ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs DC: ʻಅವರು ಕೇವಲ ಮೂವರನ್ನು ಅವಲಂಬಿಸಿದ್ದಾರೆʼ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಿತೇಶ್‌ ಶರ್ಮಾ ವಾರ್ನಿಂಗ್‌!

Jitesh Sharma Warns To Delhi Capitals: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಏಪ್ರಿಲ್‌ 10 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರ್‌ಸಿಬಿ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಿತೇಶ ಶರ್ಮಾ ಎಚ್ಚರಿಕೆ.

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಏಪ್ರಿಲ್‌ 10ರಂದು ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 24ನೇ ಪಂದ್ಯದ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers bengaluru) ತಂಡದ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ (jitesh Sharma) ಎಚ್ಚರಿಕೆ ನೀಡಿದ್ದಾರೆ. ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೇವಲ ಮೂವರು ಆಟಗಾರರನ್ನು ಮಾತ್ರ ಅವಲಂಬಿಸಿದೆ . ಇದು ಎದುರಾಳಿ ತಂಡದ ವೀಕ್ನೆಸ್‌ ಎಂದು ಆರ್‌ಸಿಬಿ ಆಟಗಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಸೋತಿದ್ದು, ಇನ್ನುಳಿದ ಮೂರೂ ಪಂದ್ಯಗಳನ್ನು ಗೆದ್ದಿದೆ. ಆದರೆ, ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿತೇಶ್‌ ಶರ್ಮಾ, ಆರ್‌ಸಿಬಿ ತಂಡ ಡೆಲ್ಲಿಗಿಂತ ಮೇಲುಗೈ ಸಾಧಿಸಿದೆ ಏಕೆಂದರೆ, ಬೇರೆ ಸ್ಥಳಗಳಲ್ಲಿ ಎದುರಾಗಿದ್ದ ಕಠಿಣ ಪರಿಸ್ಥಿತಿಗಳಲ್ಲಿ ಗೆಲುವು ಪಡೆದಿದೆ. ಬ್ಯಾಟಿಂಗ್‌ ಲೈನ್‌ ಅಪ್‌ನಲ್ಲಿ ಪ್ರತಿಯೊಬ್ಬರೂ ಮಿಂಚುತ್ತಿದ್ದಾರೆ. ಆದರೆ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ಕೇವಲ ಮೂವರು ಆಟಗಾರರನ್ನು ಅವಲಂಬಿಸಿದೆ ಎಂಬುದು ಆರ್‌ಸಿಬಿ ವಿಕೆಟ್‌ ಕೀಪರ್‌ನ ಅನಿಸಿಕೆಯಾಗಿದೆ.

RCB vs DC: ಆರ್‌ಸಿಬಿ-ಡೆಲ್ಲಿ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೀಗಿದೆ

"ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕಿಂತ ನಾವು ಒಂದು ಕೈ ಮೇಲಿದ್ದೇವೆ ಏಕೆಂದರೆ ನಾವು ಹೊರಗಿನ ಪಂದ್ಯಗಳನ್ನು ಗೆದ್ದಿದ್ದೇವೆ ಹಾಗೂ ನಮ್ಮ ಪಾಲಿಗೆ ಇವು ವಿಭಿನ್ನ ಪಂದ್ಯಗಳಾಗಿದ್ದವು. ನಮ್ಮ ಬ್ಯಾಟಿಂಗ್‌ ಲೈನ್‌ ಅಪ್‌ ಕೂಡ ಚೆನ್ನಾಗಿದೆ ಹಾಗೂ ಪ್ರತಿಯೊಬ್ಬರೂ ಮಿಂಚುತ್ತಿದ್ದಾರೆ. ಆದರೆ, ಡಿಸಿ ತಂಡದಲ್ಲಿ ಕೇವಲ ಮೂವರು ಆಟಗಾರರು ಮಾತ್ರ ಆಡುತ್ತಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ನಮಗೆ ಒಳ್ಳೆಯ ಸವಾಲು ಎದುರಾಗಲಿದೆ,"ಎಂದು ಜಿತೇಶ್‌ ಶರ್ಮಾ ತಿಳಿಸಿದ್ದಾರೆ.

