ನವದೆಹಲಿ: ವಿಶ್ವದ ಫ್ರಾಂಚೈಸಿ ಟಿ20 ಲೀಗ್‌ಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ಆಸ್ಟ್ರೇಲಿಯಾ ಸ್ಟಾರ್ ಆಟಗಾರರನ್ನು ರಾಷ್ಟ್ರೀಯ ತಂಡದ ಸೇವೆಯ ಲಭ್ಯತೆಗಳಿಗೆ ಖಾತ್ರಿಪಡಿಸಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಮುಂದಾಗಿದೆ ಹಾಗೂ ಇದಕ್ಕಾಗಿ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದೆ. ಆಸ್ಟ್ರೇಲಿಯಾ ತಂಡಕ್ಕೆ ಸದಾ ಲಭ್ಯರಿರಬೇಕೆಂಬ ಉದ್ದೇಶದಿಂದ ಮುಂದಿನ ಮೂರು ವರ್ಷಗಳಿಗೆ ಪ್ಯಾಟ್ ಕಿಮಿನ್ಸ್ (Pat Cummins) ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ 113 ಕೋಟಿ ರು. ಗಳ ಆಫರ್ ನೀಡಿದೆ ಎಂದು ವರದಿಯಾಗಿದೆ. ಕೇವಲ ಕಮಿನ್ಸ್ ಮಾತ್ರವಲ್ಲ ಮೂರೂ ಸ್ವರೂಪದ ಆಟಗಾರರಾದ ಟ್ರಾವಿಸ್ ಹೆಡ್ ಹಾಗೂ ಜಾಶ ಹೇಝಲ್‌ವುಡ್‌ಗೂ (Josh Hazlewood) ಕ್ರಿಕೆಟ್ ಆಸ್ಟ್ರೇಲಿಯಾ ದೊಡ್ಡ ಆಫರ್ ನೀಡಿದೆ ಎಂದು ಹೇಳಲಾಗುತ್ತಿದೆ.
ಸನ್‌ರೈಸರ್ಸ್ ಮಾಲೀಕತ್ವದ ವಿಶ್ವದ ಯಾವುದೇ ಫ್ರಾಂಚೈಸಿಗಳ ಪರ ಆಡದೆ, ಆಸ್ಟ್ರೇಲಿಯಾ ತಂಡಕ್ಕೆ ಸದಾ ಲಭ್ಯರಿರಬೇಕೆಂದು ಕ್ರಿಕೆಟ್ ಆಸ್ಟ್ರೇಲಿಯಾ ಉದ್ದೇಶ. ಏಕೆಂದರೆ ಮುಂದಿನ ಮೂರು ವರ್ಷಗಳಿಗೆ ಅಂದರೆ 2029ರ ವರೆಗೆ ಆಸ್ಟ್ರೇಲಿಯಾ ತಂಡದ ಅಂತಾರಾಷ್ಟ್ರೀಯ ವೇಳಾಪಟ್ಟಿಗೆ ಲಭ್ಯರಿರಬೇಕೆಂಬ ಕಾರಣಕ್ಕೆ ಕಮಿನ್ಸ್‌ಗೆ ಆಸ್ಟ್ರೇಲಿಯಾ ಡಾಲರ್ 12 ದಶಲಕ್ಷ ರು (113 ಕೋಟಿ ರು) ನೀಡಲು ಮುಂದಾಗಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ಟ್ರಾವಿಸ್ ಹೆಡ್‌ಗೂ ಕೂಡ ಇದೇ ರೀತಿಯ ಆಫರ್ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
2026ರ ಐಪಿಎಲ್ ಪ್ಲೇಆಫ್ಸ್‌ಗಾಗಿ ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿದ ಆಸ್ಟ್ರೇಲಿಯಾ ಆಟಗಾರರು!
ಪ್ರಸ್ತುತ ಪ್ಯಾಟ್ ಕಮಿನ್ಸ್ ಒಂದು ವರ್ಷಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಸಂಬಳ ಪಡೆಯುತ್ತಿದ್ದಾರೆ ಹಾಗೂ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ 15ನೇ ಕ್ರೀಡಾಪಟು ಎಂಬ ದಾಖಲೆ ಕೂಡ ಕಮಿನ್ಸ್ ಹೆಸರಿನಲ್ಲಿದೆ.
