ಆಕ್ಲೆಂಡ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ನಾಲ್ಕನೇ ಟಿ20ಐ ಪಂದ್ಯ (IND vs NZ) ಇಲ್ಲಿನ ಈಡನ್ ಪಾರ್ಕ್‌ನಲ್ಲಿ ನಡೆಯಿತು. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ xiನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ಪ್ರವಾಸಿ ತಂಡದ ಪ್ಲೇಯಿಂಗ್ XIನಿಂದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ಹಾಗೂ ವೈಭವ್ ಸೂರ್ಯವಂಶಿಯನ್ನು ಕೈ ಬಿಡಲಾಯಿತು. ಭುವನೇಶ್ವರ್ ಕುಮಾರ್ ಅವರು ಇತೀಚೆಗಷ್ಟೇ ನಾಲ್ಕು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು.
ನಾಲ್ಕನೇ ಟಿ20ಐ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಶ್ರೇಯಸ್ ಅಯ್ಯರ್ ಚೇಸಿಂಗ್ ಆಯ್ಕೆ ಮಾಡಿಕೊಂಡರು ಹಾಗೂ ಎದುರಾಳಿ ಕಿವೀಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆ ಮೂಲಕ ಈ ಸರಣಿಯ ನಾಲ್ಕನೇ ಬಾರಿ ಚೇಸಿಂಗ್ ಮಾಡಲು ಅಯ್ಯರ್ ನಿರ್ಧರಿಸಿದರು. ಆದರೆ, ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರು ಈಗಾಗಲೇ ಆರಂಭಿಕ ಮೂರು ಪಂದ್ಯಗಳನ್ನು ಸೋಲುವ ಮೂಲಕ ಸರಣಿಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಕನಿಷ್ಠ ಕೊನೆಯ ಎರಡು ಪಂದ್ಯಗಳನ್ನು ಗೆದ್ದು ಗೌರವ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಐಪಿಎಲ್ ಕೋಚಿಂಗ್ ಹುದ್ದೆ; ಗೌತಮ್ ಗಂಭೀರ್ ಸಂಪರ್ಕಿಸಿದ 4 ಫ್ರಾಂಚೈಸಿ
ನಾಲ್ಕನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಏಕೆ ಆಡುತ್ತಿಲ್ಲ?
ನಾಲ್ಕನೇ ಟಿ20ಐ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ಗಾಯದಿಂದ ಗುಣಮುಖರಾಗಿರುವ ಇಶಾನ್ ಕಿಶನ್ ಪ್ಲೇಯಿಂಗ್ Xiಗೆ ಮರಳಿದ್ದರಿಂದ ವೈಭವ್ ಸೂರ್ಯವಂಶಿಯಲ್ಲಿ ಕೈ ಬಿಡಲಾಯಿತು. ಆದರೆ, ಭುವನೇಶ್ವರ್ ಕುಮಾರ್ ಅವರನ್ನು ಏಕೆ ಕೈ ಬಿಡಲಾಗಿದೆ ಎಂಬುದಕ್ಕೆ ನಾಯಕ ಶ್ರೇಯಸ್ ಅಯ್ಯರ್ ಕಾರಣ ತಿಳಿಸಿಲ್ಲ. ಆದರೆ, ಕಾಮೆಂಟರಿ ವೇಳೆ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಅವರು, ಭುವನೇಶ್ವರ್ ಕುಮಾರ್ ಮ್ಯಾಚ್ ಫಿಟ್ನೆಸ್ ಇಲ್ಲದ ಕಾರಣ ಆಕ್ಲೆಂಡ್ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್ ಮಯಾಂಕ್ ಯಾದವ್, ಪ್ರಿನ್ಸ್ ಯಾದವ್
