ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿಯಲ್ಲಿ ವಿರಾಟ್‌ ಕೊಹ್ಲಿಯ ಮಹತ್ವವನ್ನು ತಿಳಿಸಿದ ಮೊ ಬೊಬಾಟ್‌!

ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ವಿರಾಟ್‌ ಕೊಹ್ಲಿ ರನ್‌ ಹೊಳೆ ಹರಿಸುತ್ತಿದ್ದಾರೆ. ರನ್‌ಗಳ ಹೊರತಾಗಿಯೂ ಆರ್‌ಸಿಬಿ ತಂಡದಲ್ಲಿ ವಿರಾಟ್‌ ಕೊಹ್ಲಿಯ ಉಪಸ್ಥಿತಿ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ ಎಂದು ಆರ್‌ಸಿಬಿ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೊಬಾಟ್‌ ತಿಳಿಸಿದ್ದಾರೆ.

ಆರ್‌ಸಿಬಿ ತಂಡದಲ್ಲಿ ವಿರಾಟ್‌ ಕೊಹ್ಲಿ ಮಹತ್ವವನ್ನು ತಿಳಿಸಿದ ಮೊ ಬೊಬಾಟ್‌.

ನವದೆಹಲಿ: ವಿರಾಟ್‌ ಕೊಹ್ಲಿ (Virat Kohli) ಪ್ರಭಾವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದಲ್ಲಿ ಅವರು ಪ್ರತೀ ಸೀಸನ್‌ನಲ್ಲಿ ಗಳಿಸುವ ರನ್‌ಗಳಿಂದ ಮಾತ್ರವಲ್ಲ, ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರ ಉಪಸ್ಥಿತಿ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ ಎಂದು ಆರ್‌ಸಿಬಿ ಕ್ರಿಕೆಟ್‌ ನಿರ್ದೇಶಕ ಮೊ ಬೊಬಾಟ್‌ ಹೇಳಿದ್ದಾರೆ. ಆರ್‌ಸಿಬಿ ಮಾಜಿ ನಾಯಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಇಲ್ಲಿಯವರೆಗೂ ಆಡಿದ 13 ಪಂದ್ಯಗಳಿಂದ 54.20ರ ಸರಾಸರಿ ಹಾಗೂ 164.74ರ ಸ್ಟ್ರೈಕ್‌ ರೇಟ್‌ನಲ್ಲಿ 542 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಆರ್‌ಸಿಬಿ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಲು ನೆರವು ನೀಡಿದ್ದಾರೆ.

ಸ್ಪೋರ್ಟ್ಸ್‌ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೊ ಬೊಬಾಟ್‌, ವಿರಾಟ್‌ ಕೊಹ್ಲಿ ಅವರ ಮೌಲ್ಯವನ್ನು ಕೇವಲ ಅಂಕಿಅಂಶಗಳ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ವಿವರಿಸಿದರು. ಆರ್‌ಸಿಬಿ ತಂಡಕ್ಕೆ ಕೊಹ್ಲಿ ನೀಡುವ ಪ್ರಭಾವವು ಕೇವಲ ರನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ, ಅವರ ನಾಯಕತ್ವ, ತೀವ್ರ ಸ್ಪರ್ಧಾತ್ಮಕ ಮನೋಭಾವ, ತರಬೇತಿಯಲ್ಲಿನ ಶಿಸ್ತು ಹಾಗೂ ಯುವ ಆಟಗಾರರಿಗೆ ನೀಡುವ ಪ್ರೇರಣೆ ಸೇರಿದಂತೆ ಎಲ್ಲವೂ ತಂಡದ ಸಂಸ್ಕೃತಿಯನ್ನು ರೂಪಿಸುತ್ತವೆ ಎಂದು ಹೇಳಿದ್ದಾರೆ.

ಭಾರತ ಟಿ20 ತಂಡದ ನಾಯಕತ್ವಕ್ಕೆ ಶ್ರೇಯಸ್‌ ಅಯರ್‌ ಪ್ರಮುಖ ಸ್ಪರ್ಧಿ ಎಂದ ರಿಕಿ ಪಾಂಟಿಂಗ್‌!

