ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL: ʻಸರ್ಫರಾಝ್‌ ಖಾನ್‌ ಪಾತ್ರದ ಬಗ್ಗೆ ಸ್ಪಷ್ಟತೆ ನೀಡಬೇಕುʼ-ಗಂಭೀರ್‌ಗೆ ಅಶ್ವಿನ್‌ ಸಲಹೆ!

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಯುವ ಬ್ಯಾಟ್ಸ್‌ಮನ್‌ ಸರ್ಫರಾಝ್‌ ಖಾನ್‌ಗೆ ಅವರ ಪಾತ್ರದ ಬಗ್ಗೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ನಾಯಕ ಶುಭಮನ್‌ ಗಿಲ್‌ ಸ್ಪಷ್ಟತೆ ನೀಡಬೇಕು ಹಾಗೂ ಇದರ ಕುರಿತ ಅವರ ಬಳಿಕ ಸ್ಟಷ್ಟ ಸಂವಹನ ನಡೆಸಬೇಕೆಂದು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಹೇಳಿದ್ದಾರೆ.

ಸರ್ಫರಾಝ್‌ ಖಾನ್‌ ಜತೆ ಸ್ಪಷ್ಟ ಸಂವಹನ ನಡೆಸಬೇಕೆಂದ ಅಶ್ವಿನ್‌.

ನವದೆಹಲಿ: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ (IND vs SL) ಯುವ ಬ್ಯಾಟ್ಸ್‌ಮನ್‌ ಸರ್ಫರಾಝ್‌ ಖಾನ್‌ಗೆ (Sarfaraz Khan) ಅವರ ಪಾತ್ರದ ಬಗ್ಗೆ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಹಾಗೂ ನಾಯಕ ಶುಭಮನ್‌ ಗಿಲ್‌ (Shubman Gill) ಅವರು ಸ್ಪಷ್ಟ ಸಂವಹನ ನಡೆಸಬೇಕೆಂದು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಸಲಹೆ ನೀಡಿದ್ದಾರೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ, ಆಗಸ್ಟ್‌ 15 ರಂದು ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಪಂದ್ಯದ ಮೂಲಕ ಆರಂಭವಾಗಲಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ್ದ ವೇಳೆ ಸರ್ಫರಾಝ್‌ ಖಾನ್‌ ಅವರನ್ನು ಬಿಸಿಸಿಐ ಆಯ್ಕೆದಾರರು ಆಯ್ಕೆ ಮಾಡಿರಲಿಲ್ಲ. ಸಾಯಿ ಸುದರ್ಶನ್‌ ಅವರು ಗಾಯದಿಂದ ಗುಣಮುಖರಾಗದ ಕಾರಣ ಅವರ ಸ್ಥಾನಕ್ಕೆ ಸರ್ಫರಾಝ್‌ ಖಾನ್‌ ಅವರನ್ನು ಕರೆಸಿಕೊಳ್ಳಲಾಗಿತ್ತು. 2024ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ತವರಿನಲ್ಲಿ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದ ಸರ್ಫರಾಝ್‌, ಇದೀಗ ಒಂದು ವರ್ಷಕ್ಕೂ ಅಧಿಕ ಅವಧಿಯ ಬಳಿಕ ಭಾರತ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ.

IND vs SL: ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟ ಎಂದ ಧನಂಜಯ್‌ ಸಿಲ್ವಾ!

ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಸರ್ಫರಾಝ್‌ ಖಾನ್‌ಗೆ ಅವಕಾಶ ನೀಡುವುದು ಅನುಮಾನ, ಏಕೆಂದರೆ ಧ್ರುವ್‌ ಜುರೆಲ್‌ ಅವರು ವಿಶೇಷ ಬ್ಯಾಟ್ಸ್‌ಮನ್‌ ಆಗಿ ಪ್ಲೇಯಿಂಗ್‌ XIನಲ್ಲಿ ಆಡಬಹುದು. ಏಕೆಂದರೆ ಜುರೆಲ್‌ ದೀರ್ಘಾವಧಿಯಿಂದ ತಂಡದಲ್ಲಿ ಈ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಅಶ್ವಿನ್‌ ಅವರ ಅಭಿಪ್ರಾಯ.

