ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL: ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆರ್‌ ಅಶ್ವಿನ್‌!

R Ashwin Picks India's Playing XI: ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಆಯ್ಕೆ ಮಾಡಿದ್ದಾರೆ. ಮೊದಲನೇ ಟೆಸ್ಟ್‌ ಪಂದ್ಯ ಆಗಸ್ಟ್‌ 15 ರಂದು ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ದೇವದತ್‌ ಪಡಿಕ್ಕಲ್‌ ಅವರನ್ನು ಮೂರನೇ ಕ್ರಮಾಂಕಕ್ಕೆ ಅಶ್ವಿನ್‌ ಆಯ್ಕೆ ಮಾಡಿದ್ದಾರೆ.

ಭಾರತದ ಪ್ಲೇಯಿಂಗ್‌ XI ಆರಿಸಿದ ಆರ್‌ ಅಶ್ವಿನ್‌.

ನವದೆಹಲಿ: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಎರಡು ಪಂದ್ಯಗಳ (IND vs SL) ಟೆಸ್ಟ್‌ ಸರಣಿಯ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಆಗಸ್ಟ್‌ 15 ರಂದು ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಕಾದಾಟ ನಡೆಸಲು ಉಭಯ ತಂಡಗಳು ಸಜ್ಜಾಗುತ್ತಿವೆ. ಮೊದಲನೇ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಜಸ್‌ಪ್ರೀತ್‌ ಬುಮ್ರಾ, ಸಾಯಿ ಸುದರ್ಶನ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಗಾಯಗಳ ಕಾರಣ ಸರಣಿಯಿಂದ ಹೊರ ಬಿದ್ದಿದ್ದಾರೆ. ಹಾಗಾಗಿ ಭಾರತ ತಂಡದ ಪ್ಲೇಯಿಂಗ್‌ XI ಆಯ್ಕೆ ಮಾಡುವಾಗ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಸ್ವಲ್ಪ ಗೊಂದಲ ಉಂಟಾಗಬಹುದು.

ಗಾಲೆ ಸ್ಟೇಡಿಯಂನ ಪಿಚ್‌ ಸ್ಪಿನ್‌ ಸ್ನೇಹಿಯಾಗಲಿದ್ದು, ಗೌತಮ್‌ ಗಂಭೀರ್‌ ಮಾರ್ಗದರ್ಶನ್‌ ಟೀಮ್‌ ಮ್ಯಾನೇಜ್‌ಮೆಂಟ್‌ ತನ್ನ ಪ್ಲೇಯಿಂಗ್‌ Xiನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನಬ ಮಹತ್ವ ನೀಡಬಹುದು. ಆದರೆ, ಆರ್‌ ಅಶ್ವಿನ್‌ ಅವರು ಗಾಲೆ ಕಂಡೀಷನ್ಸ್‌ಗೆ ಅನುಗುಣವಾಗಿ ತಮ್ಮ ನೆಚ್ಚಿನ ಪ್ಲೇಯಿಂಗ್‌ XI ಆಯ್ಕೆ ಮಾಡಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಶ್ರೀಲಂಕಾ ನಾಯಕ ಧನಂಜಯ್‌ ಡಿ ಸಿಲ್ವಾ, ಭಾರತ ತಂಡದ ಎದುರು ತಮ್ಮ ಬಲಿಷ್ಠ ಸ್ಪಿನ್‌ ದಾಳಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಹೇಳಿದ್ದರು.

ಶುಭಮನ್‌ ಗಿಲ್‌ ಅಲ್ಲವೇ ಅಲ್ಲ; ಸರ್ಫರಾಝ್‌ ಖಾನ್‌ ಉಪಖಂಡದ ರಾಜ ಎಂದ ಆರ್‌ ಅಶ್ವಿನ್‌! ಏಕೆ ಗೊತ್ತೆ?

ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಲು ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಅವರನ್ನು ಆಯ್ಕೆ ಮಾಡಿದ ಆರ್‌ ಅಶ್ವಿನ್‌, ಮೂರನೇ ಕ್ರಮಾಂಕಕ್ಕೆ ಇನ್‌ ಫಾರ್ಮ್‌ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ಗೆ ಸ್ಥಾನವನ್ನು ನೀಡಿದ್ದಾರೆ. ನಾಯಕ ಶುಭಮನ್‌ ಗಿಲ್‌ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆಂದು ಸ್ಪಿನ್‌ ದಿಗ್ಗಜ ಅಶ್ವಿನ್‌ ತಿಳಿಸಿದ್ದಾರೆ.

