ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) 2025ರ ಸಾಲಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮರಳಿದ್ದು, ನನ್ನ ವೃತ್ತಿ ಜೀವನ್ಕೆ ಸಿಕ್ಕ ಟರ್ನಿಂಗ್ ಪಾಯಿಂಟ್ ಎಂದು ಹೇಳಿದ ಆರ್‌ಸಿಬಿ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (Devdutt Padikkal), ತಮ್ಮ ಆಟದ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಲಭಿಸಿದೆ ಎಂದು ತಿಳಿಸಿದ್ದಾರೆ. ಅದರಂತೆ ಆರ್‌ಸಿಬಿ ಪರ ಪಡಿಕ್ಕಲ್, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ, ಅವರು ಕಳೆದ ಸೀಸನ್‌ನಲ್ಲಿ ಆಡಿದ್ದ 10 ಪಂದ್ಯಗಳಿಂದ 150.61ರ ಸ್ಟ್ರೈಕ್ ರೇಟ್‌ನಲ್ಲಿ 247 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಗೆಲುವಿಗೆ ನೆರವು ನೀಡಿದ್ದರು.
ಆರ್‌ಸಿಬಿ ಶೇರ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ದೇವದತ್ ಪಡಿಕ್ಕಲ್, "ಐಪಿಎಲ್ ಆಕ್ಷನ್ ನನ್ನ ಕ್ರಿಕೆಟ್ ವೃತ್ತಿ ಜೀವನದ ಪಾಲಿಗೆ ಹಲವು ಹಾದಿಯಲ್ಲಿ ಟರ್ನಿಂಗ್ ಪಾಯಿಂಟ್ ಎಂದು ನಾನು ಭಾವಿಸುತ್ತೇನೆ. ನನ್ನ ವೃತ್ತಿಜೀವನದ ಒಂದು ಹಂತದಲ್ಲಿ ನಾನು ಯಾವ ರೀತಿಯ ಕ್ರಿಕೆಟ್ ಆಡಬೇಕು, ನಾನು ಯಾವ ರೀತಿಯ ಕ್ರಿಕೆಟಿಗನಾಗಬೇಕು ಎಂಬುದಕ್ಕೆ ಸಂಪೂರ್ಣವಾಗಿ ಬದ್ಧರಾಗಬೇಕಾದ ಅವಶ್ಯಕತೆ ಇತ್ತು. ಆರ್‌ಸಿಬಿಗೆ ಮರುಪ್ರವೇಶ ಮಾಡುವುದು ನಾನು ಆಡಲು ಬಯಸಿದ ಕ್ರಿಕೆಟ್ ಶೈಲಿಯತ್ತ ನನ್ನ ದಾರಿಯನ್ನು ನಿರ್ಮಿಸಿತು,” ಎಂದು ತಿಳಿಸಿದ್ದಾರೆ.
IPL 2026: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ತುಂಬಾ ಬದಲಾಗಿದೆ ಎಂದ ದೇವದತ್ ಪಡಿಕ್ಕಲ್!
ಎಡಗೈ ಬ್ಯಾಟ್ಸ್‌ಮನ್ ತನ್ನ ಮಾತು ಮುಂದುವರಿಸಿ, ಆ ಅವಕಾಶವು ಫಲಿತಾಂಶಗಳನ್ನು ಪರಿಗಣಿಸದೆ ಸ್ವಯಂ ಸುಧಾರಣೆಯತ್ತ ಗಮನಹರಿಸಲು ಹೇಗೆ ಪ್ರೇರೇಪಿಸಿತು ಮತ್ತು ಆಟದತ್ತ ತಮ್ಮ ಗಮನವನ್ನು ಹೇಗೆ ಬದಲಾಯಿಸಿತು ಎಂಬುದನ್ನು ವಿವರಿಸಿದರು.
“ನನಗೆ ಆರ್‌ಸಿಬಿಗೆ ಜೊತೆ ಆ ಅವಕಾಶ ಸಿಕ್ಕಾಗ, ನಾನು ಮಾಡಬೇಕಾದ ಅನೇಕ ಸಂಗತಿಗಳಿವೆ ಎಂದು ಅಂದುಕೊಂಡೆ. ಫಲಿತಾಂಶ ಏನೇ ಆಗಲಿ, ಅದರ ಬಗ್ಗೆ ಚಿಂತಿಸದೆ ಆ ವಿಷಯಗಳ ಮೇಲೆ ಸಂಪೂರ್ಣವಾಗಿ ಕೆಲಸ ಮಾಡಲು ನಾನು ಬದ್ಧನಾಗಬೇಕೆಂದು ನಾನು ಅದೇ ದಿನ ನಿರ್ಧರಿಸಿದೆ," ಎಂದು ಅವರು ಸೇರಿಸಿದರು.
ದೇವದತ್ ಪಡಿಕ್ಕಲ್ ಅವರು 2020ರ ತಮ್ಮ ಐಪಿಎಲ್ ಪದಾರ್ಪಣೆ ಸೀಸನ್‌ನಲ್ಲಿ ತಕ್ಷಣವೇ ಪ್ರಭಾವ ಬೀರಿದ್ದರು ಹಾಗೂ 473 ರನ್ ಗಳಿಸಿ ಆರ್‌ಸಿಬಿ ಪರ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿ ಗೆದ್ದಿದ್ದರು. ಆದರೆ, ನಂತರ ರಾಜಸ್ಥಾನ್ ರಾಯಲ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ಜೊತೆಗಿನ ಅವಧಿಗಳಲ್ಲಿ ಅವರು ಯೋಜನೆಗಳು ಯಶಸ್ವಿಯಾಗಲಿಲ್ಲ.
IPL 2026: ಅಧಿಕ ಪ್ರಸಂಗ ತೋರಿದ ಆವೇಶ್ ಖಾನ್‌ಗೆ ಬುದ್ದಿ ಕಲಿಸುತ್ತಾ ಬಿಸಿಸಿಐ? ಇಲ್ಲಿದೆ ವಿಡಿಯೊ
“ನಾನು ಆ ಒಂದು ವರ್ಷಕ್ಕಾಗಿ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಹೋಗಿದ್ದೆ, ಆದರೆ ಅದು ಕೂಡ ಉತ್ತಮವಾಗಿ ಹೋಗಲಿಲ್ಲ. ಅದು ತುಂಬಾ ಕಷ್ಟಕರವಾಗಿತ್ತು. ಎಲ್ಲವನ್ನೂ ಹಣಕ್ಕೆ ನಿಗಧಿಪಡಿಸಿರುವಂತೆ ಅನಿಸುತ್ತಿತ್ತು. ಫ್ರಾಂಚೈಸಿ ನಿಮ್ಮಲ್ಲಿ ನಂಬಿಕೆ ಇಟ್ಟು ಇಷ್ಟು ಹಣ ನೀಡುತ್ತಿದ್ದಾಗ, ನೀವು ಉತ್ತಮವಾಗಿ ಆಡದೆ ಇದ್ದರೆ ಅವರನ್ನು ನಿರಾಸೆಗೊಳಿಸುತ್ತಿದ್ದೀರಿ ಎಂದು ತೋರುತ್ತಿತ್ತು. ಆ ಸಮಯದಲ್ಲಿ, ಸತ್ಯ ಹೇಳುವುದಾದರೆ, ನನಗೆ ಯಾವುದೇ ಉತ್ತರವೂ ಇರಲಿಲ್ಲ,” ಎಂದು ದೇವದತ್ ಪಡಿಕ್ಕಲ್ ತಮ್ಮ ಮಾತನ್ನು ಮುಗಿಸಿದರು.