ನವದೆಹಲಿ: ಭಾರತ ಟಿ20 ತಂಡಕ್ಕೆ ಶುಭಮನ ಗಿಲ್ ಅವರ ಆಯ್ಕೆಯನ್ನು ಮಾಜಿ ಕ್ರಿಕಟಿಗ ಮೊಹಮ್ಮದ್ ಕೈಫ್ (Mohammad Kaif) ಪ್ರಶ್ನೆ ಮಾಡಿದ್ದಾರೆ. ದೀರ್ಘಾವಧಿ ಭಾರತ ಟಿ20 ತಂಡದಿಂದ ದೂರ ಉಳಿದಿದ್ದ ಶುಭಮನ್ ಗಿಲ್ (Shubman Gill) ಅವರನ್ನು 2025ರ ಏಷ್ಯಾ ಕಪ್ ಭಾರತ ತಂಡದಲ್ಲಿ ಸ್ಥಾನವನ್ನು ನೀಡಲಾಗಿತ್ತು. ಆ ಮೂಲಕ ಅಭಿಷೇಕ್ ಶರ್ಮಾ ಅವರ ಜೊತೆ ಕಳೆದ ಒಂದೂವರೆ ವರ್ಷದಿಂದ ಇನಿಂಗ್ಸ್ ಆರಂಭಿಸುತ್ತಿದ್ದ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಮಧ್ಯಮ ಕ್ರಮಾಂಕಕ್ಕೆ ಕಳುಹಿಸಲಾಗಿತ್ತು. ಇದಕ್ಕೂ ಮುನ್ನ ಸಂಜು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಳೆದ 12 ತಿಂಗಳುಗಳಿಂದ 3 ಶತಕವನ್ನು ಬಾರಿಸಿದ್ದರು. ಅಂದ ಹಾಗೆ ಗಿಲ್ ತಾವು ಆಡಿದ ಕೊನೆಯ 15 ಇನಿಂಗ್ಸ್‌ಗಳಿಂದ ಏಕೈಕ ಅರ್ಧಶತಕವನ್ನು ಸಿಡಿಸಲು ಸಾಧ್ಯವಾಗಿಲ್ಲ.
ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, "ಅವರಿಗೆ (ಬಿಸಿಸಿಐ ಸೆಲೆಕ್ಟರ್‌ಗಳು) ಉತ್ತಮ ಆಟಗಾರರಿದ್ದಾರೆಂದು ತಿಳಿದಿತ್ತು, ನಾನು ಟಿ20 ಸ್ವರೂಪದ ಬಗ್ಗೆ ಮಾತನಾಡುತ್ತಿದ್ದೇನೆ, ಇದನ್ನಷ್ಟೇ ಹೇಳುತ್ತಿದ್ದೇನೆ. ಗಿಲ್ ಗಿಂತ ಉತ್ತಮ ಆಟಗಾರರಿದ್ದರು. ಆದ್ದರಿಂದ ಇದು ಆಯ್ಕೆದಾರರ ತಪ್ಪಾಗಿತ್ತು. ಅವರು ತಪ್ಪು ಮಾಡಿದ್ದಾರೆ ಮತ್ತು ಭಾರತೀಯ ಕ್ರಿಕೆಟ್ ಹಿಂದಕ್ಕೆ ಹೋಗಿದೆ. ಎರಡು ಮೂರು ತಿಂಗಳುಗಳ ಕಾಲ, ನೀವು ಜೈಸ್ವಾಲ್, ಸ್ಯಾಮ್ಸನ್ ಮತ್ತು ಜಿತೇಶ್ ಅವರ ಮೇಲೆ ಹೂಡಿಕೆ ಮಾಡಬಹುದಿತ್ತು," ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಭಾರತ ತಂಡದಿಂದ ಶುಭಮನ್ ಗಿಲ್‌ರನ್ನು ಕೈ ಬಿಡಲು ನೈಜ ಕಾರಣ ತಿಳಿಸಿದ ಆಕಾಶ ಚೋಪ್ರಾ!
ಭಾರತ ಟಿ20ಐ ತಂಡಕ್ಕೆ ಮರಳಿದ ಬಳಿಕ ಶುಭಮನ್ ಗಿಲ್ ಅವರು ಆಡಿದ 15 ಇನಿಂಗ್ಸ್‌ಗಳಿಂದ 24.25ರ ಸರಾಸರಿ ಹಾಗೂ 137.26ರ ಸ್ಟ್ರೈಕ್ ರೇಟ್‌ನಲ್ಲಿ 291 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದರಲ್ಲಿ 47 ರನ್ ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಇದರ ಪರಿಣಾಮವಾಗಿ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡದಿಂದ ಶುಭಮನ್ ಗಿಲ್ ಅವರನ್ನು ಕೈ ಬಿಡಲಾಗಿತ್ತು. ಆ ಮೂಲಕ ಸಂಜು ಸ್ಯಾಮ್ಸನ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಉಳಿಸಿಕೊಳ್ಳಲಾಗಿದೆ. ಎರಡನೇ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲಾಗಿದೆ.