ಇನ್ನು ವಿಕೆಟ್‌ ಕೀಪರ್‌-ಬ್ಯಾಟರ್‌ ಆಗಿ ರಿಷಭ್‌ ಪಂತ್‌ ಅವರನ್ನು ಐದನೇ ಕ್ರಮಾಂಕಕ್ಕೆ ಅಶ್ವಿನ್‌ ಆಯ್ಕೆ ಮಾಡಿದ್ದಾರೆ. ಎರಡನೇ ವಿಕೆಟ್‌ ಕೀಪರ್‌ ಧ್ರವ್‌ ಜುರೆಲ್‌ ಅವರನ್ನು ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಗಿ ಆರಿಸಿದ್ದಾರೆ. ಇನ್ನು ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿ ವಿಕೆಟ್‌ ಆಗಿದ್ದು, ರವೀಂದ್ರ ಜಡೇಜಾ, ಮಾನವ್‌ ಸುತಾರ್‌ ಹಾಗೂ ಕುಲ್ದೀಪ್‌ ಯಾದವ್‌ ಅವರನ್ನು ಅಶ್ವಿನ್‌ ಆರಿಸಿದ್ದಾರೆ. ಕುಲ್ದೀಪ್‌ ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ಆಡಿದರೆ, ಸುತಾರ್‌ ಹಾಗೂ ಜಡೇಜಾ ಸ್ಪಿನ್‌ ಜೊತೆಗೆ ಬ್ಯಾಟಿಂಗ್‌ ಆಯ್ಕೆಯನ್ನು ನೀಡಲಿದ್ದಾರೆ. ಇನ್ನು ವೇಗದ ಬೌಲಿಂಗ್‌ ವಿಭಾಗಕ್ಕೆ ಮೊಹಮ್ಮದ್‌ ಸಿರಾಜ್‌ ಅವರನ್ನು ಮೊದಲನೇ ವೇಗಿಯಾಗಿ ಅಶ್ವಿನ್‌ ಆಯ್ಕೆ ಮಾಡಿದರೆ, ಗುರ್ನೂರ್‌ ಬ್ರಾರ್‌ ಅವರನ್ನು ಎರಡನೇ ವೇಗಿಯಾಗಿ ಆರಿಸಿದ್ದಾರೆ.

ಭಾರತ-ಶ್ರೀಲಂಕಾ ಮೊದಲ ಟೆಸ್ಟ್‌ಗೆ ಮಳೆ ಭೀತಿ; ಪಂದ್ಯ ನಡೆಯುವುದೇ ಅನುಮಾನ!

ಮೊದಲನೇ ಟೆಸ್ಟ್‌ಗೆ ಅಶ್ವಿನ್‌ ಆರಿಸಿದ ಭಾರತದ ಪ್ಲೇಯಿಂಗ್‌ XI

  1. ಯಶಸ್ವಿ ಜೈಸ್ವಾಲ್ (ಆರಂಭಿಕ ಬ್ಯಾಟ್ಸ್‌ಮನ್‌)
  2. ಕೆಎಲ್ ರಾಹುಲ್ (ಆರಂಭಿಕ ಬ್ಯಾಟ್ಸ್‌ಮನ್‌)
  3. ದೇವದತ್ ಪಡಿಕ್ಕಲ್ (ಬ್ಯಾಟ್ಸ್‌ಮನ್‌)
  4. ಶುಭ್‌ಮನ್ ಗಿಲ್ (ನಾಯಕ, ಬ್ಯಾಟ್ಸ್‌ಮನ್‌)
  5. ರಿಷಭ್ ಪಂತ್ (ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌)
  6. ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌)
  7. ರವೀಂದ್ರ ಜಡೇಜಾ (ಸ್ಪಿನ್‌ ಆಲ್‌ರೌಂಡರ್‌)
  8. ಮಾನವ್ ಸುಥಾರ್ (ಸ್ಪಿನ್‌ ಆಲ್‌ರೌಂಡರ್‌)
  9. ಗುರ್ನೂರ್ ಬ್ರಾರ್ (ವೇಗದ ಬೌಲರ್‌)
  10. ಕುಲ್ದೀಪ್ ಯಾದವ್‌ (ಸ್ಪಿನ್ನರ್‌)
  11. ಮೊಹಮ್ಮದ್ ಸಿರಾಜ್ (ವೇಗದ ಬೌಲರ್‌)