ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

PAK vs BAN: ಪಾಕಿಸ್ತಾನ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಾಬರ್ ಆಝಮ್‌!

ಬಾಂಗ್ಲಾದೇಶ ತಂಡ ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದು, ಇದೀಗ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಸಿದ್ಧತೆ ನಡೆಸುತ್ತಿದೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ಔಟ್‌ ಆಫ್‌ ಫಾರ್ಮ್‌ ಬಾಬರ್‌ ಆಝಮ್‌ ಅವರನ್ನು ಕೈ ಬಿಡಲಾಗಿದೆ.

ಪಾಕಿಸ್ತಾನ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಾಬರ್‌ ಆಝಮ್.

ಮುಂಬೈ: ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಬಿದ್ದಿದ್ದು, ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ (BAN vs PAK) ಸಜ್ಜಾಗುತ್ತಿದೆ. ಬಾಂಗ್ಲಾ ವಿರುದ್ಧದ ಏಕದಿನ ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ಔಟ್‌ ಆಫ್‌ ಫಾರ್ಮ್‌ ಇದರ ನಡುವೆ ಟೂರ್ನಿಯಲ್ಲಿ ನಿರಾಶದಾಯಕ ಪ್ರದರ್ಶನ ತೋರಿದ್ದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಮ್‌ (Babar Azam) ಅವರನ್ನು ಕೈ ಬಿಡಲಾಗಿದೆ. ಟಿ20 ವಿಶ್ವಕಪ್‌ ಟೂರ್ನಿಯ ನಾಲ್ಕು ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದ ಆಝಮ್‌, 22.75ರ ಸರಾಸರಿಯಲ್ಲಿ ಕೇವಲ 91 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇತ್ತ ಏಕದಿನ ಪಂದ್ಯಗಳಲ್ಲಿಯೂ ಅವರ ಪ್ರದರ್ಶನ ಕುಸಿದಿದ್ದು, 17 ಇನಿಂಗ್ಸ್‌ಗಳಲ್ಲಿ 34ರ ಸರಾಸರಿಯಲ್ಲಿ ಕೇವಲ 544 ರನ್ ಕಲೆಹಾಕಿದ್ದಾರೆ.

2025ರಲ್ಲಿ ನಡೆದಿದ್ದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ ಟೂರ್ನಿಯಲ್ಲಿ ಸದಾಕತ್ ಅವರು ಟೂರ್ನಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಟೂರ್ನಿಯಲ್ಲಿ ಐದು ಇನಿಂಗ್ಸ್‌ಗಳನ್ನು ಆಡಿದ್ದ ಸದಾಕತ್ 129ರ ಸರಾಸರಿ ಮತ್ತು 177.93ರ ಸ್ಟ್ರೈಕ್ ರೇಟ್‌ನೊಂದಿಗೆ 258 ರನ್ ಗಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂದೆನಿಸಿಕೊಂಡಿದ್ದರು. ಇತ್ತ ಬೌಲಿಂಗ್‌ನಲ್ಲೂ ಕೂಡ 7 ವಿಕೆಟ್ ಕಬಳಿಸಿ ಎಲ್ಲರ ಗಮನ ಸೆಳೆದಿದ್ದರು.

NZ vs SA: ಫಿನ್‌ ಆಲೆನ್‌ ದಾಖಲೆಯ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಟಿ20 ವಿಶ್ವಕಪ್‌ ಫೈನಲ್‌ಗೇರಿದ ನ್ಯೂಜಿಲೆಂಡ್‌!

ವೇಗಿ ಶಾಹೀನ್ ಅಫ್ರಿದಿ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ಹಿರಿಯ ಆಟಗಾರ ಮೊಹಮ್ಮದ್ ರಿಝ್ವಾನ್ ಮತ್ತು ಹ್ಯಾರಿಸ್ ರೌಫ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಏತನ್ಮಧ್ಯೆ, ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ ಆರು ಇನಿಂಗ್ಸ್‌ಗಳಲ್ಲಿ 76.60ರ ಸರಾಸರಿ ಮತ್ತು 160.25 ಸ್ಟ್ರೈಕ್ ರೇಟ್‌ನೊಂದಿಗೆ 383 ರನ್ ಗಳಿಸಿದ್ದರು. ವಿಶೇಷವಾಗಿ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನದ ಮೂರು ಪಂದ್ಯಗಳ ಏಕದಿನ ಸರಣಿ ಮಾರ್ಚ್ 11 ರಂದು ಪ್ರಾರಂಭವಾಗಲಿದ್ದು, ಮೂರೂ ಪಂದ್ಯಗಳು ಢಾಕಾದ ಶೇರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ.

IND vs ENG: ʻಭಾರತ ತಂಡವನ್ನು ಮಣಿಸುತ್ತೇವೆʼ-ಹ್ಯಾರಿ ಬ್ರೂಕ್‌ ಎಚ್ಚರಿಕೆ!

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಪಾಕಿಸ್ತಾನ ತಂಡ: ಶಾಹೀನ್ ಶಾ ಆಫ್ರಿದಿ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫೈಸಲ್ ಅಕ್ರಂ, ಹ್ಯಾರಿಸ್ ರೌಫ್, ಹುಸೇನ್ ತಲಾತ್, ಮಾಜ್ ಸದಾಕತ್, ಮೊಹಮ್ಮದ್ ರಿಜ್ವಾನ್ (ವಿ ಕೀ), ಮೊಹಮ್ಮದ್ ವಾಸಿಮ್ ಜೂನಿಯರ್, ಮುಹಮ್ಮದ್ ಘಾಜಿ ಸಲ್ವುದ್, ಘೋರಿ ಅಲಿ ಅಘಾ ಮತ್ತು ಶಮಿಲ್ ಹುಸೇನ್.