"ಮೊದಲನೇಯದಾಗಿ ವಿರಾಟ್‌ ಕೊಹ್ಲಿ ಪ್ರದರ್ಶನಗಳನ್ನು ನಾವು ಸಹಜವಾಗಿ ತೆಗೆದುಕೊಳ್ಳಬಾರದು. ಈ ಸೀಸನ್‌ನಲ್ಲಿಯೂ ಅವರು 500ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಒಂದು ವೇಳೆ ವಿರಾಟ್‌ ಕೊಹ್ಲಿ ಇಲ್ಲದೇ ಇದ್ದರೂ ಪ್ರತಿಯೊಂದು ವರ್ಷವೂ ಬೇರೆ-ಬೇರೆ ಆಟಗಾರರಿಂದ 500 ರಿಂದ 700 ರನ್‌ಗಳು ಮೂಡಿ ಬರುತ್ತವೆ. ಆದರೆ, ರನ್‌ಗಳ ಹೊರತಾಗಿ ಅವರು ಹಲವು ಸಂಗತಿಗಳನ್ನು ತಂಡಕ್ಕೆ ನೀಡಲಿದ್ದಾರೆ," ಎಂದು ಮೊ ಬೊಬಾಟ್‌ ತಿಳಿಸಿದ್ದಾರೆ.

“ನಾನು ಅತ್ಯಂತ ಮೆಚ್ಚುವ ವಿಷಯ ಎಂದರೆ ಅವರ ತೀವ್ರತೆ. ನಾನು ಕೂಡ ತೀವ್ರ ಮನೋಭಾವದ ವ್ಯಕ್ತಿ ಎಂದು ಭಾವಿಸುತ್ತೇನೆ, ಆದರೆ ವಿರಾಟ್‌ ಕೊಹ್ಲಿ ಅವರ ಮಟ್ಟ ಸಂಪೂರ್ಣವಾಗಿ ವಿಭಿನ್ನವಾಗಿದೆ,” ಎಂದು ಅವರು ಒಪ್ಪಿಕೊಂಡಿದ್ದಾರೆ.

ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ವಿದಾಯ ಹೇಳಲು ಕಾರಣ ತಿಳಿಸಿದ ವಿರಾಟ್‌ ಕೊಹ್ಲಿ!

ವಿರಾಟ್‌ ಕೊಹ್ಲಿ ಅವರ ಉನ್ನತ ಮಟ್ಟದ ಮಾನದಂಡಗಳು, ತಮ್ಮದೇ ಚಿಂತನೆ ಮತ್ತು ಮುಖ್ಯ ಕೋಚ್ ಆಂಡಿ ಫ್ಲವರ್‌ ಅವರ ದೃಷ್ಟಿಕೋಣಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ ಎಂದು ಹೇಳಿದ್ದಾರೆ. 2025ರಲ್ಲಿ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ತಂಡದ ಸಂಸ್ಕೃತಿಗೆ ಕೊಹ್ಲಿ ದೊಡ್ಡ ಆಧಾರಸ್ತಂಭರಾಗಿದ್ದಾರೆ ಎಂದು ಬೊಬಾಟ್ ವಿವರಿಸಿದ್ದಾರೆ.

“ಅವರ ಮಾನದಂಡಗಳು ಅತ್ಯಂತ ಉನ್ನತ ಮಟ್ಟದಲ್ಲಿವೆ. ಅದು ನನ್ನ ಹಾಗೂ ಆಂಡಿ ಅವರ ಆಲೋಚನೆಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ನಾವು ಹೇಗೆ ಅಭ್ಯಾಸ ಮಾಡುತ್ತೇವೆ, ಹೇಗೆ ಸಿದ್ಧತೆ ನಡೆಸುತ್ತೇವೆ, ಹೇಗೆ ಆಟ ಆಡುತ್ತೇವೆ ಅಥವಾ ತಂಡವಾಗಿ ಸಾಮಾಜಿಕವಾಗಿ ಹೇಗೆ ನಡೆದುಕೊಳ್ಳುತ್ತೇವೆ—ಎಲ್ಲದರಲ್ಲೂ ಮಾನದಂಡಗಳು ತುಂಬಾ ಉನ್ನತವಾಗಿವೆ,” ಎಂದು ಬೊಬಾಟ್ ಹೇಳಿದರು.