ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: 600ಕ್ಕೂ ಅಧಿಕ ರನ್‌ ಸಿಡಿಸಿರುವ ಶುಭಮನ್‌ ಗಿಲ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆರ್‌ ಅಶ್ವಿನ್‌!

IPL 2026: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಗುಜರಾತ್‌ ಟೈಟನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌, ಇಲ್ಲಿಯವರೆಗೂ ಆಡಿದ 13 ಪಂದ್ಯಗಳಿಂದ 615 ರನ್‌ಗಳನ್ನು ಕಲೆ ಹಾಕಿ ಆರೆಂಜ್‌ ಕ್ಯಾಪ್‌ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಗಿಲ್‌ ಬಗ್ಗೆ ಆರ್‌ ಅಶ್ವಿನ್‌ ವಿಶೇಷ ಹೇಳಿಕೆ ನೀಡಿದ್ದಾರೆ.

ಶುಭಮನ್‌ ಗಿಲ್‌ ಟಿ20ಐ ತಂಡದ ಭವಿಷ್ಯ ನುಡಿದ ಅಶ್ವಿನ್‌.

ನವದೆಹಲಿ: ಶುಭಮನ್‌ ಗಿಲ್‌ (Shubman Gill) 2026ರ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಗೂ ಮುನ್ನ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ತವರು ಟಿ20 ಸರಣಿಯ ಭಾರತ ಟಿ20 ತಂಡದಲ್ಲಿನ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು. ಪರಿಣಾಮವಾಗಿ, ಅವರು ಆ ಸರಣಿ ಹಾಗೂ ಟಿ20 ವಿಶ್ವಕಪ್ ಟೂರ್ನಿಯನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ, ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕನಾಗಿರುವ ಗಿಲ್ ಈ ಹಿನ್ನಡೆಯನ್ನು ಸಮಾಧಾನದಿಂದ ಸ್ವೀಕರಿಸಿ, ಇದೀಗ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ರನ್‌ ಹೊಳೆ ಹರಿಸುತ್ತಿದ್ದಾರೆ. 13 ಪಂದ್ಯಗಳಲ್ಲಿ 616 ರನ್‌ಗಳನ್ನು ಗಳಿಸಿರುವ ಗಿಲ್, ಗುಜರಾತ್‌ ಟೈಟನ್ಸ್‌ ತಂಡದ ಸಹ ಆಟಗಾರ ಸಾಯಿ ಸುದರ್ಶನ್‌ ಅವರ ಜೊತೆ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಮುನ್ನಡೆಯಲ್ಲಿದ್ದಾರೆ.

ಇಷ್ಟು ಪ್ರತಿಭಾವಂತ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವ ಈ ಸಮಯದಲ್ಲಿ ಶುಭಮನ್‌ ಗಿಲ್ ಅವರಿಗೆ ಪ್ರಸ್ತುತ ಭಾರತ ಟಿ20 ತಂಡದಲ್ಲಿ ಸ್ಥಾನ ಕಲ್ಪಿಸುವುದು ಸುಲಭವಲ್ಲ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ರವಿಚಂದ್ರನ್‌ ಅಶ್ವಿನ್‌ ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ, 2024ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ವಿರಾಟ್‌ ಕೊಹ್ಲಿ ಅವರೂ 2026ರ ಐಪಿಎಲ್ ಟೂರ್ನಿಯಲ್ಲಿ ತೋರಿದ ಅದ್ಭುತ ಪ್ರದರ್ಶನದ ಆಧಾರದಲ್ಲಿ ಮತ್ತೆ ತಂಡದಲ್ಲಿ ಸ್ಥಾನಕ್ಕೆ ಅರ್ಹರು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

IPL 2026: ಟಿ20 ಕ್ರಿಕೆಟ್‌ನಲ್ಲಿ 6000 ರನ್‌ಗಳನ್ನು ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌!

“ವಿರಾಟ್‌ ಕೊಹ್ಲಿ ಭಾರತ ಟಿ20 ತಂಡದಲ್ಲಿನ ಸ್ಥಾನಕ್ಕೆ ಅರ್ಹತೆ ಇಲ್ಲ ಎಂದು ನೀವು ಭಾವಿಸುತ್ತೀರಾ? ಅವರು ಅದ್ಭುತವಾಗಿ ಆಡುತ್ತಿದ್ದಾರೆ. ಆದರೆ ಅವರು ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗಿರುವುದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದೇ ಆಗಿರಬಹುದು. ಇಲ್ಲದಿದ್ದರೆ, ಅವರೂ ಇದೇ ಗೊಂದಲದ ಪರಿಸ್ಥಿತಿಯಲ್ಲಿ ಸಿಲುಕುತ್ತಿದ್ದರು.

