ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೇಗಿ ಯಶ್ ದಯಾಳ್ (Yash Dayal) ಪ್ರಸ್ತುತ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನ ಮತ್ತು ಕಾನೂನು ತೊಡಕುಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳು ಫೆಬ್ರವರಿ 4 ರಂದು, ಯಶ್ ದಯಾಳ್ ನೋಯ್ಡಾದಲ್ಲಿ ವ್ಲಾಗರ್ ಹಾಗೂ ಇನ್‌ಫ್ಲೂಯೆನ್ಸರ್ ಶ್ವೇತಾ ಪುಂಡಿರ್ (Shwetha Pundir) ಅವರನ್ನು ವಿವಾಹವಾಗಿದ್ದರು. ಈ ವಿವಾಹ ಕಾರ್ಯಕ್ರಮದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಹಾಗೂ ಎಲ್ಲಿಯೂ ಬಹಿರಂಗವಾಗಿರಲಿಲ್ಲ. ಕ್ರಿಕೆಟ್ ಜಗತ್ತಿನ ಒಬ್ಬ ಪ್ರಮುಖ ವ್ಯಕ್ತಿಯೂ ಅಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಸಣ್ಣ ಸಮಾರಂಭವನ್ನು ಕುಟುಂಬ ಮತ್ತು ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ಮಾತ್ರ ನಡೆಸಲಾಗಿತ್ತು. ಯಶ್ ದಯಾಳ್ ಸ್ವತಃ ಈ ವಿಷಯದ ಬಗ್ಗೆ ಮೌನ ವಹಿಸಿದ್ದರೂ, ಅವರ ಪತ್ನಿ ಶ್ವೇತಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ಈ ಸಸ್ಪೆನ್ಸ್‌ಗೆ ತೆರೆ ಎಳೆದಿದ್ದಾರೆ.
ಪ್ರಸ್ತುತ ಯಶ್ ದಯಾಳ್ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಒಂದೆಡೆ, ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರೆ, ಮತ್ತೊಂದೆಡೆ, ಅವರು ಲೈಂಗಿಕ ಶೋಷಣೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮದುವೆಯ ಸುಳ್ಳು ನೆಪದಲ್ಲಿ ಅವರು ತನ್ನನ್ನು ಶೋಷಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿದ್ದರು - ಈ ಪರಿಸ್ಥಿತಿಯು ಅವರನ್ನು ಬಂಧನದ ಬೆದರಿಕೆಯನ್ನು ಎದುರಿಸುವಂತೆ ಮಾಡಿತ್ತು. ಆದಾಗ್ಯೂ, 2026ರ ಜನವರಿಯಲ್ಲಿ ರಾಜಸ್ಥಾನ ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ನೀಡುವ ಮೂಲಕ ಸ್ವಲ್ಪ ಪರಿಹಾರ ನೀಡಿತು; ಇಲ್ಲದಿದ್ದರೆ, ಈ ವಿಷಯವು ಅವರನ್ನು ಜೈಲಿಗೆ ಹಾಕುವ ಸಾಧ್ಯತೆ ಇತ್ತು.
ʻಶ್ರೇಯಸ್ ಅಯ್ಯರ್‌ರನ್ನು ರಿಲೀಸ್ ಮಾಡಬಾರದಿತ್ತುʼ-ಕೋಲ್ಕತಾ ಫ್ರಾಂಚೈಸಿಯನ್ನು ಟೀಕಿಸಿದ ಅನಿಲ್ ಕುಂಬ್ಳೆ!
ಶ್ವೇತಾ ಪುಂಡಿರ್ ಯಾರು?