ನ್ಯೂಜಿಲೆಂಡ್: ಫಿನ್ ಆಲೆನ್, ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಬೆವನ್ ಜೇಕಬ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನೇಥನ್ ಸ್ಮಿತ್, ಆಡಮ್ ಮಿಲ್ನೆ, ಜೇಕಬ್ ಡಫಿ, ಮ್ಯಾಥ್ಯೂ ಫಿಷರ್
ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಹೊರಬಿದ್ದ ಪ್ರಸಿದ್ಧ್ ಕೃಷ್ಣ; ʼಎʼ ತಂಡ ಸೇರಿದ ಮೊಹಮ್ಮದ್ ಸಿರಾಜ್
ಶ್ರೇಯಸ್ ಅಯ್ಯರ್ ಹೇಳಿಕೆ
ಟಾಸ್ ಗೆದ್ದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, " ನಾವು ಬೌಲ್ ಮಾಡಲು ನಿರ್ಧರಿಸಿದ್ದೇವೆ. ಹಿಂದಿನ ಪಂದ್ಯದಲ್ಲಿನಾವು ಮೊದಲ ಎಸೆತದಿಂದಲೇ ಆಟಗಾರರು ತೋರಿದ ಆಕ್ರಮಣಕಾರಿ ಮನೋಭಾವ ಮತ್ತು ಸಕಾರಾತ್ಮಕತೆ ಅದ್ಭುತವಾಗಿತ್ತು. ನನ್ನ ಪ್ರಕಾರ, ಪರಿಸ್ಥಿತಿಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯ ಅತ್ಯಂತ ಪ್ರಮುಖವಾಗಿತ್ತು. ಬ್ಯಾಟರ್‌ಗಳು ಹಾರ್ಡ್ ಲೆಂಗ್ತ್ ಎಸೆತಗಳು ಹಾಗೂ ಹಾಫ್ ವಾಲಿ ಎಸೆತಗಳನ್ನು ಸುಲಭವಾಗಿ ಸಿಕ್ಸರ್‌ಗಳಿಗೆ ಅಟ್ಟುತ್ತಿರುವುದನ್ನು ನಾವು ಗಮನಿಸಿದೆವು. ಹೀಗಾಗಿ ಸಾಧ್ಯವಾದಷ್ಟು ಬೇಗ ಯಾರ್ಕರ್‌ಗಳನ್ನು ಎಸೆಯುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದೆವು. ಅದನ್ನು ಆಟಗಾರರು ಅತ್ಯುತ್ತಮವಾಗಿ ಕಾರ್ಯಗತಗೊಳಿಸಿದರು," ಎಂದರು.
ನ್ಯೂಜಿಲೆಂಡ್‌ನ ಬದಲಾಗುತ್ತಿರುವ ಮೈದಾನದ ಆಯಾಮಗಳಿಗೆ ಹೊಂದಿಕೊಳ್ಳುವ ಕುರಿತು ಮಾತನಾಡಿ,"ಖಂಡಿತವಾಗಿಯೂ. ಗಾಳಿಯೂ ನಮ್ಮನ್ನು ಎಲ್ಲೆಡೆ ಹಿಂಬಾಲಿಸುತ್ತಿದೆ. ಆಗಾಗ ಹವಾಮಾನ ತಂಪಾಗುತ್ತಿದೆ. ಆದರೆ, ನಾವು ನಮ್ಮ ಕಡೆಯಿಂದ ಯಾವುದೇ ಪ್ರಯತ್ನವನ್ನು ಬಾಕಿ ಉಳಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದೇವೆ. ಇದೇ ನಮ್ಮ ತಂಡದ ಮನೋಭಾವವಾಗಿರಲಿದೆ. ಸರಣಿಯನ್ನು ಗೆದ್ದಿದ್ದೇವೆ ಎಂಬುದು ನಿಜ. ಆದರೆ, ನಮ್ಮ ಕೆಲಸ ಇನ್ನೂ ಅರ್ಧ ಮಾತ್ರ ಪೂರ್ಣಗೊಂಡಿದೆ ಎಂದು ನಾನು ಭಾವಿಸುತ್ತೇನೆ. ತಂಡದ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದೇವೆ. ವೈಭವ್ ಬದಲಿಗೆ ಇಶಾನ್ ಕಿಶನ್ ತಂಡಕ್ಕೆ ಮರಳಿದ್ದಾರೆ. ಭುವನೇಶ್ವರ್ ಕುಮಾರ್ (ಭುವಿ) ಬದಲಿಗೆ ಮಯಾಂಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ," ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.