ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs CSK: ʻಎರಡನೇ ಐಪಿಎಲ್‌ ಟ್ರೋಫಿ ಗೆಲ್ಲುವುದು ನಮ್ಮ ಗುರಿʼ-ಜಿತೇಶ್‌ ಶರ್ಮಾ!

RCB vs CSK: ಭಾನುವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸಜ್ಜಾಗುತ್ತಿದೆ. ಈ ಪಂದ್ಯದ ನಿಮಿತ್ತ ಮಾತನಾಡಿದ ಆರ್‌ಸಿಬಿ ಉಪ ನಾಯಕ ಜಿತೇಶ್‌ ಶರ್ಮಾ, ಎರಡನೇ ಐಪಿಎಲ್‌ ಟ್ರೋಫಿಯನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ಸಿಎಸ್‌ಕೆ ಪಂದ್ಯಕ್ಕೂ ಮುನ್ನ ಜಿತೇಶ್‌ ಶರ್ಮಾ ಹೇಳಿಕೆ.

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ 17 ವರ್ಷಗಳ ಬಳಿಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಮೂಲಕ ದೀರ್ಘಕಾಲ ಕೋಟ್ಯಂತರ ಅಭಿಮಾನಿಗಳ ನಿದ್ರೆಗೆಡಿಸಿದ್ದ ಚೊಚ್ಚಲ ಕಪ್‌ ಎತ್ತಿ ಹಿಡಿದಿತ್ತು. ಇದೀಗ 2026ರ ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಲು ಬೆಂಗಳೂರು ಫ್ರಾಂಚೈಸಿ ಎದುರು ನೋಡುತ್ತಿದೆ. ಅದೇ ರೀತಿ ಆರ್‌ಸಿಬಿ ಉಪ ನಾಯಕ ಜಿತೇಶ್‌ ಶರ್ಮಾ (Jitesh Sharma) ಕೂಡ ಇದೇ ಮಾತನ್ನು ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ ಗುರಿ ಕಪ್‌ ಉಳಿಸಿಕೊಳ್ಳುವುದಲ್ಲ, ಎರಡನೇ ಕಪ್‌ ಗೆಲ್ಲುವುದು ಎಂದು ಮ್ಯಾಚ್‌ ಫಿನಿಷರ್‌ ಶಪಥ ಮಾಡಿದ್ದಾರೆ.

ಸಿಎಸ್‌ಕೆ ವಿರುದ್ಧದ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿತೇಶ್‌ ಶರ್ಮಾ, "ಸ್ಪಷ್ಟವಾಗಿ ಹೇಳಬೇಕೆಂದರೆ, ಅದು ಅಪ್ರಸ್ತುತ. ನಮ್ಮ ಡೈರೆಕ್ಟರ್‌ ಮೊ ಬೊಬಟ್‌ ಅವರು ಸ್ಪಷ್ಟವಾಗಿ ಹೇಳಿದ್ದಾರೆ, ನಾವು ಕಪ್‌ ಉಳಿಸಿಕೊಳ್ಳುವುದು ನಮ್ಮ ಗುರಿಯಲ್ಲ. ನಮ್ಮ ಗುರಿ ಎರಡನೇ ಕಪ್‌ ಗೆಲ್ಲುವುದು. ಕಳೆದ ವರ್ಷದಂತೆ ಈ ವರ್ಷವು ನಾವು ಕಪ್‌ ಗೆಲ್ಲುವ ಉತ್ಸಾಹದಲ್ಲಿದ್ದೇವೆ. ನಾವು ಚಾಂಪಿಯನ್ಸ್‌ ಎಂಬುದು ಎಲ್ಲರೂ ಮರೆತಿದ್ದಾರೆ," ಎಂದು ಹೇಳಿದ್ದಾರೆ.

IPL 2026: 500 ರನ್‌ಗಳ ಜೊತೆಯಾಟವನ್ನು ಆಡಿ ಎಲೈಟ್‌ ಲಿಸ್ಟ್‌ ಸೇರಿದ ವೈಭವ್‌-ಜೈಸ್ವಾಲ್‌ ಜೋಡಿ!

"ಇದು ನಮ್ಮ ಹೊಸ ಸೀಸನ್. ನಾವು ಹೊಸ ಪಂದ್ಯವನ್ನು ಆರಂಭಿಸಬೇಕಾಗಿದೆ ಹಾಗೂ ಏಕೈಕ ಸಮಯದಲ್ಲಿ ಒಂದೊಂದು ಪಂದ್ಯವನ್ನು ತೆಗೆದುಕೊಳ್ಳಲಿದ್ದೇವೆ. ನಾವು ಕೆಲ ಸಾಧನೆಗಳನ್ನು ಮಾಡಿದ್ದೇವೆಂಬ ಬಗ್ಗೆ ವಿಶ್ವಾಸವಿದ್ದೇವೆ. ಈ ವಿಶ್ವಾಸವನ್ನು ನಾವು, ಮುಂದಕ್ಕೆ ಹೋಗುತ್ತಿದ್ದೇವೆ," ಎಂದು ಆರ್‌ಸಿಬಿ ಉಪ ನಾಯಕ ತಿಳಿಸಿದ್ದಾರೆ.

ನಾಯಕತ್ವದ ಜವಾಬ್ದಾರಿ ಬಗ್ಗೆ ಜಿತೇಶ್‌ ಶರ್ಮಾ

ತಮ್ಮ ನಾಯಕತ್ವದ ಜವಾಬ್ದಾರಿಯ ಬಗ್ಗೆ ಮಾತನಾಡಿದ ಅವರು, "ಯಾವಾಗಲಾದರೂ ನಿಮಗೆ ಜವಾಬ್ದಾರಿ ಸಿಕ್ಕಾಗ, ಆಗ ನೀವು ಕೃತಜ್ಞತೆ ಮತ್ತು ಗೌರವದ ಭಾವನೆ ಹೊಂದಿರುತ್ತೀರಿ. ನಾನು ನನ್ನ ತಂಡಕ್ಕೆ ಏನಾದರೂ ಕೊಡುಗೆ ನೀಡಲು ಮತ್ತು ಆರ್‌ಸಿಬಿಗೆ ಹೇಗೆ ಸಹಾಯ ಮಾಡಬಹುದು ಎಂಬುದಕ್ಕೆ ಹೆಚ್ಚುವರಿ ಪ್ರಯತ್ನ ಮಾಡುತ್ತೇನೆ. ತಂಡದ ಉಪನಾಯಕನಾಗಿರುವಾಗ ಅದು ನಿಮಗೆ ಇನ್ನಷ್ಟು ಜವಾಬ್ದಾರಿಯನ್ನು ನೀಡುತ್ತದೆ,” ಎಂದು ಜಿತೇಶ ಶರ್ಮಾ ವಿವರಿಸಿದ್ದಾರೆ.