ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ಎ ತಂಡದಿಂದ ಮೊಹಮ್ಮದ್‌ ಶಮಿ ಔಟ್, ರಿಷಭ್‌ ಪಂತ್‌ಗೆ ನಾಯಕತ್ವ!

ಭಾರತ ಎ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ದಿನಗಳ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಬಿಸಿಸಿಐ ಭಾರತ ಎ ತಂಡವನ್ನು ಪ್ರಕಟಿಸಿದೆ. ಪಾದದ ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ರಿಷಭ್‌ ಪಂತ್‌ಗೆ ಭಾರತ ಎ ತಂಡದ ನಾಯಕತ್ವವನ್ನು ನೀಡಲಾಗಿದೆ. ಸರ್ಫರಾಜ್ ಖಾನ್, ಮೊಹಮ್ಮದ್ ಶಮಿ ಮತ್ತು ಇಶಾನ್ ಕಿಶನ್ ಅವರನ್ನು ಈ ತಂಡದಿಂದ ಕಡೆಗಣಿಸಲಾಗಿದೆ.

ಮೊಹಮ್ಮದ್‌ ಶಮಿ ಔಟ್‌, ಭಾರತ ಎ ತಂಡಕ್ಕೆ ರಿಷಭ್‌ ಪಂತ್‌ ನಾಯಕ!

ಭಾರತ ಎ ತಂಡಕ್ಕೆ ರಿಷಭ್‌ ಪಂತ್‌ ನಾಯಕ. -

Profile Ramesh Kote Oct 21, 2025 6:06 PM

ನವದೆಹಲಿ: ಗಾಯದ ಕಾರಣದಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೀರ್ಘಾವಧಿ ದೂರ ಉಳಿದಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಅಂತಿಮವಾಗಿ ಮರಳಲು ಸಿದ್ಧರಾಗಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿಯು ರಿಷಭ್‌ ಪಂತ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ನಾಲ್ಕು ದಿನಗಳ ಪಂದ್ಯಗಳಿಗೆ ಭಾರತ 'ಎ' ತಂಡದ (India A) ನಾಯಕರನ್ನಾಗಿ ನೇಮಿಸಿದೆ. ಈ ಎರಡು ನಾಲ್ಕು ದಿನಗಳ ಪಂದ್ಯಗಳು ಅಕ್ಟೋಬರ್ 30 ರಿಂದ ನವೆಂಬರ್ 9 ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿವೆ. ಆದರೆ, ಭಾರತ ತಂಡಕ್ಕೆ ಮರಳಲು ಎದುರು ನೋಡುತ್ತಿರುವ ಮೊಹಮ್ಮದ್‌ ಶಮಿ (Mohammed Shami), ಇಶಾನ್‌ ಕಿಶನ್‌ ಹಾಗೂ ಸರ್ಫರಾಝ್‌ ಖಾನ್‌ ಅವರನ್ನು ಕಡೆಗಣಿಸಲಾಗಿದೆ.

ಜುಲೈ ಅಂತ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್‌ ಪಂತ್ ಅವರ ಬಲಗಾಲಿನ ಪಾದದಲ್ಲಿ ಗಾಯವಾಗಿತ್ತು. ಇದರಿಂದಾಗಿ ಅವರ ಮೆಟಾಟಾರ್ಸಲ್ ಮೂಳೆ ಮುರಿದಿದೆ ಎಂದು ವರದಿಯಲ್ಲಿ ಬಹಿರಂಗವಾಗಿತ್ತು. ಮುರಿತದಿಂದಾಗಿ ಮೂರು ತಿಂಗಳ ಕಾಲ ಆಟದಿಂದ ಹೊರಗುಳಿದಿದ್ದ ಪಂತ್ ಮತ್ತೆ ಆಟಕ್ಕೆ ಮರಳುವ ನಿರೀಕ್ಷೆಯಿತ್ತು. ಅದರಂತೆ ಇದೀಗ ಅವರು ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದು, ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

IND vs AUS 2nd ODI: ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮಹತ್ವದ ಬದಲಾವಣೆ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ನಾಲ್ಕು ದಿನಗಳ ಪಂದ್ಯಗಳಿಗೆ ಭಾರತದ ಸ್ಟಾರ್ ಆಟಗಾರರಾದ ಮೊಹಮ್ಮದ್ ಶಮಿ, ಸರ್ಫರಾಜ್ ಖಾನ್ ಮತ್ತು ಇಶಾನ್ ಕಿಶನ್ ಅವರನ್ನು ಕಡೆಗಣಿಸಲಾಗಿದೆ. ಈ ಮೂವರು ಆಟಗಾರರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ರಣಜಿ ಟ್ರೋಫಿ ಪಂದ್ಯದಲ್ಲಿ ಮೊಹಮ್ಮದ್ ಶಮಿ ಏಳು ವಿಕೆಟ್‌ಗಳನ್ನು ಕಬಳಿಸಿದರು, ಆದರೆ ಇಶಾನ್ ಕಿಶನ್ ಶತಕ ಗಳಿಸಿದ್ದರು. ಇದರ ಹೊರತಾಗಿಯೂ, ಅವರನ್ನು ಕಡೆಗಣಿಸಲಾಗಿದೆ. ಸರ್ಫರಾಜ್ ತಮ್ಮ ಫಿಟ್ನೆಸ್‌ಗಾಗಿ ಶ್ರಮಿಸಿದ್ದಾರೆ, ಆದರೆ ಅವರಿಗೆ ಹಿರಿಯ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಈಗ, ಅವರನ್ನು ಭಾರತ ಎ ತಂಡದಿಂದಲೂ ಕಡೆಗಣಿಸಲಾಗಿದೆ.

ಮೊದಲನೇ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಎ ತಂಡ: ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್), ಆಯುಷ್ ಮ್ಹಾತ್ರೆ, ಎನ್ ಜಗದೀಸನ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಅನ್ಷುಲ್‌ ಕಾಂಬೋಜ್‌, ಯಶ್‌ ಠಾಕೂರ್‌, ಆಯುಷ್‌ ಬದೋನಿ, ಸರನ್ಶ್ ಜೈನ್.

ಎರಡನೇ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಎ ತಂಡ: ರಿಷಬ್ ಪಂತ್ (ನಾಯಕ/ವಿಕೆಟ್ ಕೀಪರ್), ಕೆಎಲ್ ರಾಹುಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್‌ವಾಡ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುಥರ್, ಖಲೀಲ್‌ ಅಹ್ಮದ್‌, ಗುರ್ನರ್‌ ಬ್ರಾರ್‌, ಅಭಿಮನ್ಯು ಈಶ್ವರನ್‌, ಪ್ರಸಿಧ್‌ ಕೃಷ್ಣ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.