ಸರ್ಫರಾಝ್‌ ಖಾನ್‌ ಭಾರತ ತಂಡಕ್ಕೆ ಮರಳಿದ ಕಾರಣ, ಪ್ಲೇಯಿಂಗ್‌ XI ಆಯ್ಕೆಗೆ ಸಂಬಂಧಿಸಿದಂತೆ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆ ನೋವು ಉಂಟಾಗಿದೆ ಹಾಗೂ ಆಟಗಾರರ ನಡುವೆ ಪೈಪೋಟಿ ಶುರುವಾಗಿದೆ. ಆದರೆ, ದೇವದತ್‌ ಪಡಿಕ್ಕಲ್‌ ಅವರು ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಆಯ್ಕೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಯಾವುದೇ ಅನಿಶ್ಚಿತತೆ ಇಲ್ಲದೆ ಯೋಜನೆಯನ್ನು ರೂಪಿಸುವ ಸಲುವಾಗಿ ಸರ್ಫರಾಝ್‌ ಖಾನ್‌ ಜತೆಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಸ್ಪಷ್ಟ ಸಂವಹನ ನಡೆಸಬೇಕೆಂದು ಅಶ್ವಿನ್‌ ಸಲಹೆ ನೀಡಿದ್ದಾರೆ.

IND vs SL: ಪ್ರಸಿಧ್‌ ಕೃಷ್ಣ-ಆಕಿಬ್‌ ನಬಿ ನಡುವೆ ಎರಡನೇ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!

“ನಾನು ಧ್ರುವ್‌ ಜುರೆಲ್‌ ಅವರ ಮೂಲಕ ಆರಂಭಿಸುತ್ತೇನೆ. ಸಾಯಿ ಸುದರ್ಶನ್ ಗಾಯಗೊಂಡ ಕಾರಣ ಸರ್ಫರಾಜ್ ಖಾನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸರ್ಫರಾಜ್‌ಗೆ ತಂಡದ ಸಂದೇಶ ಬಹಳ ಸ್ಪಷ್ಟವಾಗಿರಬೇಕು. ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಸರ್ಫರಾಜ್ ಸೂಕ್ತ ಆಟಗಾರರಲ್ಲ ಎಂದು ನೀವು ಭಾವಿಸಿದರೆ, ಅವರಿಗೆ ಅದನ್ನು ಸ್ಪಷ್ಟವಾಗಿ ತಿಳಿಸಬೇಕು. ಉಪಖಂಡದ ಪರಿಸ್ಥಿತಿಗಳಲ್ಲಿ ಅವರು ತಂಡಕ್ಕೆ ಉತ್ತಮ ಕೊಡುಗೆ ನೀಡಬಲ್ಲರು ಎಂಬ ವಿಶ್ವಾಸವನ್ನು ಅವರಲ್ಲಿ ಮೂಡಿಸಬೇಕು,” ಎಂದು ಅಶ್ವಿನ್ ಹೇಳಿದ್ದಾರೆ.

ಸರ್ಫರಾಝ್‌ ಖಾನ್ ಭಾರತದ ಪರ ಇದುವರೆಗೆ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 64.73ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಈ ಅಂಕಿ ಅಂಶ ಸಾಕ್ಷಿಯಾಗಿದೆ. ಆದರೆ ರವಿಚಂದ್ರನ್ ಅಶ್ವಿನ್ ಅವರ ಕಳವಳ ಸರ್ಫರಾಜ್ ಅವರ ದಾಖಲೆಗಳ ಬಗ್ಗೆ ಅಲ್ಲ. ಪ್ರಸ್ತುತ ಪರಿಸ್ಥಿತಿಗಳಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ಸರ್ಫರಾಝ್‌ ಅವರಿಂದ ನಿಖರವಾಗಿ ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿದೆಯೇ ಎಂಬುದರ ಬಗ್ಗೆ ಅಶ್ವಿನ್ ಪ್ರಶ್ನೆ ಎತ್ತಿದ್ದಾರೆ.