"ಯಶಸ್ವಿ ಜೈಸ್ವಾಲ್‌ ಈ ಐಪಿಎಲ್‌ ಟೂರ್ನಿಯಲ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ ಕಳೆದ ವರ್ಷ ಅವರು ಅದ್ಭುತ ಟಿ20 ಆಟಗಾರರಾಗಿದ್ದರು. ಈಗ ಅವರ ಬಗ್ಗೆ ನಾವು ಹೆಚ್ಚು ಮಾತನಾಡುವುದೇ ಇಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಇಷ್ಟು ಹೆಚ್ಚು ಸ್ಪರ್ಧಿಗಳು ಇದ್ದಾರೆ,” ಎಂದು ಆರ್‌ ಅಶ್ವಿನ್‌ ತಮ್ಮ ಇತ್ತೀಚಿನ ಯೂಟ್ಯೂಬ್ ವಿಡಿಯೊದಲ್ಲಿ ಹೇಳಿದ್ದಾರೆ.

ಪ್ರಸ್ತುತ ಭಾರತ ಟಿ20 ತಂಡದ ಆರಂಭಿಕ ಜೋಡಿಯಾದ ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್‌ ಶರ್ಮಾ ಅವರನ್ನು ಹೊರಗಿಡುವುದು ತುಂಬಾ ಕಷ್ಟ. ಏಕೆಂದರೆ, ಇಬ್ಬರೂ ಕಳೆದ ಕೆಲವು ಸಮಯದಿಂದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೇ ವೇಳೆ, ಈ ಸೀಸನ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಮೆಚ್ಚುವಂತಹ ಪ್ರದರ್ಶನ ನೀಡಿರುವ ವೈಭವ್‌ ಸೂರ್ಯವಂಶಿ ಕೂಡ ರಾಷ್ಟ್ರೀಯ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗುವ ಸಾಧ್ಯತೆಯನ್ನು ಬಲಪಡಿಸಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.

CSK vs GT: ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಭರ್ಜರಿ ಗೆಲುವು ಪಡೆದ ಗುಜರಾತ್‌ ಟೈಟನ್ಸ್!

“ಒಬ್ಬ ಚಿಕ್ಕ ಹುಡುಗ 220 ಸ್ಟ್ರೈಕ್‌ರೇಟ್‌ನಲ್ಲಿ ಆಡುತ್ತಿದ್ದಾನೆ. ಅವರು ವಿಶೇಷ ಪ್ರತಿಭೆ. ಬಹುಶಃ ಗಿಲ್‌ಗಿಂತಲೂ ವಿಶೇಷವಾಗಿರಬಹುದು. ಸಂಜು ಸ್ಯಾಮ್ಸನ್‌ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಅವರನ್ನು ಯಾರೂ ಕೈಬಿಡಲು ಸಾಧ್ಯವಿಲ್ಲ. ಅಭಿಷೇಕ್‌ ಶರ್ಮಾ ಕೂಡ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಅದ್ಭುತವಾಗಿ ಆಡುತ್ತಿದ್ದಾರೆ.

ನೋಡಿ, ಗಿಲ್‌ ಅವರಲ್ಲಿರುವ ಸಾಮರ್ಥ್ಯದಿಂದ ಅವರು ಇನ್ನೂ ಹೆಚ್ಚಿನ ಮಟ್ಟಕ್ಕೆ ತಲುಪಬಹುದು. ವಿಶ್ವದ ಯಾವುದೇ ರಾಷ್ಟ್ರೀಯ ಟಿ20 ತಂಡದಲ್ಲಾದರೂ ಗಿಲ್ ಹೆಸರು ಖಂಡಿತವಾಗಿಯೂ ಇರುತ್ತದೆ. ಭಾರತೀಯ ಕ್ರಿಕೆಟ್ ಇಷ್ಟು ಪ್ರತಿಭಾವಂತರಿಂದ ಆಶೀರ್ವದಿತವಾಗಿರುವುದು ಒಂದೆಡೆ ದುರ್ಭಾಗ್ಯಕರವಾದರೂ, ಮತ್ತೊಂದೆಡೆ ಅದೃಷ್ಟಕರವೂ ಹೌದು,” ಎಂದು ಸ್ಪಿನ್‌ ದಿಗ್ಗಜ ತಿಳಿಸಿದ್ದಾರೆ.