Vijay Hazare Trophy: ಆಂಧ್ರ ಬೌಲರ್‌ಗಳನ್ನು ಬೆಂಡೆತ್ತಿದ್ದ ವಿರಾಟ್ ಕೊಹ್ಲಿ, 131 ರನ್ ಚಚ್ಚಿದ ರನ್ ಮಷೀನ್!
ಬಿಸಿಸಿಐ ಆಯ್ಕೆದಾರರನ್ನು ಟೀಕಿಸಿದ ಮೊಹಮ್ಮದ್ ಕೈಫ್
"ನೀವು ಶುಭಮನ್ ಗಿಲ್ ಅವರನ್ನು ಕೊನೆಯವರೆಗೂ ಹೊತ್ತುಕೊಂಡು ಹೋಗಿ ನಂತರ ಕೈಬಿಟ್ಟಿದ್ದೀರಿ. ಅದು ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ತಡವಾಗಿ ಇದು ಬಂದಿದೆ, ಆದರೆ ಅದು ಸರಿಯಾದ ನಿರ್ಧಾರ. ಯೋಜನೆ ಶೂನ್ಯ. ಯಾವುದೇ ಯೋಜನೆ ಇಲ್ಲ. ಇದು ಯೋಜನೆಯ ಹೆಸರಿನಲ್ಲಿ ಸಮಯ ವ್ಯರ್ಥವಾಗಿದೆ. ನೀವು ಈಗ ಸಿದ್ಧರಿಲ್ಲದ ಆಟಗಾರನನ್ನು ಬೆಂಬಲಿಸಿದ್ದೀರಿ. ಆಯ್ಕೆದಾರರಾಗಿ ಅದು ನಿಮ್ಮ ತಪ್ಪು. ಅವರು 17-18 ಇನಿಂಗ್ಸ್‌ಗಳಲ್ಲಿ ಸ್ಕೋರ್ ಮಾಡದ ಕಾರಣ ಯಾವುದೇ ಆಯ್ಕೆ ಉಳಿದಿರಲಿಲ್ಲ ಮತ್ತು ನೀವು ಅವರಿಗೆ ಇನ್ನೂ ಎಷ್ಟು ಅವಕಾಶಗಳನ್ನು ನೀಡುತ್ತೀರಿ? ಒತ್ತಡ ಹೆಚ್ಚುತ್ತಿತ್ತು. ಯಾರೂ ಅವರನ್ನು ಕೈಬಿಡಲು ಬಯಸಲಿಲ್ಲ, ಆದರೆ ಇದು ಭಾರತೀಯ ಕ್ರಿಕೆಟ್‌ಗೆ ಮತ್ತು ಅವಕಾಶ ನೀಡಬೇಕಾಗಿದ್ದ ಆಟಗಾರರಿಗೆ ಸಮಯ ವ್ಯರ್ಥ ಎಂದು ನಾನು ಭಾವಿಸುತ್ತೇನೆ," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Vijay Hazare Trophy: 62 ಎಸೆತಗಳಲ್ಲಿ ಶತಕ ಬಾರಿಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!
ಅಭಿಷೇಕ್ ಶರ್ಮಾ ಜೊತೆ ಸಂಜು ಸ್ಯಾಮ್ಸನ್ ಓಪನರ್
ಶುಭಮನ್ ಗಿಲ್ ಟಿ20ಐ ತಂಡದಿಂದ ಹೊರಗುಳಿದಿರುವುದರಿಂದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಜೊತೆಗೆ ಆರಂಭಿಕ ಸ್ಥಾನಕ್ಕೆ ಮರಳಲಿದ್ದಾರೆ. ಈ ಜೋಡಿ ಟೀಮ್ ಇಂಡಿಯಾ ಪರ ಅದ್ಭುತ ಆರಂಭಿಕ ಜೊತೆಯಾಟವಾಡಿದ್ದರು ಮತ್ತು ಜನವರಿ 21 ರಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ತಮ್ಮ ಸೇವೆಯನ್ನು ಪುನರಾರಂಭಿಸಲಿದ್ದಾರೆ. ಇದರ ನಡುವೆ ಕಿಶನ್ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಮತ್ತು ಕಿವೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಅವಕಾಶ ಪಡೆಯಬಹುದು.