ನವದೆಹಲಿ: ಜಿಂಬಾಬ್ವೆ ವಿರುದ್ಧ 2026ರ ಅಂಡರ್-19 ವಿಶ್ವಕಪ್ ಟೂರ್ನಿಯ (U-19 World Cup 2026) ಪಂದ್ಯದಲ್ಲಿ ಭಾರತ ಕಿರಿಯರ ತಂಡದ ವಿಹಾನ್ ಮೆಲ್ಹೋತ್ರಾ (Vihan Malhotra) ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಇದು ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಶತಕವಾಗಿದೆ. ಇವರ ಶತಕದ ಬಲದಿಂದ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 352 ರನ್‌ಗಳನ್ನು ಕಲೆ ಹಾಕಿತು. ಈ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ ವಿಹಾನ್, 107 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ ಅಜೇಯ 109 ರನ್ ಗಳಿಸಿದರು. ಅಂದ ಹಾಗೆ ವಿಹಾನ್ ಮಲ್ಹೋತ್ರಾ ಅವರ ಶತಕದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸಂತಸ ಉಂಟಾಗಿದೆ.
ಬಳಿಕ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡ, 37.4 ಓವರ್‌ಗಳಿಗೆ 148 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ 204 ರನ್‌ಗಳಿಂದ ಸೋಲು ಅನುಭವಿಸಿತು. ಭಾರತದ ಪರ ಉದವ್ ಮೋಹನ್ ಹಾಗೂ ನಾಯಕ ಆಯುಷ್ ಮ್ಹಾತ್ರೆ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಭಾರತದ ಪರ ಶತಕ ಬಾರಿಸಿದ ಆರ್‌ಸಿಬಿ ಯುವ ಬ್ಯಾಟ್ಸ್‌ಮನ್ ವಿಹಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IND vs NZ: ಟಿ20ಐ ಸರಣಿಯ ಕೊನೆಯ 2 ಪಂದ್ಯಗಳ ನ್ಯೂಜಿಲೆಂಡ್ ತಂಡಕ್ಕೆ ಇಬ್ಬರು ಸ್ಟಾರ್ ಆಟಗಾರರ ಎಂಟ್ರಿ!
ವಿಹಾನ್ ಮಲ್ಹೋತ್ರಾ ಯಾರು?
ವಿಹಾನ್ ಮಲ್ಹೋತ್ರಾ 19 ವರ್ಷದ ಎಡಗೈ ಬ್ಯಾಟ್ಸ್‌ಮನ್. ಅವರು ಭಾರತೀಯ ಅಂಡರ್-19 ತಂಡದ ಉಪನಾಯಕರೂ ಆಗಿದ್ದಾರೆ. ವಿಹಾನ್ ಪಂಜಾಬ್‌ನ ಪಾಟಿಯಾಲದಲ್ಲಿ ಜನಿಸಿದರು. ಅವರು ಅಂಡರ್-19 ತಂಡದೊಂದಿಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸ ಮಾಡಿದ್ದಾರೆ. ಅವರು ಯುಎಇಯಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಟೂರ್ನಿಯಲ್ಲಿ ಆಡಿದ್ದರು.
ವಿಹಾನ್ ಮಲ್ಹೋತ್ರಾ ಭಾರತ ಪರ ವಿವಿಧ ಕ್ರಮಾಂಕಗಳಲ್ಲಿ ಬ್ಯಾಟ್ ಮಾಡಿದ್ದಾರೆ. ಅವರು ಆರಂಭಿಕ ಆಟಗಾರನಾಗಿ ಪ್ರಾರಂಭಿಸಿದರು, ಆದರೆ ನಂತರ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಅವರಿಗೆ ಅವಕಾಶ ನೀಡಲು ಮಧ್ಯಮ ಕ್ರಮಾಂಕಕ್ಕೆ ಇಳಿದರು. ಅಫ್ಘಾನಿಸ್ತಾನ ಮತ್ತು ಭಾರತ ಅಂಡರ್ -19 ಬಿ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ ಅವರು ಭಾರತ ಅಂಡರ್ -19 ಎ ತಂಡವನ್ನು ಮುನ್ನಡೆಸಿದರು. ವಿಹಾನ್ ಮಲ್ಹೋತ್ರಾ ದಂತಕಥೆ ವಿರಾಟ್ ಕೊಹ್ಲಿ ಮತ್ತು ಭಾರತದ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಅವರಿಂದ ಸ್ಪೂರ್ತಿ ಪಡೆದಿದ್ದಾರೆ.
2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಆಡಲಿರುವ ಮಲ್ಹೋತ್ರಾ
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿಹಾನ್ ಮಲ್ಹೋತ್ರಾ ಅವರನ್ನು 30 ಲಕ್ಷ ರು. ಮೂಲ ಬೆಲೆಗೆ ಖರೀದಿಸಿತ್ತು. ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಮೊದಲೇ ವಿಹಾನ್ ಅವರನ್ನು ಆರ್‌ಸಿಬಿ ಖರೀದಿಸಿದೆ. ಇದೀಗ ಜಿಂಬಾಬ್ವೆ ವಿರುದ್ಧ ಶತಕ ಬಾರಿಸುವ ಮೂಲಕ ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್‌ಗೆ ವಿಶ್ವಾಸವನ್ನು ಮೂಡಿಸಿದ್ದಾರೆ.