ಮುಂದಿನ 12 ತಿಂಗಳಲ್ಲಿ 21 ಟೆಸ್ಟ್ ಪಂದ್ಯಗಳು
ಪ್ಯಾಟ್ ಕಮಿನ್ಸ್ ಅವರಿಗೆ ನೀಡಲಾದ ಹೊಸ ಒಪ್ಪಂದದ ಪ್ರಕಾರ, ಅವರು ಎಷ್ಟು ಪಂದ್ಯಗಳನ್ನು ಆಡಿದರೂ ಸಹ, ಅವರಿಗೆ ಹಿಂದಿನದಕ್ಕಿಂತ ಹೆಚ್ಚಿನ ಮೊತ್ತದ ಮಹತ್ವದ ಪಾವತಿ ದೊರೆಯಲಿದೆ ಎಂದು ವರದಿಗಳು ತಿಳಿಸಿವೆ.
ಆಸ್ಟ್ರೇಲಿಯಾ ತಂಡ ಮುಂದಿನ 12 ತಿಂಗಳಲ್ಲಿ 21 ಟೆಸ್ಟ್ ಪಂದ್ಯಗಳನ್ನು ಆಡಲು ಸಜ್ಜಾಗಿರುವ ಸಂದರ್ಭದಲ್ಲಿ ಈ ಒಪ್ಪಂದದ ಸುದ್ದಿ ಬಂದಿದೆ. ಈ ಅವಧಿಯಲ್ಲಿ ಅವರು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಗಳ ಜೊತೆಗೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತದ ಪ್ರಮುಖ ಪ್ರವಾಸಗಳನ್ನು ಕೂಡ ಕೈಗೊಳ್ಳಲಿದೆ.
ಕನೋಲಿ ಶತಕ ವ್ಯರ್ಥ, ಪಂಜಾಬ್ ವಿರುದ್ಧ ಗೆದ್ದು ಅಗ್ರ ಸ್ಥಾನಕ್ಕೇರಿದ ಸನ್‌ರೈಸರ್ಸ್ ಹೈದರಾಬಾದ್!
ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಜೇಮ್ಸ್ ಆಲ್ಸಾಪ್ ಹೇಳಿಕೆ
“ಖಂಡಿತವಾಗಿ. ಆಟಗಾರರು ಹೆಚ್ಚಿನ ಸಂಭಾವನೆ ಪಡೆಯುವ ಹಕ್ಕನ್ನು ಸಂಪಾದಿಸಿದ್ದಾರೆ; ದೀರ್ಘಕಾಲದಿಂದ ಆಸ್ಟ್ರೇಲಿಯಾ ತಂಡಕ್ಕಾಗಿ ಎಲ್ಲಾ ಫಾರ್ಮಾಟ್‌ಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಈಗಿನ ನಿಯಮಾವಳಿ ಮತ್ತು ನಿರ್ಬಂಧಗಳ ಅಡಿಯಲ್ಲಿ ಅವರನ್ನು ಇನ್ನಷ್ಟು ದೂರ ತೆಗೆದುಕೊಂಡು ಹೋಗುವುದು ಕಷ್ಟ. ಇದು ಈಗಿನ ಪ್ರಮುಖ ಆದ್ಯತೆ,” ಎಂದು ಆಲ್ಸಾಪ್ ಅವರು ಸಿಡ್ನಿ ಮೋರ್ನಿಂಗ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.
“ಇದು ನಿಜಕ್ಕೂ ಸಂಕೀರ್ಣ ಸಮತೋಲನದ ವಿಷಯ. ನಮಗೆ ಗೊತ್ತಿರುವ ಒಂದು ವಿಷಯವೆಂದರೆ, ಹೆಚ್ಚು ಕಮರ್ಷಿಯಲ್ ಮೌಲ್ಯವನ್ನು ಹೊಂದಿರುವ ಆಟಗಾರರ ಮೇಲೆ ಮಾರುಕಟ್ಟೆಯ ಒತ್ತಡ ಹೆಚ್ಚುತ್ತಿದೆ. ಪ್ಯಾಟ್ ಕಮಿನ್ಸ್, ಜಾಶ್ ಹೇಝಲ್‌ವುಡ್ ಮತ್ತು ಟ್ರಾವಿಸ್ ಹೆಡ್ ಅವರಂತಹ ಎಲ್ಲಾ ಸ್ವರೂಪದಲ್ಲಿ ಆಡುವ ಆಟಗಾರರಿಗೆ ದೊಡ್ಡ ಬೇಡಿಕೆ ಇದೆ. ಆದ್ದರಿಂದ ಅವರು ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಬದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಪ್ರಮುಖ ಆದ್ಯತೆ,” ಎಂದು ಅವರು ಸೇರಿಸಿದ್ದಾರೆ.