ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೆ ಪ್ರಿನ್ಸ್‌ ಯಾದವ್‌ ಸಂಪೂರ್ಣ ಫಿಟ್‌; ಹಾರ್ದಿಕ್‌, ಬುಮ್ರಾ ಬಗ್ಗೆ ಅಪ್‌ಡೇಟ್‌!

ಜಿಂಬಾಬ್ವೆ ಪ್ರವಾಸದ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದ ವೇಗದ ಬೌಲರ್ ಪ್ರಿನ್ಸ್ ಯಾದವ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಫಿಟ್ ಆಗಿದ್ದಾರೆ. ಹೀಗಾಗಿ ಅವರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೂಲಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಇದೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20ಐ ಸರಣಿಗೆ ಪ್ರಿನ್ಸ್‌ ಯಾದವ್‌ ಫಿಟ್‌.

ನವದೆಹಲಿ: ಜುಲೈ ಅಂತ್ಯದಲ್ಲಿ ಜಿಂಬಾಬ್ವೆ ವಿರುದ್ಧದ ಎರಡನೇ ಟಿ20ಐ ಪಂದ್ಯದ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದ ದೆಹಲಿಯ ಬಲಗೈ ವೇಗದ ಬೌಲರ್ ಪ್ರಿನ್ಸ್ ಯಾದವ್ (Prince Yadav) ಇದೀಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ.ವರದಿಗಳ ಪ್ರಕಾರ, 24ರ ವಯಸ್ಸಿನ ಪ್ರಿನ್ಸ್ ಯಾದವ್ ತಮ್ಮ ಚೇತರಿಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಇದೀಗ ಆಯ್ಕೆಗೆ ಲಭ್ಯರಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯ ಕೊನೆಯ ಪಂದ್ಯದಿಂದ ಅವರು ಹೊರಗುಳಿದಿದ್ದರು. ಆದರೆ ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದಲ್ಲಿ ನಡೆಯಲಿರುವ ಟಿ20ಐ ಸರಣಿಯ (IND vs WI) ಮೂಲಕ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.

ಇದೇ ವೇಳೆ, ಭಾರತದ ಸ್ಟಾರ್ ವೇಗದ ಬೌಲರ್ ಜಸ್‌ಪ್ರೀತ್‌ ಬುಮ್ರಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತಮ್ಮ ಪುನಶ್ಚೇತನ (ರಿಹ್ಯಾಬ್) ಹಾಗೂ ತರಬೇತಿಯನ್ನು ಮುಂದುವರಿಸಿದ್ದಾರೆ. ಎಡ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಅವರು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಿಧಾನವಾಗಿ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರು ತರಬೇತಿ ಪಡೆಯುತ್ತಿರುವ ದೃಶ್ಯಗಳೂ ಕಾಣಿಸಿಕೊಂಡಿವೆ.

ಕೊಲಂಬೊ ಟೆಸ್ಟ್‌ ಡ್ರಾ ಆದ ಹೊರತಾಗಿಯೂ ಶುಭಮನ್‌ ಗಿಲ್‌ ತಂತ್ರವನ್ನು ಬೆಂಬಲಿಸಿದ ಕೆ ಶ್ರೀಕಾಂತ್‌!

ಆದರೆ ಪಂದ್ಯದ ಸಂಪೂರ್ಣ ವರ್ಕ್‌ಲೋಡ್‌ ಅನ್ನು ಗಮನದಲ್ಲಿಟ್ಟುಕೊಂಡರೆ, ಬುಮ್ರಾ ಇನ್ನೂ ಸಂಪೂರ್ಣವಾಗಿ ಸಿದ್ಧರಾಗಿಲ್ಲ. ಅವರ ಕಮ್‌ಬ್ಯಾಕ್‌ಗೆ ಯಾವುದೇ ಖಚಿತ ಸಮಯಮಿತಿ ನಿಗದಿಯಾಗಿಲ್ಲ ಎಂದು ವರದಿಯಾಗಿದೆ.

ಹಾರ್ದಿಕ್ ಪಾಂಡ್ಯ ಫಿಟ್ ಆಗಿದ್ದಾರಾ?

ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಅವರ ವಿಚಾರಕ್ಕೆ ಬಂದರೆ, ತೊಡೆ ಮತ್ತು ಬೆನ್ನಿನ ಗಾಯದ ಬಳಿಕ ಉಂಟಾಗಿದ್ದ ಸ್ನಾಯು ಸೆಳೆತದಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಬುಮ್ರಾ ಅವರೊಂದಿಗೆ ಹಾರ್ದಿಕ್ ಕೂಡ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತರಬೇತಿ ಮುಂದುವರಿಸಿದ್ದಾರೆ.

ಆಗಸ್ಟ್‌ನಿಂದಲೇ ವೈಟ್‌ಬಾಲ್ ಕ್ರಿಕೆಟ್‌ಗೆ ಹಾರ್ದಿಕ್ ಲಭ್ಯರಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಬಿಸಿಸಿಐ ವೈದ್ಯಕೀಯ ತಂಡ ಅವರ ವರ್ಕ್‌ಲೋಡ್‌ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿದೆ. ಸದ್ಯಕ್ಕೆ ಅವರ ಕಮ್‌ಬ್ಯಾಕ್ ಕುರಿತು ಯಾವುದೇ ಹೊಸ ಅಪ್‌ಡೇಟ್ ಹೊರಬಂದಿಲ್ಲ.

ನಾನು ವಿಕೆಟ್‌ ಟೇಕರ್‌ ಎಂಬುದು ಇಶಾನ್‌ ಕಿಶನ್‌ಗೆ ಗೊತ್ತಿಲ್ಲ ಎಂದ ವೈಭವ್‌ ಸೂರ್ಯವಂಶಿ!

ಮುಂಬರುವ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ವೈಟ್‌ಬಾಲ್ ಸರಣಿಗಳು ಹಾಗೂ ಭವಿಷ್ಯದ ಪ್ರಮುಖ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದ ಆಯ್ಕೆದಾರರು ಪ್ರಮುಖ ಆಟಗಾರರ ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಟಗಾರರ ಗಾಯದ ಸಮಸ್ಯೆಗಳ ಹಿನ್ನೆಲೆಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಮತ್ತು ಬಿಸಿಸಿಐ ಸಾಕಷ್ಟು ಟೀಕೆಗಳನ್ನು ಎದುರಿಸಿವೆ.