ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL: ಪ್ರಸಿಧ್‌ ಕೃಷ್ಣ-ಆಕಿಬ್‌ ನಬಿ ನಡುವೆ ಎರಡನೇ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಆಗಸ್ಟ್‌ 15 ರಂದು ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪರ ಎರಡನೇ ವೇಗಿಯಾಗಿ ಯಾರು ಕಣಕ್ಕೆ ಇಳಿಯಲಿದ್ದಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ನಾಯಕ ಅಜಿಂಕ್ಯ ರಹಾನೆ, ಮೊಹಮ್ಮದ್‌ ಸಿರಾಜ್‌ ಜೊತೆಗೆ ಎರಡನೇ ವೇಗಿಯನ್ನು ಆಯ್ಕೆ ಮಾಡಿದ್ದಾರೆ.

ಭಾರತ ತಂಡಕ್ಕೆ ಎರಡನೇ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ.

ನವದೆಹಲಿ: ಭಾರತ ಹಾಗೂ ಶ್ರೀಲಂಕಾ (IND vs SL) ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಗಸ್ಟ್‌ 15 ರಂದು ಆರಂಭವಾಗಲಿದೆ. ಮೊದಲನೇ ಟೆಸ್ಟ್‌ ಪಂದ್ಯ ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡನೇ ವೇಗಿಯಾಗಿ ಯಾರು ಕಣಕ್ಕೆ ಇಳಿಯಲಿದ್ದಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ. ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಸರಣಿಯಿಂದ ಹೊರ ನಡೆದಿದ್ದಾರೆ ಹಾಗೂ ಅವರ ಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಆಕಿಬ್‌ ನಬಿಗೆ ಸ್ಥಾನವನ್ನು ನೀಡಲಾಗಿದೆ. ಎರಡನೇ ಆಯ್ಕೆಯ ವೇಗಿಯಾಗಿ ಯಾರಿಗೆ ಅವಕಾಶ ನೀಡಬೇಕೆಂದು ಅಜಿಂಕ್ಯ ರಹಾನೆ (Ajinkya Rahane) ಸಲಹೆ ನೀಡಿದ್ದಾರೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಅಜಿಂಕ್ಯ ರಹಾನೆ ಕೂಡ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡನೇ ವೇಗಿಯಾಗಿ ಯಾರನ್ನು ಆಡಿಸಬೇಕೆಂದು ಸಲಹೆ ನೀಡಿದ್ದಾರೆ. ಎರಡನೇ ವೇಗಿಯ ಸ್ಥಾನಕ್ಕೆ ಪ್ರಸಿಧ್‌ ಕೃಷ್ಣ, ಆಕಿಬ್‌ ನಬಿ ಹಾಗೂ ಗುರ್ನೂರ್‌ ಬ್ರಾರ್‌ ನಡುವೆ ಪೈಪೋಟಿ ನಡೆಯಲಿದೆ.

"ಭಾರತ ತಂಡದ ಪ್ಲೇಯಿಂಗ್‌ XIನ ಇಬ್ಬರು ವೇಗಿಗಳ ಸ್ಥಾನದಲ್ಲಿ ಒಂದು ಸ್ಥಾನ ಮೊಹಮ್ಮದ್‌ ಸಿರಾಜ್‌ಗೆ ಖಚಿತ. ಇಲ್ಲಿನ ಕಂಡೀಷನ್ಸ್‌ ವೇಗದ ಬೌಲಿಂಗ್‌ಗೆ ಪೂರಕವಾಗಿದ್ದರೆ, ಎರಡನೇ ವೇಗದ ಬೌಲರ್‌ ಸ್ಥಾನಕ್ಕೆ ಆಕಿಬ್‌ ನಬಿಗೆ ಸ್ಥಾನವನ್ನು ನೀಡಬೇಕು. ಒಂದು ಪಿಚ್‌ ಒಣಗಿರುವ ರೀತಿ ಇದ್ದರೆ, ಹೆಚ್ಚಿನ ವೇಗದಲ್ಲಿ ಚೆಂಡನ್ನು ಎಸೆಯಬಲ್ಲ ಪ್ರಸಿಧ್‌ ಕೃಷ್ಣಗೆ ಎರಡನೇ ವೇಗದ ಬೌಲರ್‌ ಆಗಿ ಆಯ್ಕೆ ಮಾಡಬೇಕು. ಒಮ್ಮೆ ಪಿಚ್‌ ಫ್ಲ್ಯಾಟ್‌ ಆದ ಬಳಿಕ ಅವರು ತಮ್ಮ ಶಾರ್ಟ್‌ ಬಾಲ್‌ಗಳ ಮೂಲಕ ಅರೌಂಡ್‌ ವಿಕೆಟ್‌ ತಂತ್ರವನ್ನು ರೂಪಿಸಬಹುದು," ಎಂದು ಅಜಿಂಕ್ಯ ರಹಾನೆ ತಿಳಿಸಿದ್ದಾರೆ.

