ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CSK vs RR: ಫೀಲ್ಡಿಂಗ್‌ ವೇಳೆ ಭಾವುಕರಾಗಿ ಕಣ್ಣೀರಿಟ್ಟ ರವೀಂದ್ರ ಜಡೇಜಾ! ವಿಡಿಯೊ

ರಾಜಸ್ಥಾನ್‌ ರಾಯಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ಸಂದರ್ಭದಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜಾ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೊ ಹಾಗೂ ಫೋಟೋಗಳಲ್ಲಿ ಈ ದೃಶ್ಯ ಕಂಡು ಬಂದಿದೆ.

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕಣ್ಣೀರಿಟ್ಟ ರವೀಂದ್ರ ಜಡೇಜಾ.

ಗುವಾಹಟಿ: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದ ವೇಳೆ ರಾಜಸ್ಥಾನ್‌ ರಾಯಲ್ಸ್‌ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಈ ವಿಡಿಯೊ ಹಾಗೂ ಕೆಲ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಂದ ಹಾಗೆ ರವೀಂದ್ರ ಜಡೇಜಾ ಏಕೆ ಭಾವುಕರಾದರು ಹಾಗೂ ಏಕೆ ಕಣ್ಣೀರಿಟ್ಟರು ಎಂಬ ಬಗ್ಗೆ ಸಂಪೂರ್ಣವಾಗಿ ಇಲ್ಲಿ ವಿವರಿಸಲಾಗಿದೆ.

ಭಾರತ ತಂಡದ ಸ್ಪಿನ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು ರಾಜಸ್ಥಾನ್‌ ರಾಯಲ್ಸ್‌ ಪರ ತಮ್ಮ ಐಪಿಎಲ್‌ ವೃತ್ತಿ ಜೀವನವನ್ನು 2008ರಲ್ಲಿ ಆರಂಭಿಸಿದ್ದರು. ನಂತರ ಅವರು 2012ರಲ್ಲಿ ಚನ್ನೈ ಸೂಪರ್‌ ಕಿಂಗ್ಸ್‌ಗೆ ಸೇರ್ಪಡೆಯಾಗಿದ್ದರು. ಅವರು 2016 ಹಾಗೂ 2017ರಲ್ಲಿ ಹೊರತುಪಡಿಸಿ ಇನ್ನುಳಿದ ಎಲ್ಲಾ ಆವೃತ್ತಿಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದ್ದರು. 2023ರಲ್ಲಿ ಕೊನೆಯ ಬಾರಿ ಸಿಎಸ್‌ಕೆ ಐದನೇ ಟ್ರೋಫಿ ಗೆದ್ದಾಗ ರವೀಂದ್ರ ಜಡೇಜಾ ಫೈನಲ್‌ ಪಂದ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಅಂದ ಹಾಗೆ ರವೀಂದ್ರ ಜಡೇಜಾ ತಮ್ಮ ಐಪಿಎಲ್‌ ವೃತ್ತಿ ಜೀವನವನ್ನು ಬಹುತೇಕ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಸವೆಸಿದ್ದಾರೆ. ಆದರೂ 2026ರ ಟೂರ್ನಿಯ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್‌ ತಂಡದ ಟ್ರೇಡ್‌ ಡೀಲ್‌ ಮೂಲಕ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ್‌ ರಾಯಲ್ಸ್‌ ಸೇರಿಸಿಕೊಂಡಿತ್ತು. ಆರ್‌ಆರ್‌ನಿಂದ ಸಂಜು ಸ್ಯಾಮ್ಸನ್‌ ಸಿಎಸ್‌ಕೆಗೆ ತೆರಳಿದರು. ಹಾಗಾಗಿ ಸೋಮವಾರ ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಚೆನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ನಡುವಣ ಪಂದ್ಯ ರವೀಂದ್ರ ಜಡೇಜಾಗೆ ಅತ್ಯಂತ ಭಾವನಾತ್ಮಕವಾಗಿ ಕೂಡಿತ್ತು. ಏಕೆಂದರೆ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಜಡೇಜಾ ಸಿಎಸ್‌ಕೆ ತಂಡದಲ್ಲಿದ್ದರು.

IPL 2026: ʻಇವರಿಂದಲೇ ನಾವು ಸೋಲಬೇಕಾಯಿತುʼ-ಸಿಎಸ್‌ಕೆ ಸೋಲಿಗೆ ಕಾರಣ ಯಾರೆಂದು ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

