ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PAK vs SA: ರಾವಲ್ಪಿಂಡಿ ಟೆಸ್ಟ್‌ನಲ್ಲಿ 7 ವಿಕೆಟ್‌ ಕಿತ್ತು ಇತಿಹಾಸ ಬರೆದ ಕೇಶವ್‌ ಮಹಾರಾಜ್!

ಪಾಕಿಸ್ತಾನ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್‌ ಕೇಶವ್‌ ಮಹಾರಾಜ್‌ ಅವರು 7 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಪಾಕಿಸ್ತಾನದಲ್ಲಿ ಟೆಸ್ಟ್‌ ಇನಿಂಗ್ಸ್‌ವೊಂದರಲ್ಲಿ 7 ಅಥವಾ ಅದಕ್ಕಿಂತೆ ಹೆಚ್ಚು ವಿಕೆಟ್‌ ಪಡೆದ ಮೊದಲ ಪ್ರವಾಸಿ ಸ್ಪಿನ್ನರ್‌ ಎಂಬ ದಾಖಲೆಯನ್ನು ಕೇಶವ್‌ ಮಹಾರಾಜ್‌ ಬರೆದಿದ್ದಾರೆ.

ಪಾಕ್‌ ಎದುರು 7 ವಿಕೆಟ್‌ ಕಿತ್ತು ಇತಿಹಾಸ ಬರೆದ ಕೇಶವ್‌ ಮಹಾರಾಜ್!

ಪಾಕಿಸ್ತಾನ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಕಬಳಿಸಿದ ಕೇಶವ್‌ ಮಹಾರಾಜ್‌. -

Profile Ramesh Kote Oct 21, 2025 7:27 PM

ನವದೆಹಲಿ: ಪಾಕಿಸ್ತಾನ ವಿರುದ್ದ ರಾವಲ್ಪಿಂಡಿಯಲ್ಲಿ ನಡಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ (PAK vs SA) ಪ್ರಥಮ ಇನಿಂಗ್ಸ್‌ನಲ್ಲಿ ಸ್ಪಿನ್‌ ಮೋಡಿ ಮಾಡಿದ ದಕ್ಷಿಣ ಆಫ್ರಿಕಾ (South Africa) ತಂಡದ ಸ್ಪಿನ್ನರ್‌ ಕೇಶವ್‌ ಮಹಾರಾಜ್‌ (Keshav Maharaj) 7 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಪಾಕಿಸ್ತಾನದಲ್ಲಿ ಏಕೈಕ ಟೆಸ್ಟ್‌ ಇನಿಂಗ್ಸ್‌ವೊಂದರಲ್ಲಿ 7 ಅಥವಾ ಅದಕ್ಕಿಂತ ಹೆಚ್ಚು ವಿಕೆ ಕಬಳಿಸಿದ ಮೊದಲ ಪ್ರವಾಸಿ ಬೌಲರ್‌ ಎಂಬ ದಾಖಲೆಯನ್ನು ಕೇಶವ್‌ ಮಹಾರಾಜ್‌ ಬರೆದಿದ್ದಾರೆ. ಪಂದ್ಯದ ಎರಡನೇ ದಿನ ಪಾಕ್‌ನ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅವನತಿಗೆ ಕಾರಣರಾಗಿದ್ದರು. ಆ ಮೂಲಕ ಪಾಕಿಸ್ತಾನ ಪ್ರಥಮ ಇನಿಂಗ್ಸ್‌ನಲ್ಲಿ 333 ರನ್‌ಗಳಿಗೆ ಆಲ್‌ಔಟ್ ಆಗಿತ್ತು.

ಪಂದ್ಯದ ಎರಡನೇ ದಿನ ಬೆಳಗಿನ ಸೆಷನ್‌ನಲ್ಲಿ ಕೇಶವ್‌ ಮಹಾರಾಜ್‌ ಅವರು ಐದು ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಪಾಕ್‌ 316 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ 333 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಪಾಕಿಸ್ತಾನದ ವಿರುದ್ದ 7 ವಿಕೆಟ್‌ ಕಬಳಿಸಿದ ಎರಡನೇ ಪ್ರವಾಸಿ ಎಡಗೈ ಸ್ಪಿನ್ನರ್‌ ಎಂಬ ಖ್ಯಾತಿಗೆ ಕೇಶವ್‌ ಮಹಾರಾಜ್‌ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ ಜೊಮೆಲ್‌ ವಾರಿಕನ್‌ ಈ ಸಾಧನೆ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಅವರು ಮುಲ್ತಾನ್‌ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು. ಭಾರತದ ಮಾಜಿ ನಾಯಕ ಕಪಿಲ್‌ ದೇವ್‌ ಸೇರಿದಂತೆ 11 ಬೌಲರ್‌ಗಳು ಪಾಕ್‌ ನೆಲದಲ್ಲಿ 7 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿದ್ದಾರೆ.

