ನವದೆಹಲಿ: ಮುಂಬರುವ 2026ರ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ (Rising Stars Asia Cup 2026) ಟೂರ್ನಿಯಿಂದ ರಜತ್ ಪಾಟಿದಾರ್ ಹೊರ ನಡೆದಿದ್ದಾರೆ. ಅವರ ಬದಲು ಆಯುಷ್ ಬದೋನಿ ಅವರಿಗೆ ಸ್ಥಾನವನ್ನು ನೀಡಲಾಗಿದ್ದು, ರಿಂಕು ಸಿಂಗ್ ಅವರಿಗೆ ಉಪ ನಾಯಕತ್ವವನ್ನು ನೀಡಲಾಗಿದೆ. ರೈಸಿಂಗ್ ಸ್ಟಾರ್ ಏಷ್ಯಾ ಕಪ್ ಟೂರ್ನಿಯು ನವೆಂಬರ್ 19 ರಿಂದ 21ರ ವರೆಗೆ ನಡೆಯಲಿದೆ. ಈ ಕುರಿತು ನವೆಂಬರ್ 8ರ ಭಾನುವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತ ಮಾಹಿತಿ ನೀಡಿದೆ. 50 ಓವರ್ಗಳ ಮಾದರಿಯಲ್ಲಿ ತಮ್ಮನ್ನು ಆಯ್ಕೆಗೆ ಪರಿಗಣಿಸಬಾರದು ಎಂದು ಪಾಟಿದಾರ್ ಸ್ವತಃ ಮಂಡಳಿಗೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಸಿಸಿಐ, "ರಜತ್ ಪಾಟಿದಾರ್ ತಮ್ಮ ಪ್ರಸ್ತುತ ಗಾಯದ ಸಮಸ್ಯೆಗಳನ್ನು ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ 50 ಓವರ್ಗಳ ಮಾದರಿಯಲ್ಲಿ ತಮ್ಮನ್ನು ಆಯ್ಕೆಗೆ ಪರಿಗಣಿಸಬಾರದು ಎಂದು ಬಿಸಿಸಿಐಗೆ ತಿಳಿಸಿದ್ದಾರೆ," ಎಂದು ಹೇಳಿದೆ.
ಪಾಟೀದಾರ್ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತ ಎ ತಂಡದ 15 ಸದಸ್ಯರ ಬಳಗದಲ್ಲಿ ಬದಲಾವಣೆ ಮಾಡಲಾಗಿದೆ. ಅವರ ಬದಲಿಗೆ ಯುವ ಆಟಗಾರ ಆಯುಷ್ ಬದೋನಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ತಂಡದ ನಾಯಕತ್ವದ ವಿಭಾಗದಲ್ಲೂ ಬದಲಾವಣೆಯಾಗಿದ್ದು, ರಿಂಕು ಸಿಂಗ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ತಿಲಕ್ ವರ್ಮಾ ನಾಯಕನಾಗಿ ಮುಂದುವರಿಯಲಿದ್ದಾರೆ.
ʻಇನ್ನೂ 30 ರಿಂದ 40 ವಿಕೆಟ್ ಪಡೆಯಬಹುದಿತ್ತುʼ: ಮೊಹಮ್ಮದ್ ಶಮಿ ಟೆಸ್ಟ್ ನಿವೃತ್ತಿಗೆ ರವಿಶಾಸ್ತ್ರಿ ಬೇಸರ!
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಾಟಿದಾರ್
ರಜತ್ ಪಾಟೀದಾರ್ ಅವರಿಗೆ ಗಾಯದ ಸಮಸ್ಯೆ ಹೊಸದೇನಲ್ಲ. 2025ರ ಅಕ್ಟೋಬರ್ನಲ್ಲಿ ಎಡ ಮೊಣಕಾಲಿನ ಸಮಸ್ಯೆಯಿಂದಾಗಿ ಅವರ ದೇಶಿ ಕ್ರಿಕೆಟ್ ಪಂದ್ಯಗಳ ಮೇಲೆ ಪರಿಣಾಮ ಬೀರಿತ್ತು. ಅಲ್ಲದೆ, 2025ರ ಐಪಿಎಲ್ ಟೂರ್ನಿಯಲ್ಲೂ ಬೆರಳಿನ ಗಾಯದಿಂದಾಗಿ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆದರೆ ಸದ್ಯ ಅವರನ್ನು ಕಾಡುತ್ತಿರುವ ಗಾಯದ ಸ್ವರೂಪ ಹಾಗೂ ಮತ್ತೆ 50 ಓವರ್ಗಳ ಕ್ರಿಕೆಟ್ಗೆ ಯಾವಾಗ ಮರಳಲಿದ್ದಾರೆ ಎಂಬುದರ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ.
ಅನುಭವಿಗಳಿಂದ ಕೂಡಿದ ಭಾರತ ಎ ತಂಡ
ಈ ಟೂರ್ನಿಯಲ್ಲಿ ಭಾರತ ಎ ತಂಡದ ಪರ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿರುವ ಹಲವು ಆಟಗಾರರು ಕಣಕ್ಕಿಳಿಯಲಿದ್ದಾರೆ. ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವಿಭಾಗದಲ್ಲಿದ್ದರೆ, ಪ್ರಭ್ಸಿಮ್ರನ್ ಸಿಂಗ್ ಹಾಗೂ ಕುಮಾರ್ ಕುಶಾಗ್ರ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್ ಮತ್ತು ಅರ್ಷದ್ ಖಾನ್ ಪ್ರಮುಖ ವೇಗದ ಬೌಲರ್ಗಳಾಗಿದ್ದಾರೆ.
2027ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ 627 ಕೋಟಿ ರು ನಷ್ಟ ಸಾಧ್ಯತೆ! ಇದಕ್ಕೆ ಬಲವಾದ ಕಾರಣ ಇಲ್ಲಿದೆ..
ಭಾರತದ ಪಂದ್ಯಗಳ ವೇಳಾಪಟ್ಟಿ
ಭಾರತ ಎ ತಂಡವನ್ನು ಪಾಕಿಸ್ತಾನ, ನೇಪಾಳ ಹಾಗೂ ಯುಎಇ ತಂಡಗಳೊಂದಿಗೆ ಗ್ರೂಪ್ 'ಬಿ'ನಲ್ಲಿ ಇರಿಸಲಾಗಿದೆ. ನವೆಂಬರ್ 20ರಂದು ನೇಪಾಳ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಬಳಿಕ ನವೆಂಬರ್ 22ರಂದು ಪಾಕಿಸ್ತಾನ ಹಾಗೂ ನವೆಂಬರ್ 24ರಂದು ಯುಎಇ ತಂಡವನ್ನು ಎದುರಿಸಲಿದೆ.
ಭಾರತ ಎ ತಂಡ: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ನಾಯಕ), ರಿಂಕು ಸಿಂಗ್ (ಉಪನಾಯಕ), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸೂರ್ಯಾಂಶ್ ಶೆಡ್ಗೆ, ಶಹಬಾಜ್ ಅಹ್ಮದ್, ವಿಪ್ರಜ್ ನಿಗಮ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಷದ್ ಖಾನ್ ಹಾಗೂ ಆಯುಷ್ ಬದೋನಿ