಲ್ಲಿ ಆಡಲು ಉತ್ಸುಕರಾಗಿದ್ದ ಶ್ರೀಲಂಕಾ ವೇಗಿ ನುವಾನ್‌ ತುಷಾರ (Nuwan Tushara) ಅವರಿಗೆ ಎನ್‌ಒಸಿ ನೀಡಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ನಿರಾಕರಿಸಿತ್ತು. ಹಾಗಾಗಿ ತಮ್ಮ ರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ನುವಾನ್‌, ಇದೀಗ ಯುಟರ್ನ್‌ ಹೊಡೆದಿದ್ದಾರೆ. ಅವರು ಕೋರ್ಟ್‌ನಲ್ಲಿ ಕೇಸ್‌ ಹಾಕಿದ್ದಕ್ಕೆ ಶ್ರೀಲಂಕಾ ಕ್ರಿಕೆಟ್‌ ಬೋರ್ಡ್‌ ಬಳಿ ಕ್ಷಮೆ ಕೇಳಿದ್ದಾರೆ ಹಾಗೂ ಕೇಸ್‌ ಅನ್ನು ವಿಥ್‌ಡ್ರಾ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಇಮೇಲ್‌ ಮೂಲಕ ಕ್ಷಮೆಯಾಚಿಸಿದ್ದಾರೆಂದು ಮೂಲಗಳು ತಿಳಿಸಿರುವ ಮಾಹಿತಿ ವರದಿಯಾಗಿದೆ.

ಐಪಿಎಲ್‌ ಟೂರ್ನಿಯಲ್ಲಿ ಆಡಲು ಅನುಮತಿ ನೀಡದೇ ಅನ್ಯಾಯವಾಗಿ ನನ್ನನ್ನು ನಡೆಸಿಕೊಳ್ಳಲಾಗಿದೆ. ಈ ಕಾರಣದಿಂದ ನಾನು ನ್ಯಾಯಾಲಯದ ಮೋರೆ ಹೋಗದ್ದೇನೆ ಅಷ್ಟೆ, ಅದು ಬಿಟ್ಟು ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಅಪಮಾನ ಮಾಡುವುದು ನನ್ನ ಉದ್ದೇಶವಲ್ಲ ಎಂದು ನುವಾನ್‌ ತುಷಾರ ಇಮೇಲ್‌ ಮೂಲಕ ಕ್ರಿಕೆಟ್‌ ಮಂಡಳಿ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

RCB vs RR: ರಾಜಸ್ಥಾನ್‌ ರಾಯಲ್ಸ್‌ ಪ್ಲೇಯಿಂಗ್‌ XIನಲ್ಲಿ ವೈಭವ್‌ ಸೂರ್ಯವಂಶಿ ಏಕಿಲ್ಲ? ಕಾರಣ ಇಲ್ಲಿದೆ!

2026ರ ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸಲು ನ್ಯಾಯಾಲಯದ ಹಸ್ತಕ್ಷೇಪಕ್ಕಾಗಿ ನುವಾನ್‌ ತುಷಾರ ಸಲ್ಲಿಸಿದ ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗುವುದು ಎಂದು ಎಸ್‌ಎಲ್‌ಸಿ ಏಪ್ರಿಲ್‌ 9 ರಂದು ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಆರ್‌ಸಿಬಿ ವೇಗಿಗೆ ಹಿನ್ನಡೆ ಉಂಟಾಗಿದೆ.

31ರ ವಯಸ್ಸಿನ ನುವಾನ್‌ ತುಷಾರ ಅವರು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತನಗೆ ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಎನ್‌ಒಸಿ ನೀಡುವಂತೆ ನೀಡುವಂತೆ ನಿರ್ದೇಶಿಸಲು ಕೋರಿ ಪ್ರಕರಣವನ್ನು ದಾಖಲಿಸಿದ್ದರು. ಆದರೆ, ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದ ಕಾರಣವನ್ನು ಉಲ್ಲೇಖಿಸಿ ಎಸ್‌ಎಲ್‌ಸಿ ಅವರ ವಿನಂತಿಯನ್ನು ತಿರಸ್ಕರಿಸಿತ್ತು. ಇದೀಗ ನ್ಯಾಯಾಲಯವು ಏಪ್ರಿಲ್‌ 23 ರಂದು ಮುಂದಿನ ವಿಚಾರಣಯನ್ನು ನಡೆಸಲಿದೆ.

ತಾನು ಸಹಿ ಹಾಕಿದ್ದ ಜೆರ್ಸಿಯನ್ನು ಸ್ಟುವರ್ಟ್‌ ಬ್ರಾಡ್‌ ಡಸ್ಟ್‌ಬಿನ್‌ಗೆ ಹಾಕಿದ್ದರು: ಯುವರಾಜ್‌ ಸಿಂಗ್‌!

2022ರ ಬಳಿಕ ನುವಾನ್‌ ತುಷಾರ ಅವರು ಶ್ರೀಲಂಕಾ ತಂಡದ ಪರ 30 ಅಂತಾರಾಷ್ಟ್ರೀಯ ಪಂದ್ಯಗಳನ್ನುಆಡಿದ್ದಾರೆ. 2024 ಹಾಗೂ 2025ರ ಐಪಿಎಲ್‌ ಟೂರ್ನಿಗಳಲ್ಲಿ ನುವಾನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ್ದರು. ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆದ್ದಿತ್ತು ಹಾಗೂ ನುವಾನ್‌ ತುಷಾರ ಕೂಡ ಈ ಗೆಲುವಿನಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದ್ದರು.