ನಾವು ಬುದ್ದಿವಂತಿಕೆಯ ಕ್ರಿಕೆಟ್‌ ಆಡುತ್ತಿದ್ದೇವೆ: ಜಿತೇಶ್‌ ಶರ್ಮಾ

ಆರ್‌ಸಿಬಿ ಸ್ಮಾರ್ಟ್‌ ಕ್ರಿಕೆಟ್‌ ಆಡುತ್ತಿದೆ ಎಂದು ಜಿತೇಶ್‌ ಶರ್ಮಾ ತಿಳಿಸಿದ್ದಾರೆ. ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೂ ನಿರ್ದಿಷ್ಟ ಬೌಲರ್‌ ಎದುರು ಟಾರ್ಗೆಟ್‌ ನೀಡಲಾಗುತ್ತದೆ ಎಂದು ಆರ್‌ಸಿಬಿ ತಂಡದ ತಂತ್ರಗಾರಿಕೆಯ ಬಗ್ಗೆ ವಿಕೆಟ್‌ ಕೀಪರ್‌ ತಿಳಿಸಿದ್ದಾರೆ. ಬ್ಯಾಟ್ಸ್‌ಮನ್‌ಗಳು ಕುರುಡು ಭಾವನೆಯಿಂದ ಆಡಲು ಎದುರು ನೋಡುವುದಿಲ್ಲವೆಂದು ಅವರು ತಿಳಿಸಿದ್ದಾರೆ.

"ನಾವು ಸ್ಮಾರ್ಟ್‌ ಕ್ರಿಕೆಟ್‌ ಆಡುತ್ತಿದ್ದೇವೆ ಹಾಗೂ ಪ್ರತಿಯೊಬ್ಬ ಬೌಲರ್‌ ವಿರುದ್ಧವೂ ನಾವು ಆಡುತ್ತೇವೆ. ಪ್ರತಿಯೊಬ್ಬರ ಸಾಮರ್ಥ್ಯದ ಬಗ್ಗೆ ನಮಗೆ ತಿಳಿದಿದೆ ಹಾಗೂ ಟೀಮ್‌ ಮ್ಯಾನೇಜ್‌ಮೆಂಟ್‌ ಕೂಡ ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಜವಾಬ್ದಾರಿಯನ್ನು ನೀಡಿದೆ. ಅಂದರೆ ಜಿತೇಶ್‌ ಶರ್ಮಾ ಇಂಥಾ ಬೌಲರ್‌ಗೆ ಟಾರ್ಗೆಟ್‌ ಮಾಡಬೇಕು ಹಾಗೂ ಇತರೆ ಆಟಗಾರರು ಬೇರೆ ಬೌಲರ್‌ಗಳನ್ನು ಟಾರ್ಗೆಟ್‌ ಮಾಡಬೇಕು ಎಂಬಂತೆ. ನಾವು ಕುರುಡರಾಗಿ ಪ್ರಾಬಲ್ಯ ಸಾಧಿಸಲು ಹೋಗುತ್ತಿಲ್ಲ. ನಾವು ಯಾವುದೇ ಮಾಂತ್ರಿಕ ಮದ್ದು ಕುಡಿಯುತ್ತಿದ್ದೇವೆ ಅಂತ ಅಲ್ಲ. ನಾವು ಕೇವಲ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದೇವೆ," ಎಂದು ಜಿತೇಶ್‌ ಶರ್ಮಾ ಹೇಳಿದ್ದಾರೆ.

IPL 2025: ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ; ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ

ಶುಭಾರಂಭ ಕಂಡಿರುವ ಆರ್‌ಸಿಬಿ

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಶುಭಾರಂಭ ಕಂಡಿದೆ. ಕೋಲ್ಕತಾ ನೈಟ್‌ ರೈಡರ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದಿದ್ದ ಆರ್‌ಸಿಬಿ, ನಂತರ ಮೂರನೇ ಪಂದ್ಯದಲ್ಲಿ ಬೆಂಗಳೂರಿನಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಸೋಲು ಅನುಭವಿಸಿತ್ತು.ಆದರೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಗೆಲುವು ಪಡೆದಿತ್ತು. 6 ಅಂಕಗಳಿಂದ ಬೆಂಗಳೂರು ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ.