ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Hazare Trophy: ಸೌರಾಷ್ಟ್ರ ಎದುರು ಡಬಲ್‌ ಸೆಂಚುರಿ ಬಾರಿಸಿದ ಸ್ವಸ್ತಿಕ್‌ ಸಮಲ್‌ ಯಾರು?

ಒಡಿಶಾ ತಂಡದ ಬ್ಯಾಟ್ಸ್‌ಮನ್‌ ಸ್ವಸ್ತಿಕ್‌ ಸಮಲ್‌ ಅವರು ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಒಡಿಶಾ ಪರ ಈ ಸಾಧನೆ ಮಾಡಿದ ಹಾಗೂ ಭಾರತದ ಒಟ್ಟಾರೆ ನಾಲ್ಕನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ.

ವಿಜಯ್‌ ಹಝಾರೆ ಟ್ರೋಫಿ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಸ್ವಸ್ತಿಕ್‌ ಸಮಲ್.

ನವದೆಹಲಿ: ಒಡಿಶಾ ತಂಡದ ಬ್ಯಾಟ್ಸ್‌ಮನ್‌ ಸ್ವಸ್ತಿಕ್‌ ಸಮಲ್‌ (Swastik Samal) ಅವರು ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ್‌ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯಲ್ಲಿ ದ್ವಿಶತಕವನ್ನು ಬಾರಿಸಿದ್ದಾರೆ. ಅವರು ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆಗೆ ಭಾಜನರಾಗಿದ್ದಾರೆ. ಒಟ್ಟು 169 ಎಸೆತಗಳನ್ನು ಆಡಿದ ಅವರು 212 ರನ್‌ಗಳನ್ನು ಗಳಿಸಿದ್ದಾರೆ. ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಡಬಲ್‌ ಸೆಂಚುರಿ ಬಾರಿಸಿದ ಒಡಿಶಾದ (Odisha) ಮೊದಲ ಹಾಗೂ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಸ್ವಸ್ತಿಕ್‌ ಸಮಲ್‌ ಬರೆದಿದ್ದಾರೆ.

ಇದರ ಜೊತೆಗೆ 50 ಓವರ್‌ಗಳ ಟೂರ್ನಿಯ ಇತಿಹಾಸದಲ್ಲಿ ನಾಲ್ಕನೇ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಸೌರಾಷ್ಟ್ರ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಒಡಿಶಾ ಬಹುಬೇಗ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆ ಕ್ರೀಸ್‌ಗೆ ಬಂದ ಸ್ವಸ್ತಿಕ್‌ ಸಮಲ್‌ ಹಾಗೂ ನಾಯಕ ಬಿಪ್ಲಬ್‌ ಸಮಂತ್ರೆ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು.

‌Vijay Hazare Trophy: 62 ಎಸೆತಗಳಲ್ಲಿ ಶತಕ ಬಾರಿಸಿದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

ಸ್ವಸ್ತಿಕ್‌ ಹಾಗೂ ಬಿಪ್ಲಬ್‌ ಅವರು ಮುರಿಯದ ನಾಲ್ಕನೇ ವಿಕೆಟ್‌ಗೆ 261 ರನ್‌ಗಳನ್ನು ಕಲೆ ಹಾಕಿದರು. ನಾಯಕ ಸಮಂತ್ರೆ ಅವರು ಆಡಿದ 91 ಎಸೆತಗಳಲ್ಲಿ 100 ರನ್‌ಗಳನ್ನು ಬಾರಿಸಿದರು. ಇವರ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳು ಇವೆ. ಇನ್ನು ಸ್ವಸ್ತಿಕ್‌ ಸಮಲ್‌ ಅವರು ಆಡಿದ 169 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್‌ ಹಾಗೂ 21 ಬೌಂಡರಿಗಳನ್ನು ಬಾರಿಸಿದರು. ಇವರಿಬ್ಬರ ಅಬ್ಬರದ ಬ್ಯಾಟಿಂಗ್‌ ಬಲದಿಂದ ಒಡಿಶಾ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 345 ರನ್‌ಗಳನ್ನು ಕಲೆ ಹಾಕಿತು.



ಸ್ವಸ್ತಿಕ್‌ ಸಮಲ್‌ ಯಾರು?

ಸ್ವಸ್ತಿಕ್‌ ಸಮಲ್‌ ಅವರು 2000ರ ಜುಲೈ 27 ರಂದು ಒಡಿಶಾದ ಕೊರಾಪುತ್‌ನಲ್ಲಿ ಜನಿಸಿದ್ದರು. ಅವರು ಒಡಿಶಾ ತಂಡವನ್ನು 12 ಪ್ರಥಮ ದರ್ಜೆ ಪಂದ್ಯಗಳು, 10 ಲಿಸ್ಟ್‌ ಎ ಪಂದ್ಯಗಳು ಹಾಗೂ 13 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಅಂದ ಹಾಗೆ ಸ್ವಸ್ತಿಕ್‌ ಸಮಲ್‌ ಅವರ ದ್ವಿಶತಕವನ್ನು ಸಿಡಿಸಿದ ಹೊರತಾಗಿಯೂ ಒಡಿಶಾ ತಂಡ, ಸೌರಾಷ್ಟ್ರ ತಂಡವನ್ನು ಮಣಿಸಲು ಸಾಧ್ಯವಾಗಿಲ್ಲ. ಸಮರ್ಥ್‌ ಗಜ್ಜರ್‌ (132 *) ಶತಕ ಹಾಗೂಚಿರಾಗ್‌ ಜನಿ (86) ಮತ್ತು ವಿಶ್ವರಾಜ್‌ ಜಡೇಜಾ (50) ಅವರ ಅರ್ಧಶತಕಗಳ ಬಲದಿಂದ ಸೌರಾಷ್ಟ್ರ ತಂಡ ಈ ಗುರಿಯನ್ನು 48.5 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ ತಲುಪಿತು.

Vijay Hazare Trophy: ಆಂಧ್ರ ಬೌಲರ್‌ಗಳನ್ನು ಬೆಂಡೆತ್ತಿದ್ದ ವಿರಾಟ್‌ ಕೊಹ್ಲಿ, 131 ರನ್‌ ಚಚ್ಚಿದ ರನ್‌ ಮಷೀನ್‌!

ಅಗ್ರಸ್ಥಾನಕ್ಕೇರಿದ ಸ್ವಸ್ತಿಕ್‌ ಸಮಲ್‌

ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಮೊದಲನೇ ಪಂದ್ಯದ ಅಂತ್ಯಕ್ಕೆ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸ್ವಸ್ತಿಕ್‌ ಸಮಲ್‌ 212 ರನ್‌ಗಳ ಮೂಲಕ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. 155 ರನ್‌ಗಳನ್ನು ಗಳಿಸಿರುವ ಟೀಮ್‌ ಇಂಡಿಯಾ ಮಾಜಿ ನಾಯಕ ರೋಹಿತ್‌ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಅಂದ ಹಾಗೆ ಈ ಪಂದ್ಯದ ಸೋಲಿನ ಮೂಲಕ ಒಡಿಶಾ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಡಿ ಗುಂಪಿನಲ್ಲಿ ಐದನೇ ಸ್ಥಾನದಲ್ಲಿದೆ.