ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಭಾರತ ತಂಡದ ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರ ಸೂಚಿಸಿದ ಪಾರ್ಥಿವ್‌ ಪಟೇಲ್‌!

ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ತಂಡದ ವೈಫಲ್ಯದ ಬಗ್ಗೆ ಮಾಜಿ ವಿಕೆಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಭಾರತ ತಂಡದ ಬ್ಯಾಟಿಂಗ್‌ ವೈಫಲ್ಯವನ್ನು ಸರಿ ಮಾಡಿಕೊಳ್ಳಲು ಶ್ರೇಯಸ್‌ ಅಯ್ಯರ್‌ ಬಳಗಕ್ಕೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.

ಭಾರತ ತಂಡಕ್ಕೆ ಮಹತ್ವದ ಸಲಹೆ ನೀಡಿದ ಪಾರ್ಥಿವ್‌ ಪಟೇಲ್.

ನವದೆಹಲಿ: ಇಂಗ್ಲೆಂಡ್‌ ಪ್ರವಾಸದ ಟಿ20ಐ ಸರಣಿಯಲ್ಲಿ (IND vs ENG) ಭಾರತ ತಂಡದ ಬ್ಯಾಟಿಂಗ್‌ ವೈಫಲ್ಯವನ್ನು ಸರಿ ಮಾಡಿಕೊಳ್ಳಲು ಶ್ರೇಯಸ್‌ ಅಯ್ಯರ್‌ ಪಡೆಗೆ ಮಾಜಿ ವಿಕೆಟ್‌ ಕೀಪರ್‌-ಬ್ಯಾಟರ್‌ ಪಾರ್ಥಿವ್‌ ಪಟೇಲ್‌ (Parthiv Patel) ಸೂಕ್ತ ಸಲಹೆಯನ್ನು ನೀಡಿದ್ದಾರೆ. ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಸ್ಬಲ್ಪ ಹೊತ್ತು ಸಮಯವನ್ನು ಕಳೆಯುವ ಮೂಲಕ ಕಂಡೀಷನ್ಸ್‌ ಅನ್ನು ಅರ್ಥ ಮಾಡಿಕೊಂಡು ಬ್ಯಾಟ್‌ ಮಾಡಬೇಕು. ಏಕೆಂದರೆ ಭಾರತದಂತೆ ಇಲ್ಲಿನ ಪಿಚ್‌ಗಳು ಫ್ಲ್ಯಾಟ್‌ ಆಗಿ ಇಲ್ಲ. ಹಾಗಾಗಿ ಇಲ್ಲಿ ಬ್ಯಾಟ್‌ ಮಾಡುವಾಗ ಬಹಳ ಎಚ್ಚರಿಕೆಯಿಂದ ಆಡಬೇಕೆಂದು ಪಾರ್ಥಿವ್‌ ಪಟೇಲ್‌ ಸಲಹೆ ನೀಡಿದ್ದಾರೆ.

ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಗುತ್ತಿದೆ. ಐರ್ಲೆಂಡ್‌ ಪ್ರವಾಸ ಸೇರಿದಂತೆ ಇಲ್ಲಿಯವರೆಗೂ ಆಡಿದ ಐದು ಪಂದ್ಯಗಳ ಪೈಕಿ ಟೀಮ್‌ ಇಂಡಿಯಾ ಇನೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಇದು ಕಡೆಯಾದರೆ ಬ್ಯಾಟ್ಸ್‌ಮನ್‌ಗಳಿಂದಲೂ ಉತ್ತಮ ಪ್ರದರ್ಶನ ಮೂಡಿಬರುತ್ತಿಲ್ಲ. ಮೂರನೇ ಪಂದ್ಯದಲ್ಲಿ 202 ರನ್‌ಗಳ ಗುರಿಯನ್ನು ಹಿಂಬಾಲಿಸುವ ವೇಳೆ ಭಾರತ ತಂಡ ಕೇವಲ 76 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ 125 ರನ್‌ಗಳ ದಾಖಲೆಯ ಅಂತರದಲ್ಲಿ ಟೀಮ್‌ ಇಂಡಿಯಾ ಸೋಲು ಅನುಭವಿಸಿತ್ತು.

ʻನನಗೆ ವಿಶ್ರಾಂತಿ ಬೇಡʼ: ಸಂಜು ಸ್ಯಾಮ್ಸನ್‌ ಪಾತ್ರದಲ್ಲಿ ಗಂಭಿರ್‌ರನ್ನು ಟೀಕಿಸಿದ ಆರ್‌ ಅಶ್ವಿನ್‌!

ಜಿಯೊಸ್ಟಾರ್‌ ಗೇಮ್‌ ಪ್ಲ್ಯಾನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಪಾರ್ಥಿವ್‌ ಪಟೇಲ್‌,"ಪಂದ್ಯ ಹೇಗೆ ಸಾಗಿತು ಎಂದು ನಾವು ಹೇಳುವುದಾದರೆ, ಟಾಸ್‌ ಮಾತ್ರ ನಮ್ಮ ಪರವಾಗಿತ್ತಷ್ಟೆ. ಇದಾದ ಬಳಿಕ ಯಾವುದೇ ಸಂಗತಿಗಳು ಭಾರತದ ಪರ ನಡೆಯಲಿಲ್ಲ. ಭಾರತ ತಂಡ ಆಡಿದ ಹಾದಿಯನ್ನು ಗಮನಿಸಿದರೆ, ಈ ಪಂದ್ಯ ಒನ್‌ ಸೈಡ್‌ ಮ್ಯಾಚ್‌ ರೀತಿ ಪ್ರತಿ ಬಿಂಬಿಸುತ್ತಿತ್ತು. 200 ರನ್‌ಗಳ ಗುರಿ ತಲುಪುವುದು ಅಷ್ಟೊಂದು ಕಷ್ಟವಾಗಿರಲಿಲ್ಲ. ಹೌದು ಇದು ಉತ್ತಮ ಮೊತ್ತ, ಪಂದ್ಯವನ್ನು ಗೆಲ್ಲದೇ ಇರುವಂಥ 260 ಅಥವಾ 270 ರನ್‌ಗಳನ್ನು ಆಂಗ್ಲರು ಕಲೆ ಹಾಕಿರಲಿಲ್ಲ. ನನಗೆ ತುಂಬಾ ಬೇಸರ ತರಿಸಿದ ಸಂಗತಿ ಏನೆಂದರೆ, ಭಾರತ ತಂಡದ ಯೋಜನೆ, ಭಾರತ ಹೇಗೆ ಆರಂಭ ಪಡೆಯಿತು, ಫೀಲ್ಡಿಂಗ್‌ ಹಾಗೂ ವಿಶೇಷವಾಗಿ ಬ್ಯಾಟಿಂಗ್‌, ಇದನ್ನು ವಿವರಿಸುವುದು ಕಷ್ಟ," ಎಂದು ಹೇಳಿದ್ದಾರೆ.

ಬ್ಯಾಟ್ಸ್‌ಮನ್‌ಗಳು ಇನ್ನಷ್ಟು ಹೆಚ್ಚಿನ ಆಟದ ಅರಿವನ್ನು ಪ್ರದರ್ಶಿಸಬೇಕು: ಪಟೇಲ್‌

ಇಂಗ್ಲೆಂಡ್‌ ಎದುರು ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ ಇನ್ನಷ್ಟು ಹೆಚ್ಚಿನ ಆಟದ ಅರಿವನ್ನು ಪ್ರದರ್ಶಿಸಬೇಕು ಹಾಗೂ ಕ್ರೀಸ್‌ನಲ್ಲಿ ಇನ್ನಷ್ಟು ಹೆಚ್ಚಿನ ಸಮಯವನ್ನು ಕಳೆಯಬೇಕೆಂದು ಅವರು ಸಲಹೆಯನ್ನು ಕೊಟ್ಟಿದ್ದಾರೆ.

ʻಐಸಿಸಿ ಹಾಲ್‌ ಆಫ್‌ ಫೇಮ್‌ʼ ಗೌರವಕ್ಕೆ ಭಾಜನರಾದ ಸೌರವ್‌ ಗಂಗೂಲಿಗೆ ಸಚಿನ್‌ ವಿಶೇಷ ಸಂದೇಶ!

"ಆಟವನ್ನು ಇನ್ನಷ್ಟು ಉತ್ತಮವಾಗಿ ಅರ್ಥ ಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಹಾಗೂ ಬ್ರಿಸ್ಟಲ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಸ್ವಲ್ಪ ಜಾಸ್ತಿ ಆಟದ ಅರಿವನ್ನು ಪ್ರದರ್ಶಿಸಬೇಕು. ಹೌದು 200 ರನ್‌ಗಳು ಸ್ಕೋರ್‌ ಬೋರ್ಡ್‌ನಲ್ಲಿವೆ ಹಾಗೂ ನಮ್ಮ ತಂಡದಲ್ಲಿ ಅನುಭವಿ ಟಿ20 ಬ್ಯಾಟ್ಸ್‌ಮನ್‌ಗಳಿದ್ದಾರೆ. ಅಲ್ಲದೆ ಈ ಸ್ವರೂಪದಲ್ಲಿ ನೀವು ಯೋಚಿಸುವುದಕ್ಕಿಂತ ಹೆಚ್ಚು ಸಮಯವಿರುತ್ತದೆ. ಆರಂಭದಲ್ಲಿ ಒಂದು ಅಥವಾ ಎರಡು ಓವರ್‌ಗಳನ್ನು ಕ್ರೀಸ್‌ನಲ್ಲಿ ನೆಲೆಗೊಳ್ಳಲು ಬಳಸಿಕೊಳ್ಳಬಹುದು. ಇಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿವೆ. ಪಿಚ್‌ಗಳು ಅಷ್ಟು ಬ್ಯಾಟಿಂಗ್ ಸ್ನೇಹಿಯಾಗಿಲ್ಲ. ಅಲ್ಲದೆ, ಮೈದಾನದ ಆಯಾಮಗಳು ಹಾಗೂ ಪಿಚ್‌ನ ವೇಗಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಅಗತ್ಯ," ಎಂದು ಅವರು ಹೇಳಿದ್ದಾರೆ.