ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ 13ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಂಭವಿಸಿದ ಆಘಾತಕಾರಿ ಸೋಲಿಗೆ ಫಝಲಕ್ ಫಾರೂಕಿ (Fazalhaq Farooqi) ಕಾರಣ ಎಂದು ಅಫ್ಘಾನಿಸ್ತಾನ ನಾಯಕ ರಶೀದ್ ಖಾನ್ (Rashid Khan) ದೂರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ತಂಡ ಅದ್ಭುತ ಪ್ರದರ್ಶನ ನೀಡಿದ್ದು, ಪಂದ್ಯವನ್ನು ಗೆಲ್ಲಲು ಮೂರು ಕನಿಷ್ಠ ಮೂರು ಅವಕಾಶಗಳನ್ನು ಹೊಂದಿತ್ತು. ಆದಾಗ್ಯೂ, ತೀವ್ರ ರೋಚಕವಾಗಿದ್ದ ಈ ಪಂದ್ಯ ಅಂತಿಮವಾಗಿ ಎರಡು ಸೂಪರ್ ಓವರ್‌ಗಳವರೆಗೆ ಸಾಗಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ರೋಚಕ ಗೆಲುವು ಸಾಧಿಸಿತು.
ಆದರೆ ಅಂತಿಮ ಕ್ಷಣದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಮನೋಸ್ಥೈರ್ಯ ಕಾಪಾಡಿಕೊಂಡು ಎರಡನೇ ಸೂಪರ್ ಓವರ್‌ನಲ್ಲಿ ಜಯ ಸಾಧಿಸಿದರು. ಅಂತಿಮ ಎಸೆತದಲ್ಲಿ ಐದು ರನ್ ಅಗತ್ಯವಿದ್ದಾಗ ಕೇಶವ ಮಹಾರಾಜ್, ರಹಮಾನುಲ್ಲಾ ಗುರ್ಬಾಝ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ತಂಡವನ್ನು ಗೆಲ್ಲಿಸಿದರು.
AFG vs SA: ಅಫ್ಘಾನಿಸ್ತಾನ ಎದುರು ಎರಡನೇ ಸೂಪರ್ ಓವರ್ ಥ್ರಿಲ್ಲರ್ ಗೆದ್ದ ದಕ್ಷಿಣ ಆಫ್ರಿಕಾ!
ಫಝಲಕ್ ಫಾರೂಕಿ ಬಗ್ಗೆ ರಶೀದ್ ಖಾನ್ ಬೇಸರ
ಆಘಾತಕಾರಿ ಸೋಲಿನ ಬಳಿಕ ಮಾತನಾಡಿದ ಆಫ್ಘನ ನಾಯಕ ರಶೀದ್ ಖಾನ್, ತಂಡ ಕೈಚೆಲ್ಲಿದ ಅವಕಾಶಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮಧ್ಯಮ ಓವರ್‌ಗಳಲ್ಲಿ ಇನ್ನಷ್ಟು ಚಾತುರ್ಯ ತೋರಬೇಕಾಗಿತ್ತು ಎಂದು ಒಪ್ಪಿಕೊಂಡ ಅವರು, ನಿಗದಿತ 20 ಓವರ್‌ಗಳಲ್ಲೇ ಪಂದ್ಯ ಮುಗಿಯುವಂತಾಗಲು ಫಾರೂಕಿ ಒಂದು ಡೈವ್ ಹಾಕಿದ್ದರೆ ಸಾಕಾಗುತ್ತಿತ್ತು ಎಂದು ಹೇಳಿದರು.
“ನಮಗೆ ನಮ್ಮ ಅವಕಾಶಗಳು ಸಿಕ್ಕಿದ್ದವು. ಕೊನೆಯ ಸೂಪರ್ ಓವರ್‌ನಲ್ಲೂ ಒಂದು ಬಾಲ್ ಮತ್ತು ಐದು ರನ್ — ಪಂದ್ಯ ಯಾವ ದಿಕ್ಕಿಗೆ ಬೇಕಾಗಿದ್ದರೂ ತಿರುಗಬಹುದಾಗಿತ್ತು. ನಾವು ಇನ್ನಷ್ಟು ಚಾಣಾಕ್ಷತನ ತೋರಿಸಬಹುದಿತ್ತು. ಒಂದು ಡೈವ್, ಒಂದು ಬಾಲ್ ಸಾಕಾಗುತ್ತಿತ್ತು ಪಂದ್ಯ ಮುಗಿಸಲು. ಕಳೆದ ಒಂದೂವರೆ ವರ್ಷಗಳಿಂದ ಈ ಪಂದ್ಯಕ್ಕಾಗಿ ಮುಂದಿನ ಹಂತ ತಲುಪಲು ನಾವು ಕಷ್ಟಪಟ್ಟಿದ್ದೇವೆ. ಇದು ತುಂಬಾ ನಿರಾಶಾದಾಯಕ,” ಎಂದು ಪಂದ್ಯದ ನಂತರ ಅವರು ಬೇಸರ ವ್ಯಕ್ತಪಡಿಸಿದರು.
