ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರ ಐಪಿಎಲ್‌ ಟೂರ್ನಿಗೂ ಮುನ್ನ ಪಂಜಾಬ್‌ ಕಿಂಗ್ಸ್‌ಗೆ ದೊಡ್ಡ ಆಘಾತ, ತಂಡವನ್ನು ತೊರೆದ ಇಬ್ಬರು ಕೋಚ್‌ಗಳು!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿರಾಶಾದಾಯಕ ಅಭಿಯಾನದ ಬಳಿಕ ಬೌಲಿಂಗ್‌ ಕೋಚ್‌ ಜೇಮ್ಸ್‌ ಹೋಪ್ಸ್‌ ಮತ್ತು ಫೀಲ್ಡಿಂಗ್‌ ಕೋಚ್‌ ಬ್ರಾಡ್‌ ಹೆಡ್ಡಿನ ಅವರು ಪಂಜಾಬ್‌ ಕಿಂಗ್ಸ್‌ ತಂಡವನ್ನು ತೊರೆಯುತ್ತಿದ್ದಾರೆ. ಈ ಬಗ್ಗೆ ಪಂಜಾಬ್‌ ಕಿಂಗ್ಸ್‌ ಖಚಿತಪಡಿಸಿದೆ. ಈ ಇಬ್ಬರೂ ಆಸ್ಟ್ರೇಲಿಯಾ ದೇಶಿ ಕ್ರಿಕೆಟ್‌ನ ತಂಡಗಳಲ್ಲಿ ಕೋಚಿಂಗ್‌ಗೆ ಸೇರ್ಪಡೆಯಾಗಿದ್ದಾರೆ.

ಪಂಜಾಬ್‌ ಕಿಂಗ್ಸ್‌ ತೊರೆದ ಜೇಮ್ಸ್‌ ಹೋಪ್ಸ್‌, ಬ್ರಾಡ್‌ ಹೆಡ್ಡಿನ್‌.

ನವದೆಹಲಿ: ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಋತುವಿನ ಸಿದ್ಧತೆ ಆರಂಭಿಸುವುದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ (PBKS) ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ವೇಗದ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ (James Hopes) ಹಾಗೂ ಫೀಲ್ಡಿಂಗ್ ಕೋಚ್ ಬ್ರಾಡ್ ಹೆಡ್ಡಿನ್‌ (Brad Haddin) ತಂಡದಿಂದ ಹೊರನಡೆಯುತ್ತಿರುವುದನ್ನು ಪಂಜಾಬ್ ಕಿಂಗ್ಸ್ ಖಚಿತಪಡಿಸಿದೆ. ಹೋಪ್ಸ್ ಹಾಗೂ ಹೆಡ್ಡಿನ್ ಇಬ್ಬರೂ ಇತ್ತೀಚೆಗೆ ತಮ್ಮ ನಿರ್ಧಾರವನ್ನು ಪಂಜಾಬ್ ಕಿಂಗ್ಸ್ ಆಡಳಿತಕ್ಕೆ ತಿಳಿಸಿದ್ದು, ಇಬ್ಬರೂ ಇದೀಗ ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್‌ನಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ.

2026ರಐಪಿಎಲ್ ಟೂರ್ನಿಯಲ್ಲಿ ನಿರಾಸಾದಾಯಕ ಪ್ರದರ್ಶನ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಟೂರ್ನಿಯ ಆರಂಭದಲ್ಲಿ ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನ ನೀಡಿ ಅಜೇಯವಾಗಿ ಮುನ್ನಡೆ ಸಾಧಿಸಿತ್ತು. ಸುಮಾರು ಒಂದು ತಿಂಗಳ ಕಾಲ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದ್ದ ತಂಡ, ಟೂರ್ನಿಯ ದ್ವಿತೀಯಾರ್ಧದಲ್ಲಿ ಏಕಾಏಕಿ ಕುಸಿತ ಕಂಡಿತು. ಪರಿಣಾಮವಾಗಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಪ್ಲೇಆಫ್‌ಗೂ ಅರ್ಹತೆ ಪಡೆಯದೆ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು.

Asian Games final: ಭಾರತದ ವಿರುದ್ಧದ ಸೋಲಿನಿಂದ ಇನ್ನೂ ನೋವಾಗುತ್ತಿದೆ ಎಂದ ಹಸನ್‌ ನವಾಝ್!‌

ಆಸ್ಟ್ರೇಲಿಯಾ ತಂಡಗಳ ಜವಾಬ್ದಾರಿ

ಜೇಮ್ಸ್ ಹೋಪ್ಸ್ ಅವರನ್ನು ಕ್ವೀನ್ಸ್‌ಲ್ಯಾಂಡ್ ಮತ್ತು ಬ್ರಿಸ್ಬೇನ್ ಹೀಟ್ ತಂಡಗಳ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಮತ್ತೊಂದೆಡೆ, ಬ್ರಾಡ್ ಹೆಡ್ಡಿನ್ ನ್ಯೂ ಸೌಥ್‌ ವೇಲ್ಸ್ ಪುರುಷರ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಿಕಿ ಪಾಂಟಿಂಗ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಪಂಜಾಬ್ ಕಿಂಗ್ಸ್‌ಗೆ ಬಂದಾಗ ಹೋಪ್ಸ್ ಕೂಡ ಅವರೊಂದಿಗೆ ತಂಡ ಸೇರಿದ್ದರು. ಹೆಡ್ಡಿನ್ ಅವರನ್ನು ಪಾಂಟಿಂಗ್ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ನಂತರವೂ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು.

ಪಾಂಟಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರದರ್ಶನ ಸುಧಾರಿಸುವಲ್ಲಿ ಈ ಇಬ್ಬರು ಕೋಚ್‌ಗಳೂ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷವಾಗಿ 2025ರ ಐಪಿಎಲ್ ಟೂರ್ನಿಯಲ್ಲಿ ತಂಡದ ಉತ್ತಮ ಅಭಿಯಾನದಲ್ಲಿ ಇವರ ಕೊಡುಗೆ ಗಮನಾರ್ಹವಾಗಿತ್ತು.

IND vs WI: ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌!

ಆದರೆ 2026ರ ಋತುವಿನಲ್ಲಿ ಉತ್ತಮ ಆರಂಭದ ಬಳಿಕ ಪಂಜಾಬ್ ತಂಡದ ಅಭಿಯಾನ ಸಂಪೂರ್ಣವಾಗಿ ಹಳಿ ತಪ್ಪಿತು. ತಂಡದ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಫೀಲ್ಡಿಂಗ್ ಕೂಡ ಒಂದಾಗಿತ್ತು. ದ್ವಿತೀಯಾರ್ಧದಲ್ಲಿ ಪಂಜಾಬ್ ಕಿಂಗ್ಸ್ ಆಟಗಾರರು ಪದೇ-ಪದೆ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು, ತಂಡದ ಫಲಿತಾಂಶಗಳ ಮೇಲೂ ಪರಿಣಾಮ ಬೀರಿತು. ಉಪನಾಯಕ ಶಶಾಂಕ್ ಸಿಂಗ್ ಕೂಡ ಫೀಲ್ಡಿಂಗ್ ವೈಫಲ್ಯದ ಸಂದರ್ಭದಲ್ಲಿ ಗಮನ ಸೆಳೆದಿದ್ದರು. ಪ್ರಮುಖ ಸಂದರ್ಭಗಳಲ್ಲಿ ಕ್ಯಾಚ್‌ಗಳನ್ನು ಹಿಡಿಯಲು ವಿಫಲವಾಗಿದ್ದು ಪಂಜಾಬ್ ಕಿಂಗ್ಸ್‌ನ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿತ್ತು.

ಪಾಂಟಿಂಗ್‌ಗೆ ಮತ್ತಷ್ಟು ಸವಾಲು

ಇಬ್ಬರು ಸಹಾಯಕ ಕೋಚ್‌ಗಳ ನಿರ್ಗಮನದ ಬಳಿಕ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ಗೆ ಇವರ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳನ್ನು ಕರೆ ತರುವ ವಿಷಯದಲ್ಲಿ ಸವಾಲು ಎದುರಾಗಲಿದೆ. ಅಂದ ಹಾಗೆ ಇದಕ್ಕೂ ಮುನ್ನ 2026ರ ಋತುವಿನ ಬಳಿಕ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ಕೂಡ ತಂಡ ತೊರೆದು ಭಾರತ ಪುರುಷರ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸೇರಿಕೊಂಡಿದ್ದರು.



ಹೀಗಾಗಿ ಮುಂದಿನ ಐಪಿಎಲ್ ಋತುವಿಗೆ ಸಿದ್ಧತೆ ನಡೆಸುವ ಮುನ್ನ ಪಾಂಟಿಂಗ್ ತಮ್ಮ ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿಯ ಪ್ರಮುಖ ಭಾಗವನ್ನು ಮರುನಿರ್ಮಿಸುವ ಅಗತ್ಯ ಎದುರಾಗಿದೆ. ಪಂಜಾಬ್ ಕಿಂಗ್ಸ್ ಕಳೆದ ಋತುವಿನ ದ್ವಿತೀಯಾರ್ಧದ ಕುಸಿತದಿಂದ ಪಾಠ ಕಲಿತು, ಮುಂದಿನ ಋತುವಿನಲ್ಲಿ ಬಲಿಷ್ಠವಾಗಿ ಮರಳಲು ಹೊಸ ಕೋಚಿಂಗ್ ತಂಡದೊಂದಿಗೆ ಸಿದ್ಧತೆ ನಡೆಸಬೇಕಾಗಿದೆ.