ಅದರಲ್ಲಿಯೂ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಸಿಎಸ್‌ಕೆ ತಂಡಕ್ಕೆ ರವೀಂದ್ರ ಜಡೇಜಾ ಆರಂಭದಲ್ಲಿಯೇ ಆಘಾತ ನೀಡಿದ್ದರು. ಅವರು ತಾವು ಬೌಲ್‌ ಮಾಡಿದ ಮೊದಲನೇ ಓವರ್‌ನಲ್ಲಿಯೇ ಸರ್ಫರಾಝ್‌ ಖಾನ್‌ ಹಾಗೂ ಶಿವಂ ದುಬೇ ಅವರನ್ನು ಔಟ್‌ ಮಾಡಿದರು. ಆ ಮೂಲಕ ತಮ್ಮ ಮಾಜಿ ತಂಡಕ್ಕೆ ಶಾಕ್‌ ನೀಡಿದ್ದರು. ಅಂದ ಹಾಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೊ ಹಾಗೂ ಫೋಟೋಗಳಲ್ಲಿ ರವೀಂದ್ರ ಜಡೇಜಾ ಅವರು ಭಾವುಕರಾಗಿ ಕಣ್ಣೀರಿಟ್ಟಿರುವುದನ್ನು ಕಾಣಬಹುದು.



ರವೀಂದ್ರ ಜಡೇಜಾರನ್ನು ಕೈ ಬಿಟ್ಟ ನಿರ್ಧಾರ ಕಠಿಣವಾಗಿತ್ತು

ರವೀಂದ್ರ ಜಡೇಜಾ ಅವರ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ನಿರ್ಗಮನವು ಆಟಗಾರನಿಗೂ ಫ್ರಾಂಚೈಸಿಗೂ ಭಾವನಾತ್ಮಕವಾಗಿ ಕಠಿಣ ನಿರ್ಧಾರವಾಗಿತ್ತು ಎಂದು ವರದಿಯಾಗಿದೆ. ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌ ಈ ನಿರ್ಧಾರವನ್ನು “ನಾವು ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ,” ಎಂದು ಈ ಹಿಂದೆ ಹೇಳಿದ್ದರು. ಅನುಭವಿ ಆಲ್‌ರೌಂಡರ್ ಜೊತೆ ನಡೆದ ಹಲವು ಭಾವನಾತ್ಮಕ ಚರ್ಚೆಗಳ ನಂತರವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ʻಸಿಎಸ್‌ಕೆ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲʼ-ಸೋತರೂ ತಮ್ಮ ತಂಡವನ್ನು ಬೆಂಬಲಿಸಿದ ಮೈಕ್‌ ಹಸ್ಸಿ!

ಜಡೇಜಾ ಅವರ ಭಾವನಾತ್ಮಕ ಫೋಟೋಗೆ ಫ್ಯಾನ್ಸ್‌ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ಚಿತ್ರದಲ್ಲಿ ರವೀಂದ್ರ ಜಡೇಜಾ ಮೈದಾನದಲ್ಲಿ ಭಾವನಾತ್ಮಕವಾಗಿ ಕಾಣಿಸಿಕೊಂಡಿರುವಂತೆ ಕಾಣುತ್ತದೆ. ಈ ದೃಶ್ಯವನ್ನು ನೋಡಿ ಕೆಲವು ಅಭಿಮಾನಿಗಳು, ಅವರು ತಮ್ಮ ಹಳೆಯ ತಂಡವಾದ ಸಿಎಸ್‌ಕೆ ವಿರುದ್ಧ ಆಡುತ್ತಿರುವ ಒತ್ತಡದಿಂದಲೇ ಇಂತಹ ಸ್ಥಿತಿಗೆ ಬಂದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ, 2023ರ ಫೈನಲ್‌ನಲ್ಲಿ ತಮ್ಮ ಮಹತ್ವದ ಪ್ರದರ್ಶನದ ಮೂಲಕ ತಂಡಕ್ಕೆ ಕೀರ್ತಿ ತಂದುಕೊಟ್ಟ ಕ್ಷಣಗಳನ್ನು ನೆನೆದು ಅವರು ಭಾವನಾತ್ಮಕಗೊಂಡಿರಬಹುದು ಎಂಬ ಮಾತುಗಳು ಕೇಳಿಬಂದಿವೆ.

IPL 2026: ʻಇವರಿಂದಲೇ ನಾವು ಸೋಲಬೇಕಾಯಿತುʼ-ಸಿಎಸ್‌ಕೆ ಸೋಲಿಗೆ ಕಾರಣ ಯಾರೆಂದು ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

ಆದರೆ, “ಅವರು ಅಳುತ್ತಿದ್ದಾರೆ” ಎಂಬ ರೀತಿಯ ಕಥನ ಹೆಚ್ಚು ವೈರಲ್ ಆದರೂ, ಅದು ಅಭಿಮಾನಿಗಳ ತಪ್ಪು ಅರ್ಥೈಸುವಿಕೆಯೂ ಆಗಿರಬಹುದು. ಕೆಲವರು, ತಮ್ಮ ಹಳೆಯ ತಂಡ ಸಂಕಷ್ಟದಲ್ಲಿರುವುದನ್ನು ನೋಡಿ ಜಡೇಜಾ ಭಾವನಾತ್ಮಕಗೊಂಡಿರಬಹುದು ಎಂದು ಮಾತ್ರ ಅರ್ಥೈಸಿದ್ದಾರೆ.