IND vs SL: ʻಭಾರತ ತಂಡವನ್ನು ಶ್ರೀಲಂಕಾ ಮಣಿಸಲಿದೆʼ-ಶುಭಮನ್‌ ಗಿಲ್‌ ಬಳಗಕ್ಕೆ ಧನಂಜಯ್‌ ಡಿ ಸಿಲ್ವಾ ಎಚ್ಚರಿಕೆ!

“ಬುಮ್ರಾ ಇಲ್ಲದ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ ಅವರ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ಶ್ರೀಲಂಕಾದಲ್ಲಿನ ಪಿಚ್‌ಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಇದು ಅತ್ಯಂತ ಪ್ರಮುಖ ವಿಚಾರವಾಗಲಿದೆ,” ಎಂದು ಅವರು ಹೇಳಿದ್ದಾರೆ.

“ಆದರೆ ಶ್ರೀಲಂಕಾದಲ್ಲಿ ಸಂಪೂರ್ಣವಾಗಿ ವೇಗದ ಬೌಲರ್‌ಗಳಿಗೆ ನೆರವಾಗುವ ಹಸಿರು ಪಿಚ್ ಸಿಗುವುದು ಅಪರೂಪ. ಇದನ್ನು ಗಮನದಲ್ಲಿಟ್ಟುಕೊಂಡರೆ, ಮೂರು ಸ್ಪಿನ್ನರ್‌ಗಳು ಮತ್ತು ಇಬ್ಬರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯುವುದು ಭಾರತಕ್ಕೆ ಸೂಕ್ತ ಸಂಯೋಜನೆಯಾಗಲಿದೆ,” ಎಂದು ಅವರು ತಿಳಿಸಿದ್ದಾರೆ.

IND vs SL: ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟ ಎಂದ ಧನಂಜಯ್‌ ಸಿಲ್ವಾ!

ಇದೇ ವೇಳೆ, ಪ್ರಸಿಧ್‌ ಕೃಷ್ಣ ಅವರು ಆಕಿಬ್ ನಬಿಗಿಂತ ಆಯ್ಕೆಯ ಕ್ರಮದಲ್ಲಿ ಮುಂದಿದ್ದಾರೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರಸಿಧ್‌ ಕೃಷ್ಣ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ‘ಎ’ ತಂಡದ ಪರ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಆಕಿಬ್ ನಬಿ ಆರು ವಿಕೆಟ್‌ಗಳನ್ನು ಕಬಳಿಸಿದ್ದರು.

ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI

  1. ಯಶಸ್ವಿ ಜೈಸ್ವಾಲ್
  2. ಕೆ.ಎಲ್ ರಾಹುಲ್
  3. ದೇವದತ್ ಪಡಿಕ್ಕಲ್
  4. ಶುಭಮನ್ ಗಿಲ್ (ನಾಯಕ)
  5. ರಿಷಬ್ ಪಂತ್ (ವಿ.ಕೀ.)
  6. ಧ್ರುವ ಜುರೆಲ್
  7. ರವೀಂದ್ರ ಜಡೇಜಾ
  8. ಮಾನವ್ ಸುತಾರ್
  9. ಕುಲ್ದೀಪ್ ಯಾದವ್
  10. ಮೊಹಮ್ಮದ್ ಸಿರಾಜ್
  11. ಪ್ರಸಿದ್ಧ್ ಕೃಷ್ಣ/ಗುರ್ನೂರ್‌ ಬ್ರಾರ್‌/ಆಕಿಬ್‌ ನಬಿ