IND vs AUS: ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಯ ಬಗ್ಗೆ ಆರೋನ್‌ ಫಿಂಚ್‌ ದೊಡ್ಡ ಹೇಳಿಕೆ!

ಪಂದ್ಯದ ಮೊದಲನೇ ದಿನವಾದ ಸೋಮವಾರ ಬಾಬರ್‌ ಆಝಮ್‌ ಹಾಗೂ ಶಾನ್‌ ಮಸೂದ್‌ ಅವರನ್ನು ಕೇಶವ್‌ ಮಹಾರಾಜ್‌ ಔಟ್‌ ಮಾಡಿದ್ದರು. ಮಂಗಳವಾರ ಬೆಳಿಗ್ಗೆ ಸೌದ್‌ ಶಕೀಲ್‌ ಹಾಗೂ ಸಲ್ಮಾನ್‌ ಆಘಾ ಅವರು ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಈ ಜೋಡಿ ಆರನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟವನ್ನು ಆಡಿತ್ತು. ಆ ಮೂಲಕ ಪಾಕಿಸ್ತಾನ ತಂಡ 300ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಲು ಈ ಜೋಡಿ ನೆರವು ನೀಡಿತ್ತು. 300 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಪಾಕಿಸ್ತಾನ, ಬಳಿಕ ಕೇಶವ್‌ ಮಹಾರಾಜ್‌ ಸ್ಪಿನ್‌ ಮೋಡಿಗೆ ನಲುಗಿಗೆ ಮುಂದಿನ 33 ರನ್‌ಗಳ ಅಂತರದಲ್ಲಿ ಇನ್ನುಳಿದ 5 ವಿಕೆಟ್‌ಗಳನ್ನು ಕಳೆದುಕೊಂಡಿತು.

ಪಾಕಿಸ್ತಾನದಲ್ಲಿ ಟೆಸ್ಟ್‌ ಇನಿಂಗ್ಸ್‌ವೊಂದರಲ್ಲಿ 7 ವಿಕೆಟ್‌ ಕಿತ್ತ ಪ್ರವಾಸಿ ಸ್ಪಿನ್ನರ್‌ಗಳು

ಲಿಂಡ್ಸೆ ಕ್ಲೈನ್‌ (ಆಸ್ಟ್ರೇಲಿಯಾ): ಲಾಹೋರ್‌, 1959

ಫಿಲ್‌ ಎಡ್ಮಂಡ್ಸ್‌ (ಇಂಗ್ಲೆಂಡ್‌): ಕರಾಚಿ, 1978

ರೇ ಬ್ರೈಟ್‌ (ಆಸ್ಟ್ರೇಲಿಯಾ): ಕರಾಚಿ, 1980

ಸ್ಟಿಫೆನ್‌ ಬಾಕ್‌ (ನ್ಯೂಜಿಲೆಂಡ್‌): ಹೈದರಾಬಾದ್‌ (ಸಿಂದ್‌), 1984

ಪಾಲ್‌ ಆಡಮ್ಸ್‌ (ದಕ್ಷಿಣ ಆಫ್ರಿಕಾ): ಲಾಹೋರ್‌, 2003

ಜಾಮೆಲ್‌ ವಾರಿಕನ್‌ ( ವೆಸ್ಟ್‌ ಇಂಡೀಸ್):‌ ಮುಲ್ತಾನ್‌, 2025

ಕೇಶವ್‌ ಮಹಾರಾಜ್‌ (ದಕ್ಷಿಣ ಆಫ್ರಿಕಾ): ರಾವಲ್ಪಿಂಡಿ, 2025

IND vs AUS 2nd ODI: ಅಡಿಲೇಡ್‌ನಲ್ಲಿ ರೋಹಿತ್-ಕೊಹ್ಲಿಗೆ ಅಭಿಮಾನಿಗಳ ಪ್ರೀತಿಯ ಸ್ವಾಗತ

ಪಾಕಿಸ್ತಾನ ತಂಡವನ್ನು 333 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 65 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 185 ರನ್‌ಗಳನ್ನು ಕಲೆ ಹಾಕಿದೆ. ಟ್ರಿಸ್ಟನ್‌ ಸ್ಟಬ್ಸ್‌ (68 ರನ್)‌ ಹಾಗೂ ಕೈಲ್‌ ವರೆನ್‌ (10*) ಅವರು ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡ 148 ರನ್‌ಗಳಿಂದ ಹಿನ್ನಡೆಯಾಗಿದೆ. ಅಂದ ಹಾಗೆ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 93 ರನ್‌ಗಳಿಂದ ಸೋಲು ಅನುಭವಿಸಿತ್ತು.