ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Virat Kohli 9000 Runs: ಐಪಿಎಲ್‌ ಟೂರ್ನಿಯಲ್ಲಿ ದೊಡ್ಡ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 11 ರನ್ ಗಳಿಸಿದ ಬಳಿಕ ವಿರಾಟ್ ಕೊಹ್ಲಿ ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೃತ್ತಿ ಜೀವನದಲ್ಲಿ 9,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಈ ಮೈಲುಗಲ್ಲು ತಲುಪಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಭಾರತದಲ್ಲಿ 10,000 ಟಿ20 ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಅವರು ಮತ್ತೊಂದು ಅಪರೂಪದ ದಾಖಲೆಯನ್ನು ಬರೆದಿದ್ದಾರೆ.

9000 ಐಪಿಎಲ್‌ ರನ್‌ ಪೂರ್ಣಗೊಳಿಸಿದ ವಿರಾಟ್‌ ಕೊಹ್ಲಿ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಈಗಾಗಲೇ ಅನೇಕ ದಾಖಲೆಗಳನ್ನು ಬರೆದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) ಇದೀಗ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ಏಪ್ರಿಲ್‌ 27 ರಂದು ಸೋಮವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ 2026ರ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 9000 ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಈ ದಾಖಲೆ ಬರೆದ ಮೊದಲ ಬ್ಯಾಟ್ಸ್‌ಮನ್‌ ಎಂಬ ದೊಡ್ಡ ದಾಖಲೆಯನ್ನು ಕಿಂಗ್‌ ಕೊಹ್ಲಿ ಬರೆದಿದ್ದಾರೆ.

ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ತಮ್ಮ ಇನಿಂಗ್ಸ್‌ನಲ್ಲಿ 11ನೇ ರನ್ ಗಳಿಸಿದ ಬಳಿಕ ವಿರಾಟ್‌ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 9,000 ರನ್‌ಗಳನ್ನು ಪೂರ್ಣಗೊಳಿಸಿದರು. ಈ ಪಂದ್ಯ ಪ್ರಾರಂಭವಾಗುವುದಕ್ಕೂ ಮುನ್ನ ವಿರಾಟ್ ಕೊಹ್ಲಿ 8,989 ರನ್‌ಗಳನ್ನು ಗಳಿಸಿದ್ದರು. ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 81 ರನ್‌ಗಳ ಅಬ್ಬರದ ಇನಿಂಗ್ಸ್ ಆಡಿದ ಅವರು, ಈ ಅದ್ಭುತ ಸಾಧನೆಗೆ ಹತ್ತಿರವಾಗಿದ್ದರು. ‌

RCB vs DC: ಭುವನೇಶ್ವರ್‌, ಹೇಝಲ್‌ವುಡ್‌ ಮಾರಕ ದಾಳಿ, ಆರ್‌ಸಿಬಿಗೆ ಸುಲಭ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್‌!

ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಅವರು ತಮ್ಮ 11ನೇ ರನ್ ಪೂರ್ಣಗೊಳಿಸಿದ ಕ್ಷಣ, ಇಡೀ ಕ್ರೀಡಾಂಗಣವು "ಕೊಹ್ಲಿ! ಕೊಹ್ಲಿ!" ಎಂಬ ಘೋಷಣೆಗಳಿಂದ ತುಂಬಿತ್ತು. 2008 ರಲ್ಲಿ ಐಪಿಎಲ್ ಆರಂಭದೊಂದಿಗೆ ಪ್ರಾರಂಭವಾದ ಈ ಪ್ರಯಾಣವು 2026ರಲ್ಲಿ ಪರಾಕಾಷ್ಠೆಯನ್ನು ತಲುಪಿದೆ. ಸದ್ಯಕ್ಕೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಇನ್ನೂ 9000 ರನ್‌ಗಳನ್ನು ಗಳಿಸಿಲ್ಲ.



ಅಗ್ರ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಈ ಪಂದ್ಯದ ಚೇಸಿಂಗ್‌ನಲ್ಲಿ ಅಜೇಯ 23 ರನ್‌ ಗಳಿಸಿದರು. ಆ ಮೂಲಕ ಅವರು ಸದ್ಯ ಐಪಿಎಲ್‌ ವೃತ್ತಿ ಜೀವನದಲ್ಲಿ 275 ಪಂದ್ಯಗಳಲ್ಲಿ 40.05ರ ಸರಾಸರಿ ಹಾಗೂ 133.81ರ ಸ್ಟ್ರೈಕ್‌ ರೇಟ್‌ನಲ್ಲಿ 9012 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 8 ಶತಕಗಳು ಮತ್ತು 66 ಅರ್ಧಶತಕಗಳನ್ನು ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೋಹಿತ್‌ ಶರ್ಮಾ (7,183 ರನ್‌ಗಳು) ಇದ್ದಾರೆ.

RCB vs DC: 8 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್!

10,000 ಟಿ20 ರನ್‌ಗಳನ್ನು ಪೂರ್ಣಗೊಳಿಸಿ ಕೊಹ್ಲಿ

ಈ ಪಂದ್ಯದಲ್ಲಿ ವಿರಾಟ್ 9,000 ಐಪಿಎಲ್ ರನ್‌ಗಳ ಮೈಲುಗಲ್ಲು ತಲುಪಿದ್ದಲ್ಲದೆ, ಭಾರತದ ನೆಲದಲ್ಲಿ 10,000 ಟಿ20 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಏಕೈಕ ದೇಶದೊಳಗೆ ಇಷ್ಟು ದೊಡ್ಡ ಸಂಖ್ಯೆಯ ಟಿ20 ರನ್‌ಗಳನ್ನು ಗಳಿಸಿದ ವಿಶ್ವದ ಅಪರೂಪದ ಬ್ಯಾಟ್ಸ್‌ಮನ್‌ಗಳ ಗಣ್ಯರ ಶ್ರೇಣಿಗೆ ಅವರು ಈಗ ಸೇರಿದ್ದಾರೆ. ಕಳೆದ 18–19 ವರ್ಷಗಳಲ್ಲಿ ಅವರ ಕಠಿಣ ಪರಿಶ್ರಮ, ಫಿಟ್‌ನೆಸ್ ಮತ್ತು ಸ್ಥಿರತೆಗೆ ಇದು ಸಾಕ್ಷಿಯಾಗಿದೆ.