ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB Full IPL Schedule 2026: ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ!

RCB IPL 2026 Schedule: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎರಡನೇ ಹಂತದ ವೇಳಾಪಟ್ಟಿಯನ್ನು ಮಾರ್ಚ್‌ 26 ರಂದು ಪ್ರಕಟಿಸಿದೆ. ಐದು ರಾಜ್ಯಗಳ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ ಬಳಿಕ ಬಿಸಿಸಿಐ ಇದೀಗ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ.

ಬೆಂಗಳೂರು: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (BCCI) 2026ರ ಮಾರ್ಚ್ 26 ರಂದು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮೊದಲನೇ ಹಂತದ ವೇಳಾಪಟ್ಟಿಯನ್ನು ಕಳೆದ ತಿಂಗಳೇ ಪ್ರಕಟಿಸಲಾಗಿತ್ತು. ಆದರೆ, ಐದು ರಾಜ್ಯಗಳ ಚುನಾವಣೆಯ ದಿನಾಂಕಗಳು ಪ್ರಕಟವಾದ ಬಳಿಕ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಘೋಷಣೆ ಮಾಡಲು ಬಯಸಿತ್ತು. ಅಂದ ಹಾಗೆ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ (RCB vs SRH) ತಂಡಗಳು ಕಾದಾಟ ನಡೆಸಲಿವೆ.

ಆರ್‌ಸಿಬಿ ತಂಡ ಈ ಬಾರಿ ತವರು ಅಂಗಣದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ತವರು ಪಂದ್ಯಗಳನ್ನು ಆರ್‌ಸಿಬಿ ಆಡಿದರೆ, ಇನ್ನುಳಿದ ಎರಡು ತವರು ಪಂದ್ಯಗಳನ್ನು ರಾಯ್ಪುರದ ಶಾಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಆಡಲಿದೆ. ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ತಂಡ, ತನ್ನ ಕೊನೆಯ ಲೀಗ್‌ ಪಂದ್ಯವನ್ನು ಮೇ 22 ಎಂದು ಹೈದರಾಬಾದ್‌ನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾರ್‌ ಎದುರು ಕಾದಾಟ ನಡೆಸಲಿದೆ.

IPL 2026 Full Schedule: 19ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದ ಬಿಸಿಸಿಐ!

ಕಳೆದ 2025ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಚೊಚ್ಚಲ ಚಾಂಪಿಯನ್‌ ಆಗಿತ್ತು. ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ 17 ವರ್ಷಗಳ ಕನಸನ್ನು ನನಸು ಮಾಡಿಕೊಂಡಿತ್ತು. ಈ ಬಾರಿ ಟೂರ್ನಿಗೂ ಆರ್‌ಸಿಬಿ ಬಲಿಷ್ಠ ಆಟಗಾರರನ್ನು ಒಳಗೊಂಡಿದೆ ಹಾಗೂ ಸತತ ಎರಡನೇ ಬಾರಿಯೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.

ವಿರಾಟ್‌ ಕೊಹ್ಲಿ ಕಳೆದ ಸೀಸನ್‌ನಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಅತ್ಯಧಿಕ ರನ್‌ಗಳಿಸಿದ ಆಟಗಾರರಾಗಿದ್ದರು. ಅವರು 15 ಪಂದ್ಯಗಳಲ್ಲಿ 657 ರನ್‌ಗಳನ್ನು 54.75ರ ಸರಾಸರಿ ಮತ್ತು 144.71 ಸ್ಟ್ರೈಕ್ ರೇಟ್‌ನೊಂದಿಗೆ ಸಿಡಿಸಿದ್ದರು. ಇನ್ನೊಂದೆಡೆ, ಅತ್ಯಧಿಕ ವಿಕೆಟ್ ಪಡೆದ ಬೌಲರ್‌ ಜಾಶ್‌ ಹೇಝಲ್‌ವುಡ್‌/ ಅವರು 8.77ರ ಇಕಾನಮಿ ರೇಟ್‌ನಲ್ಲಿ 22 ವಿಕೆಟ್‌ಗಳನ್ನು ಪಡೆದು ಆರ್‌ಸಿಬಿ ಪ್ರಶಸ್ತಿ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.



2026ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ

ಮಾರ್ಚ್ 28: vs ಸನ್‌ರೈಸರ್ಸ್ ಹೈದರಾಬಾದ್ (ತವರು) – ಸಂಜೆ 7:30 | ಬೆಂಗಳೂರು

ಏಪ್ರಿಲ್ 05: vs ಚೆನ್ನೈ ಸೂಪರ್ ಕಿಂಗ್ಸ್ (ತವರು) – ಸಂಜೆ 7:30 | ಬೆಂಗಳೂರು

ಏಪ್ರಿಲ್ 10: vs ರಾಜಸ್ಥಾನ್ ರಾಯಲ್ಸ್ (ಹೊರಗೆ) – ಸಂಜೆ 7:30 | ಗುವಾಹಟಿ

ಏಪ್ರಿಲ್ 12: vs ಮುಂಬೈ ಇಂಡಿಯನ್ಸ್ (ಹೊರಗೆ) – ಸಂಜೆ 7:30 | ಮುಂಬೈ

ಏಪ್ರಿಲ್ 15: vs ಲಖನೌ ಸೂಪರ್ ಜಯಂಟ್ಸ್ (ತವರು) – ಸಂಜೆ 7:30 | ಬೆಂಗಳೂರು

ಏಪ್ರಿಲ್ 18: vs ದೆಹಲಿ ಕ್ಯಾಪಿಟಲ್ಸ್ (ತವರು) – ಸಂಜೆ 3:30 | ಬೆಂಗಳೂರು

ಏಪ್ರಿಲ್ 24: vs ಗುಜರಾತ್ ಟೈಟನ್ಸ್ (ತವರು) – ಸಂಜೆ 7:30 | ಬೆಂಗಳೂರು

ಏಪ್ರಿಲ್ 27: vs ದೆಹಲಿ ಕ್ಯಾಪಿಟಲ್ಸ್ (ಹೊರಗೆ) – ಸಂಜೆ 7:30 | ದೆಹಲಿ

ಏಪ್ರಿಲ್ 30: vs ಗುಜರಾತ್ ಟೈಟನ್ಸ್ (ಹೊರಗೆ) – ಸಂಜೆ 7:30 | ಅಹಮದಾಬಾದ್

ಮೇ 07: vs ಲಖನೌ ಸೂಪರ್ ಜಯಂಟ್ಸ್‌ (ಹೊರಗೆ) – ಸಂಜೆ 7:30 | ಲಖನೌ

ಮೇ 10: vs ಮುಂಬೈ ಇಂಡಿಯನ್ಸ್ ವಿರುದ್ಧ (ತವರು) – ಸಂಜೆ 7:30 | ರಾಯ್ಪುರ

ಮೇ 13: vs ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ (ತವರು) – ಸಂಜೆ 7:30 | ರಾಯ್ಪುರ

ಮೇ 17: vs ಪಂಜಾಬ್ ಕಿಂಗ್ಸ್ ವಿರುದ್ಧ (ಹೊರಗೆ) – ಸಂಜೆ 3:30 | ಧರ್ಮಶಾಲಾ

ಮೇ 22: vs ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ (ಹೊರಗೆ) – ಸಂಜೆ 7:30 | ಹೈದರಾಬಾದ್