T20 World Cup 2026: ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಬೌಲಿಂಗ್ ನೋಡಿ ಆರ್ ಅಶ್ವಿನ್ ಹೇಳಿದ್ದಿದು!
“ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಹೆಮ್ಮೆಯ ಕ್ಷಣ. ತಂಡದ ಹುಡುಗರನ್ನು ಸಾಧ್ಯವಾದಷ್ಟು ಉತ್ಸಾಹಭರಿತರಾಗಿರಿಸಲು ನಾನು ನನ್ನ ಶ್ರೇಷ್ಠ ಪ್ರಯತ್ನ ಮಾಡುತ್ತೇನೆ,” ಎಂದು ಅವರು ಸೇರಿಸಿದರು.
ರೆಹಮಾನುಲ್ಲಾ ಗುರ್ಬಾಝ್‌ಗೆ ರಶೀದ್ ಖಾನ್ ಮೆಚ್ಚುಗೆ
ಸೋಲಿನ ನಡುವೆಯೂ ರಶೀದ್ ಖಾನ್ ತಮ್ಮ ತಂಡದ ಸಿಂಹಸಾಹಸ ಪ್ರದರ್ಶನವನ್ನು ಶ್ಲಾಘಿಸಿದರು ಹಾಗೂ ಕೊನೆಯವರೆಗೂ ಹೋರಾಡಿದ ರೆಹಮಾನುಲ್ಲಾ ಗುರ್ಬಾಝ್‌ಗೆ ವಿಶೇಷ ಪ್ರಶಂಸೆ ಸಲ್ಲಿಸಿದರು.
“ಹುಡುಗರು ಅದ್ಭುತವಾಗಿ ಆಡಿದರು, ವಿಶೇಷವಾಗಿ ಬ್ಯಾಟಿಂಗ್‌ನಲ್ಲಿ ಆರಂಭಿಸಿದ ರೀತಿ ಶ್ಲಾಘನೀಯ. ಅವರನ್ನು 190 ರನ್‌ಗಳ ಒಳಗೆ ತಡೆಯುವುದು ದೊಡ್ಡ ಸಾಧನೆ. ಮೈದಾನದಲ್ಲಿ ಎಲ್ಲವನ್ನೂ ಕೊಟ್ಟ ನಂತರ ಸೋಲಿನ ಪಾಳಯದಲ್ಲಿ ನಿಲ್ಲುವುದು ದುರ್ಭಾಗ್ಯಕರ. ಈ ವಿಕೆಟ್ ಉತ್ತಮವಾಗಿದೆ — ಐಪಿಎಲ್ ವೇಳೆ ನಾನು ಇಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ತಂಡದೊಳಗಿನ ಚರ್ಚೆ ಏನೆಂದರೆ, ಅವರು ಉತ್ತಮ ಆರಂಭ ಪಡೆದಿದ್ದರು, ಆದರೆ ಕೊನೆಯ 10 ಓವರ್‌ಗಳಲ್ಲಿ ಅವರನ್ನು ನಿಯಂತ್ರಿಸುವುದು ಮುಖ್ಯವಾಗಿತ್ತು,” ಎಂದು ರಶೀದ್ ಖಾನ್ ತಿಳಿಸಿದರು.
“ರೆಹಮಾನುಲ್ಲಾ ಆಡಿದ ಇನಿಂಗ್ಸ್ ಅದ್ಭುತ — ಅದಕ್ಕಾಗಿ ಅವರು ಪ್ರಸಿದ್ಧರಾಗಿದ್ದಾರೆ. ಪವರ್‌ಪ್ಲೇನಲ್ಲಿ ವೇಗವಾಗಿ ವಿಕೆಟ್‌ಗಳು ಬೀಳುವುದರಿಂದ ಅವರ ಮೇಲೆ ಒತ್ತಡ ಬಂತು, ಆದರೆ ಒಟ್ಟಾರೆ ಅವರು ಅತ್ಯುತ್ತಮವಾಗಿ ಆಡಿದ್ದಾರೆ,” ಎಂದು ಅವರು ಸೇರಿಸಿದರು.