ಶ್ವೇತಾ ಪುಂಡಿರ್ ಸೋಶಿಯಲ್ ಮೀಡಿಯಾದಲ್ಲಿ ಇನ್‌ಫ್ಲೂಯೆನ್ಸರ್ ಮತ್ತು ದೆಹಲಿಯ ವ್ಲಾಗರ್ ಆಗಿದ್ದು, ಅವರು ಇನ್‌ಸ್ಟಾಗ್ರಾಮ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಇಂಟರ್‌ಕಾಂಟಿನೆಂಟಲ್ ಲೆಜೆಂಡ್ಸ್ ಲೀಗ್‌ನ ಪ್ರಸಾರಕರಾಗಿಯೂ ಕೆಲಸ ಮಾಡಿದ್ದಾರೆ, ಅಲ್ಲಿ ಅವರು ಗಮನಾರ್ಹ ಫಾಲೋವರ್ಸ್ ಅನ್ನು ಗಳಿಸಿದ್ದರು.
2026ರ ಐಪಿಎಲ್‌ಗೆ ಯಶ್ ದಯಾಳ್ ಸಜ್ಜು
28ರ ವಯಸ್ಸಿನ ಯಶ್ ದಯಾಳ್ 2026 ರ ಐಪಿಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕೆ ಇಳಿಯಲಿದ್ದಾರೆ. ಕಳೆದ ವರ್ಷ ಆರ್‌ಸಿಬಿಯ ಚೊಚ್ಚಲ ಪ್ರಶಸ್ತಿ ಗೆಲುವಿನಲ್ಲಿ ಇವರು ಕೂಡ ಪ್ರಮುಖ ಪಾತ್ರವನ್ನು ವಹಿಸಿದ್ದರು. ರಿಂಕು ಸಿಂಗ್ ಬಾರಿಸಿದ ಐದು ಸಿಕ್ಸರ್‌ಗಳನ್ನು ಕಹಿ ಘಟನೆಯನ್ನು ಮರೆತು ಆರ್‌ಸಿಬಿ ಪರ ಬಲವಾಗಿ ಕಮ್‌ಬ್ಯಾಕ್ ಮಾಡಿದ್ದರು.
IPL 2026: ರೋಹಿತ್ ಶರ್ಮಾ ಅಲ್ಲ! ಬೆಸ್ಟ್ ಟಿ20 ಓಪನರ್ ಆರಿಸಿದ ವಿರಾಟ್ ಕೊಹ್ಲಿ!
ಯಶ್ ವಿರುದ್ಧ ಪ್ರಕರಣ ದಾಖಲು
ಅಪ್ರಾಪ್ತ ಕ್ರಿಕೆಟಿಗನೊಬ್ಬನ ಮೇಲೆ ನಡೆದಿರುವ ಅನೈತಿಕ ವರ್ತನೆಯ ಆರೋಪದ ಮೇಲೆ ಯಶ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಜೈಪುರದ ಯುವತಿಯೊಬ್ಬಳು 2023 ರಲ್ಲಿ ತಾನು 17 ವರ್ಷದವಳಿದ್ದಾಗ, ದಯಾಳ್ ತನ್ನ ವೃತ್ತಿಜೀವನಕ್ಕೆ ನೆರವು ನೀಡುವ ನೆಪದಲ್ಲಿ ತನ್ನನ್ನು ಬಳಿಸಿಕೊಂಡಿದ್ದರು ಎಂದು ಹೇಳಿಕೊಂಡಿದ್ದಳು. ಈ ವಿಷಯದ ಬಗ್ಗೆ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದಾಗ್ಯೂ, ಯಶ್ ಅವರ ವಕೀಲರು ಇದೆಲ್ಲವೂ ಅವರನ್ನು ಸುಳ್ಳು ಹೇಳಲು ಮಾಡಿದ ಪಿತೂರಿ ಎಂದು ಪ್ರತಿಪಾದಿಸುತ್ತಾರೆ, ಆಪಾದಿತ ಘಟನೆಯ ಎರಡು ವರ್ಷಗಳ ನಂತರ ಎಫ್‌ಐಆರ್ ಏಕೆ ದಾಖಲಾಗಿದೆ ಎಂದು ಪ್ರಶ್ನಿಸುತ್ತಾರೆ. ಪ್ರಸ್ತುತ, ನ್ಯಾಯಾಲಯವು ಈ ಪ್ರಕರಣದಲ್ಲಿಯೂ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.